ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಸವಳಿ ಕಥ. ದಿಂದ ಮೇಲಕ್ಕೆ ಬಂದು ಉಪ್ಪರಿಗೆ ಬಂದುದು, ಅದರಲ್ಲಿ ಒಬ್ಬ ಸೀಮಂ ತಿನಿಯೆಂಬ ನಿಯು ಇದ್ದಳು. ಅವಳು ಹೇಗಿದ್ದಳೆಂದರೆ- ಮುತ್ತಿನ 1ಕಂಠಮಾಲೆಯಲ್ಲಿ 1 ರತ್ನವಿದ್ದಂತೆ, ತಾರೆಗಳ ಮಧ್ಯೆ ಚಂದ್ರನಿದ್ದಂತೆ, ನಯ ನದಲ್ಲಿ ಆಲೆಯಿದ್ದಂತೆ, ಮುಗಿಲಲ್ಲಿ ಮಿಂಚು ಹೊಳೆದಂತೆ, ಇಂಥ ಲಾವಣ್ಯ ವತಿಯಂ ಕಂಡೆ ಎನ್ನಲಾಗಿ; ರಾಯನು ವಿಸ್ಮಿತನಾಗಿ ತೋಲು ಎಂದನು. ರಾಯನು ಅವನ ಕರೆದುಕೊಂಡು ಆಕಾಶಮಾರ್ಗದಲ್ಲೇ ಅಂಬುಧಿಗೆ ಹೋಗಿ, ಶಂಖಪಾಲನೆಂಬ ನಾಗೇಂದ್ರನ ಅರಮನೆಯೊಳು ಆಸೀಮಂತಿನಿ ಯಂ ಕಂಡು, ಅವಳ ಕಡೆ ಪಗಡೆಯಾಡಿ, ಅವಳ ಸೋಲಿಸಿದ ಕಾರಣ, ಅವಳು ರಾಯನ ಕೈವಿಡಿದು-ನೀನು ಯಾರು ? ನಿನ್ನ ಹೆಸರೇನು ? ಎಂದು ಕೇಳಲಾಗಿ ; ನನ್ನ ಹೆಸರು ವಿಕ್ರಮಾದಿತ್ಯರಾಯನೆಂದು ಹೇಳಿ, ಆ ಬಳಕ-ನೀನಾರು ? ನಿನ್ನ ಹೆಸರೇನು ? ಎನ್ನಲಾಗಿ ; ಶಂಖಪಾಲನಾಗೇಂ ದನ ಮಗಳು, ನನ್ನ ಹೆಸರು ಸೀಮಂತಿನಿ, ನನ್ನ ತಂದೆ ನಿನಗೆ ಬೇಕಾದ ಪುರುಷನ ಭೂಲೋಕದಲ್ಲಿ ನೋಡಿಕೊ ಎಂದು ನನಗೆ ಹನ್ನೆರಡು ನೆಲೆಯ ಉಪ್ಪರಿಗೆಯಂ ಕಟ್ಟಿಸಿ ಕೊಟ್ಟಿರುವ ನಿಮಿತ್ತ ದಿನವೊಂದಕ್ಕೆ ಬಂದು ವೇಳೆ ಸಮುದ್ರದ ಮೇಲೆ ಬಂದು ಹೋಗುತ್ತಿದ್ದೆ. ಈಗಿನ ನನ್ನ ಪುಣ್ಯದಿಂದ ನಿನ್ನಂಥ ಪುರುಷರತ್ನ ದೊರಕಿತು, ಎಂದು ರಾಯನ ತನ್ನ ತಂದೆಯ ಬಳಿಗೆ ಬಾರೆಂದು ಕರೆದುಕೊಂಡು ಹೋಗಿ, ಅವಳಂತೆಂದಳು:-ಎ ಪಿತನೇ ? ಈ ಪುರುಷರತ್ನ ನಿಮ್ಮ ಆಯನೆಂದು ತೋಜಿಸಲಾಗಿ ; ಆಶಂಖಪಾಲನಾ ಗೇಂದ್ರ ರಾಯನ ಲಾವಣ್ಯವಂ ಕಂಡು ಸಂತೋಷಚಿತ್ತನಾಗಿ-ನಿನಗೀತ ನೋದ್ರೆ ? ಎಂದು ಮಗಳ ಕೇಳಲಾಗಿ ; ಅವಳು-ಈತನೇ ಪತಿ, ನಾನೇ ಸತಿ, ಎಂದ ಮಾತು ಕೇಳಿ, ರಾಯನು ಅವಳ ಸುಲಗ್ನದಲ್ಲಿ ಧಾರೆಯೆರೆದು ವಿವಾಹವಂ ಮಾಡಿ, ಮಗಳಿಗೆ ಅಷ್ಮೆಕೃರವಂ ಕೊಟ್ಟು, ಗರುಡೋದ್ದಾರಿ ಲೋಕೋಪಕಾರಿ ರತ್ನವಂ ಅಳಿಯನಿಗೆ ಕೊಟ್ಟು, ಅರತ್ನದ ಫಲವಂ ಹೇಳಿ ದನು. ಅದೇನೆಂದರೆ-ಇದು ರಸರಸಾಯನಪಂಚಶಾಕಪರಮಾನ್ನ ಕೊಡುವು ದೆಂದು ಗರುಡ ಮಂತ್ರಸಿದ್ದಿ ಯಂ ಹೇಳಿ, ಆನೆಲವಾಡದಲ್ಲಿ ಕುಳ್ಳಿರಿಸಿ, ದಂ ಪಾ-1: ಖಂಡದಲ್ಲಿ. 2. ಕಣ್ಣಿನೊಳು ಎಲೆ ಇಪ್ಪಂತೆ. 3. ಆಗಿರಿ ಮಾಡದೆ ಬಳಬಂಕ,