________________
ಹಿಂಬಾಲಕನಿಗೆ ೧೧೯ ಗಡಿಯಾರದ ಕಡೆಯೇ ಅವನ ಕಣ್ಣಿತ್ತು. ಕೈಗವಸನ್ನು ತೂರಿಸಿಕೊಂಡು ಬೀವರ್ ಚರ್ಮದ ಟೊಪ್ಪಿಗೆಯನ್ನು ತಲೆಗೇರಿಸಿದನು. ಜೋಪಡಿಯಿಂದ ಹೊರಬಂದು ಗುಪ್ತಸ್ಥಳದಲ್ಲಿ ಏನನ್ನೋ ಹುಡುಕಲು ತೊಡಗಿದ್ದನು. ಅವನು ಅಷ್ಟು ಹೊತ್ತಿನ ತನಕವೂ ಕಾಯಲಿಲ್ಲ; ಅತಿಥಿಯನ್ನು ಹದಿನೈದು ನಿಮಿಷಗಳು ಮುಂಚಿತವಾಗಿಯೆ ಎಬ್ಬಿಸಿಬಿಟ್ಟನು. ಜಾಕ್ ವೆಸ್ಸನ್ಡೇಲ್ ಯುವಕ ರಾಕ್ಷಸನಂತೆ ಕಂಡನು. ಆದರೂ ಅವನ ಕೈ ಕಾಲುಗಳು ಸೇರಿಹೋಗಿದ್ದವು. ಅವನ್ನು ಸರಿಪಡಿಸಲು ಜೋರಾಗಿ ತಿಕ್ಕಬೇಕಾಯಿತು. ನರಳುತಿದ್ದ ರೂ ತತ್ತರಿಸುತ್ತಾ ಜೋಪಡಿಯ ಹೊರಕ್ಕೆ ಬಂದು ನೋಡಿದನು. ನಾಯಿಗಳನ್ನು ಸೈಜ್ಜಿಗೆ ಹೂಡಲಾಗಿತ್ತು. ಹೊರಡಲು ಎಲ್ಲವೂ ಸಿದ್ಧವಾಗಿತ್ತು. ವಿಶ್ವಾಸಿಗಳು ಅವನಿಗೆ ಶುಭ ಕೋರಿದರು ; ಓಟದ ಪ್ರತಿಫಲ ಬೇಗ ಸಿಕ್ಕಲೆಂದು ಹಾರೈಸಿದರು. ಫಾದರ್ ರೂಬೊ ಆತುರದಿಂದ ಆಶೀರ್ವದಿಸಿ, ದಿಕ್ಕಾಪಾಲಾಗಿ ಓಡುತಿದ್ದ ಪ್ರಾಣಿಗಳನ್ನು ಜೋಪಡಿಯೊಳಕ್ಕೆ ನುಗ್ಗಿಸಿದನು. ಸೊನ್ನೆಗಿಂತಲೂ ಎಪ್ಪತ್ತುನಾಲ್ಕು ಡಿಗ್ರಿಗಳು ಕಡಿಮೆಯ ಶಾಖಾಂಶವಿರುವಾಗ ಬತ್ತಲೆಯ ಕೈ ಕಿವಿಗಳಲ್ಲಿ ಹೊರಡುವುದು ಸರಿಯಲ್ಲವೆಂದು ಹೇಳುತಿದ್ದನು. ಮೇಲ್ಮೂಟ್ ಕಿಡ್ ಮಾತ್ರ ಮುಖ್ಯ ಮಾರ್ಗದವರೆಗೆ ಹೊರಟದ ನು. ವಿಶ್ವಾಸದಿಂದ ಗಟ್ಟಿಯಾಗಿ ಅವನ ಕೈ ಹಿಡಿದು ಬುದ್ಧಿವಾದ ಹೇಳಿದನು : “ಸ್ಟೇಜ್ ಮೇಲೆ ನೂರು ಪೌಂಡುಗಳಷ್ಟು ಸಾಮನ್ ಮೊಟ್ಟೆಗಳಿವೆ. ಅದನ್ನು ಮರೆಯಬೇಡ. ನೀನು ತಿಳಿದಿರುವಂತೆ, ನಾಯಿಗಳಿಗೆ ಪೆಲ್ಲಿಯಲ್ಲಿ ಆಹಾರ ಸಿಗುವುದಿಲ್ಲ....” ಜಾಕ್ ಆಶ್ಚರ್ಯಪಟ್ಟನು. ಕಣ್ಣು ಮಿಂಚಿತು. ಆದರೆ ಮಾತನಾಡಲಿಲ್ಲ. “ಫೈವ್ ಫಿಂಗರ್ ಸೇರುವತನಕ ನಾಯಿಗಳಿಗಾಗಲಿ ಮನುಷ್ಯನಿಗಾಗಲಿ ಒಂದು ಔನ್ಸಿನಷ್ಟು ಆಹಾರವೂ ಸಿಗಲಾರದು. ಅಂದರೆ ಇನ್ನೂರು ಮೈಲಿಗಳು ಅದೇ ಗತಿ. ಮೊದಲು 'ಮೂವತ್ತು ಮೈಲು ನದಿಯ ನೀರನ್ನು ಕಾಣಬೇಕು; ಆಮೇಲೆ ಲೀ ಬಾರ್ಗ್ ಹತ್ತಿರ ತಿರುಗಬೇಕು....” “ಇದೆಲ್ಲ ನಿನಗೆ ಹೇಗೆ ಗೊತ್ತು ? ನನಗಿಂತಲೂ ಮುಂಚೆ ಸಮಾಚಾರ ಬಂದಿರಲಾರದು ; ಅದು ನಿಜ ತಾನೆ ?....” ಎಂದನು ಜಾಕ್, “ ತಿಳಿಯದು; ಅದಕ್ಕಿಂತಲೂ ಹೆಚ್ಚಾಗಿ ತಿಳಿದುಕೊಳ್ಳುವ ಅಪೇಕ್ಷೆಯೂ ಇಲ್ಲ. ಆದರೆ ನೀನು ಬೆನ್ನಟ್ಟಿ ಹೋಗುತ್ತಿರುವ ತಂಡ ಎಂದಿಗೂ ನಿನ್ನದಲ್ಲ. ಹೋದ ವಸಂತದಲ್ಲಿ ಸಿಕ್ಕ ಚಾಗ್ಗೆ ಅದನ್ನು ಆ ತಂಡದವರಿಗೆ ಮಾರಿಬಿಟ್ಟನು.