________________
ಬಾಳ ಪ್ರೇಮ ಮಧ್ಯೆಯೆ ತೋಳವೊಂದರ ಮಾಸಲು ತಲೆ ಕಾಣಿಸಿತು. ಈ ಪ್ರಾಣಿಯ ಕಿವಿ ಬೇರೆಯ ತೋಳಗಳ ಕಿವಿಯಷ್ಟು ನಿಮಿರಿ ನಿಂತಿರಲಿಲ್ಲ. ಮಂದದೃಷ್ಟಿಯ ಕಣ್ಣುಗಳು ರಕ್ತದಿಂದ ಕೆಂಪೇರಿದ್ದವು. ಆ ತೋಳವನ್ನು ಎಲ್ಲರೂ ಕೈ ಬಿಟ್ಟಂತೆ ಕಂಡಿತು. ಆದ್ದರಿಂದಲೇ ಅದರ ತಲೆ ಜೋತು ಬಿದ್ದಿತ್ತು. ಸೂರ್ಯ ಕಿರಣ ವನ್ನು ತಡೆಯಲಾರದೆ, ಒಂದೇ ಸಮನೆ, ಪಟಪಟನೆ ಎವೆಯಿಕ್ಕುತಿತ್ತು. ಖಾಯಿಲೆಯಿಂದ ನರಳುತ್ತಿರುವಂತೆ ತೋರಿತು. ಮನುಷ್ಯನು ಆ ಕಡೆ ನೋಡುತ್ತಿದ್ದ ಹಾಗೆಯೆ, ಪ್ರಾಣಿಯು ಮತ್ತೆ ಮತ್ತೆ ಕೆಮ್ಮತೊಡಗಿತು. ಇದಂತೂ ವಾಸ್ತವ ಪ್ರಪಂಚಕ್ಕೆ ಸೇರಿದ್ದು ; ಎದುರಿನಲ್ಲೇ ನಿಂತು ಕೆಮ್ಮುತ್ತಿರುವ ತೋಳವನ್ನು ಇಲ್ಲವೆಂದು ಯಾರು ತಾನೆ ಹೇಳಬಲ್ಲರು ?........ ಪಕ್ಕಕ್ಕೆ ತಿರುಗಿದನು. ಈಗಲೂ ವಾಸ್ತವಿಕತೆಯನ್ನು ತೋರಿಸುತ್ತಿರುವ ಸಾಗರವಿದೆ. ಆದರೆ ಒಂದು ಕಣ ಹಿಂದೆ ಅದು ತನ್ನ ಮಬ್ಬು ದೃಷ್ಟಿಯ ಮುಸುಕಿನಲ್ಲಿ ಅಡಗಿ ಹೋಗಿತ್ತು. ಸಾಗರವು ದೂರ ದೂರ ಹರಡಿದ್ದರೂ, ಇನ್ನೂ ಬೆಳಗುತ್ತಲಿದೆ. ಹಡಗನ್ನು ಕೂಡ ಪರಿಶ್ರಮವಿಲ್ಲದೆ ಗುರುತಿಸಬಹುದು. ಕಡೆಗೂ, ಇವೆಲ್ಲವನ್ನೂ ವಾಸ್ತವವೆಂದು ಒಪ್ಪಬಹುದಷ್ಟೆ ?......... ಬಹಳ ಹೊತ್ತು ಕಣ್ಣು ಮುಚ್ಚಿಕೊಂಡು ಯೋಚಿಸಿದನು. ಆಗ ಸರಿ ತೋರುವಂಥ ಮಾರ್ಗ ಹೊಳೆಯಿತು. ಇಲ್ಲಿಯ ತನಕ ತಾನು ಮಾಡಿರು ದೇನು ? ಪೂರ್ವದಿಂದ ಉತ್ತರದ ಕಡೆ ಪ್ರಯಾಣ ಮಾಡಿದ್ದಾಯಿತು. ಡೀಸ್ ವಿಭಾಗಕ್ಕೂ ತನಗೂ ಬಹಳ ಅಂತರವೇರ್ಪಟ್ಟಿದೆ. ತಾನು ನಡೆದು ಬಂದ ದಾರಿಯೇ ಕಾಪರ್‌ಮೈನ್ ಕಣಿವೆ. ಆ ಮಂದಗಾವಿ ನದಿಯೇ ಕಾಪರ್ ಮೈನ್ ! ಎದುರಿಗೆ ಹೊಳೆಯುತ್ತಿರುವುದೇ ಉತ್ತರ ಸಾಗರ! ಆ ಹಡಗು ದಾರಿ ತಪ್ಪಿದ ಬೇಟೆಯ ಹಡಗು ! ಅದು ಮೆಕೆನ್ಸಿ ದಡದಿಂದ ಪೂರ್ವಾಭಿ ಮುಖವಾಗಿ ಪ್ರಯಾಣ ಹೊರಟರಬೇಕು. ಈಗ ಲಂಗರು ಹಾಕಿ ನಿಂತಿರುವ ಜಲಭಾಗವೇ ಕಾರೊನೇಷನ್ ಕೊಲ್ಲಿ !........ ಅವನು ಹಡ್ರನ್ ಬೇ ಕಂಪೆನಿಯ ಸಮುದ್ರ ಪಟವನ್ನು ಅನೇಕ ವರ್ಷ ಗಳ ಹಿಂದೆ ನೋಡಿದ್ದನು. ಈಗ ಅದನ್ನು ಜ್ಞಾಪಿಸಿಕೊಂಡು ಸಂಪೂರ್ಣ ಪ್ರಯೋಜನ ಪಡೆದನು. ಎಲ್ಲಕ್ಕೂ ಸ್ಪಷ್ಟವಾದ ತರ್ಕಬದ್ಧವಾದ ಸಮಾಧಾನ ದೊರಕಿತು.