________________
ಬಾಳ ನಿಯಮ ಸಮಾಧಾನದಿಂದಲೇ ನಸುನಗು ಬೀರಿದನು. “ ಎಷ್ಟಾದರೂ ನೀನು ನನ್ನ ಮಗ, ನನ್ನಷ್ಟು ಕಾಲ ನೀನು ಈ ಸೀಮೆಯಲ್ಲಿ ಜೀವಿಸಿಲ್ಲ; ನನ್ನಂತೆ ಮೊಲದ ಹೆಜ್ಜೆ ಗುರುತುಗಳನ್ನು ಅನುಸರಿಸಿ, ಸಾಲ್ಮನ್ ಮಿಾನುಗಳನ್ನು ತಿಂದಿಲ್ಲ. ವಯಸ್ಸು ಆದಂತೆ ನಿನಗೆ ಅನುಭವ ಬರದೆ ಇರಲಾರದು. ಆಗ ನಿನಗೇ ತಿಳಿಯುತ್ತದೆ: ಕ್ರಿಸ್‌ಮಸ್ ಬರುವುದು ಕೇವಲ ವರ್ಷಕ್ಕೊಮ್ಮೆ ; ಆಗ ಪಂಚ್ ಪಾನೀಯವಿಲ್ಲದಿದ್ದರೆ ಗೋರ್ಕಲ್ಲ ಮೇಲೆ ನೀರ ಸುರಿದಂತೆ ಎಂದು ...' “ಅಲ್ಲವೇ ? ಪಂಚ್ ಪಾನೀಯದ ಸ್ಪೂರ್ತಿಗಾಗಿ ವರ್ಷವಾದರೂ ಕಾಯಬೇಕು....” ಎಂದು ಜಿಮ್ ಬೆಲ್ಡನ್ ಎಂಬ ಭಾರಿ ಆಸಾಮಿಯೊಬ್ಬ ಅಂಗೀಕಾರದ ಮಾತನ್ನು ಪೋಣಿಸಿದ. ಆತ ಮೇಸಿಯೇ ಎಂಬ ಸ್ಥಳವನ್ನು ತನ್ನ ವಾಗಿ ಮಾಡಿಕೊಂಡಿದ್ದನ್ನು ಎಲ್ಲರಿಗೂ ಗೊತ್ತಿದ್ದಂತೆ, ಎರಡು ತಿಂಗ ಳಿಂದಲೂ ಅವನ ಆಹಾರ; ಕೇವಲ ಮೂಸ್ ಮಾಂಸ, ಕ್ರಿಸ್‌ಮಸ್ ಹಬ್ಬ ವನ್ನು ಆಚರಿಸಲು ಅಲ್ಲಿಂದ ಇಲ್ಲಿಗೆ ಬಂದಿದ್ದನು. ಮತ್ತೆ ಕೇಳಿದನು: “ಏನಯ್ಯಾ ನಾವು 'ತನಾನ' ದಲ್ಲಿ ಮಾಡಿದ ಮದ್ಯ ಮರೆತುಹೋಯಿತೆ ?.... “ಇಲ್ಲ, ಇಲ್ಲ. ನಾನು ಜ್ಞಾಪಿಸಿಕೊಂಡು ಹೇಳಬಲ್ಲೆ.... ಹುಡುಗರಿರಾ, ಆಗ ನೀವು ಇದ್ದಿದ್ದರೆ, ನಿಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ ! ಇಡೀ ಒಂದು ಜನಾಂಗ ಕುಡಿದು ಹೋರಾಡುವುದೆಂದರೆ ಸಾಮಾನ್ಯವೇ? ಹೂಚ್ ಮದ್ಯ ಉಕ್ಕೇರಿಬರುತಿತ್ತು. ಹುಳಿ ಹಿಡಿಯುತಿದ್ದಂತೆ ಎಲ್ಲರೂ ಆನಂದ ಸಾಗರದಲ್ಲಿ ತೇಲಿ, 'ಎಷ್ಟು ಭವ್ಯವಾಗಿದೆ !' ಎಂದು ಕೂಗಾಡ ಹತ್ತಿದರು. ಅದು ನಡೆದದ್ದು ನಿನ್ನ ಕಾಲಕ್ಕಿಂತಲೂ ಮುಂಚೆ....” ಎಂದು ಮೇಲ್ನ ವ್ಯಾಟ್ ಕಿಡ್, ಸ್ಪಾನಿ ಪ್ರಿನ್ಸ್ನ ಕಡೆ ತಿರುಗಿ ಹೇಳಿದನು. ಸ್ಟಾನ್ಸಿ ಪ್ರಿನ್ಸ್ ಎರಡು ವರ್ಷಗಳ ಹಿಂದೆ ಅಲ್ಲಿಗೆ ಬಂದ ಯುವಕ. ಗಣಿಯ ಕೆಲಸಗಳಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಸಂಪಾದಿಸಿದ್ದನು. ಕಿಡ್ ಮುಂದುವರಿದು, “ ಆ ಸ್ಥಳದಲ್ಲಿ ಆಗ ಒಬ್ಬ ಬಿಳಿಯ ಹೆಂಗಸೂ ಇರಲಿಲ್ಲ ! ಆದರೆ ಮೇನನ್ ಮದುವೆ ಮಾಡಿಕೊಳ್ಳಬೇಕೆಂದು ಹಟ ಹಿಡಿದನು. ಠಕ್ ಮಹಾಶಯನ ತಂದೆಯೇ ತನಾನ ಜನಾಂಗದ ಮುಖ್ಯಸ್ಥನಾಗಿದ್ದನು ; ಇತರ ಸದಸ್ಯರಂತೆ ಅವನು ಕೂಡ ಮದುವೆಯ ಪ್ರಸ್ತಾಪದಲ್ಲಿ ಆಸಕ್ತಿ ವಹಿಸ ಲಿಲ್ಲ. ಅಷ್ಟೇ ಅಲ್ಲ ; ಪ್ರತಿಭಟನೆಯನ್ನು ಸೂಚಿಸಿದನು. ಎಷ್ಟಾದರೂ ಬಿಗು ಮಾನದ ಮನುಷ್ಯ ! ಹೇಗಾದರೂ ಮಾಡಿ ಅವನ ಮನಸ್ಸನ್ನು ತಿರುಗಿಸಬೇಕಾ ಗಿತ್ತು....ನನ್ನ ಜೀವಮಾನದಲ್ಲೇ ಮಾಡದ ಅತ್ಯಂತ ಒಳ್ಳೆಯ ಕಾರ್ಯವನ್ನು