ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೆಕ್ಸಿಕನ್ ೧44 ಮೇಲೆ ಬಂಗಾರದ ನಾಣ್ಯಗಳನ್ನು ಇರಿಸುತಿದ್ದನು. ಮತ್ತೆ ದಿನ ವಾರಗಳ ಲೆಕ್ಕವಿಲ್ಲದೆ ಸಂಚುಕೂಟದವರೊಡನೆ ತನ್ನ ಎಲ್ಲ ಕಾಲವನ್ನೂ ವಿನಿಯೋಗಿಸು ತಿದ್ದನು. ಎಷ್ಟೋ ಬೆಳಗಿನ ಜಾವ ಇದ್ದಕ್ಕಿದ್ದಂತೆ ಮಾಯವಾಗಿ ಮಧ್ಯಾಹ್ನ ಮುಗಿಯುವ ತನಕ ಬರುತ್ತಿರಲಿಲ್ಲ. ಅವನು ಮಧ್ಯರಾತ್ರಿಯಲ್ಲಿ ಬರುತ್ತಿದ್ದು ದನ್ನು ಅರೆಲಾನೋ ನೋಡಿದ್ದನು ; ಆಗತಾನೆ ಗಾಯಗೊಂಡು, ಉಬ್ಬು ತಿದ್ದ ಗೆಣ್ಣುಗಳಿಂದ ನರಳಾಡುತ್ತಿದ್ದರೂ ಮೊಳೆ ಜೋಡಿಸುತ್ತಿದ್ದನಂತೆ; ಅಥವಾ ತುಟಿ ಹರಿದು ರಕ್ತ ಸುರಿಯುತ್ತಿದ್ದರೂ ಲಕ್ಷ್ಯ ಕೊಡುತ್ತಿರಲಿಲ್ಲವಂತೆ........ - II ಗಂಡಾಂತರ ಸಮಯ ಸವಿಾಪಿಸಿತು. ಸಂಚುಕೂಟದವರು ಕ್ರಾಂತಿಯ ಬೆಂಬಲಿಗರಾಗಿರಲಿ ಇಲ್ಲದಿರಲಿ, ಅವರಂತೂ ಕಷ್ಟಕ್ಕೊಳಗಾದರು. ಹಿಂದಿ ಗಿಂತಲೂ ಈಗ ಹಣದ ಅವಶ್ಯಕತೆ ಹೆಚ್ಚಾಗಿತ್ತು. ಆದರೆ ಅದರ ಸಂಪಾದನೆ ಮಾತ್ರ ಕಷ್ಟತರವಾಗಿತ್ತು. ದೇಶಾಭಿಮಾನಿಗಳು ತಮ್ಮಲ್ಲುಳಿದಿದ್ದ ಕೊನೆಯ ಸೆಂಟನ್ನೂ ಕೊಟ್ಟು ಬಿಟ್ಟರು ; ಇನ್ನು ಕೇಳಲು ಮಾರ್ಗವಿಲ್ಲ. ಸ್ಥಳ ಬದಲಾಯಿ ಸುತ್ತಿರುವ ಗ್ರಾ೦ಗ್ ಕೂಲಿಗಾರರು ಕೂಡ ಅಲ್ಪ ಸಂಬಳದ ಅರ್ಧಭಾಗವನ್ನು ದಾನ ಮಾಡುತಿದ್ದರು. ಆದರೆ ಮತ್ತಷ್ಟು ಬೇಕಾಗಿತ್ತು. ಏಕೆಂದರೆ, ಹೃದಯಭೇ ದಕವಾದ ಗುಪ್ತ ಕಾರ್ಯಾಚರಣೆಗಳು ಫಲಿಸತೊಡಗಿವೆ. ಸಕಾಲ ಒದಗಿ ಬಂದಿದೆ. ಕ್ರಾಂತಿಯು ತಕ್ಕಡಿಯಲ್ಲಿ ತೂಗಾಡುತ್ತಿದೆ. ಕೊನೆಯದಾದ ದಿಟ್ಟತನದ ಪ್ರಯತ್ನದಿಂದ ನೂಕಿದರೆ ಸಾಕು ; ಕ್ರಾಂತಿ ವಿಜಯದ ಗುರುತಿಗೆ ಬಂದು ನಿಲ್ಲುತ್ತದೆ. ಅವರ ಮೆಕ್ಸಿಕೊ ಅವರಿಗೆ ಗೊತ್ತಿದೆ. ಒಮ್ಮೆ ಕ್ರಾಂತಿ ಆರಂಭವಾಗಿಬಿಟ್ಟರೆ, ತನಗೆ ತಾನೆ ವ್ಯಾಪಿಸುವುದರಲ್ಲಿ ಸಂಶಯವಿಲ್ಲ. ಇಡೀ ಡಿಯಾಸ್ ಯಂತ್ರ ಎಲೆಯ ಮನೆಯಂತೆ ಕೆಳಗುರುಳದಿರಲಾರದು. ಎಲ್ಲೆಯ ಜನ ದಂಗೆಯೇಳಲು ಸಿದ್ಧರಿದ್ದಾರೆ. ಕೆಳ ಕ್ಯಾಲಿಫೋರ್ನಿಯಕ್ಕೆ ಮುತ್ತಿಗೆ ಹಾಕಲು ಒಬ್ಬ ಯಾಂಕಿ ನೂರು ಜನ ಯೋಧರೊಡನೆ ಒಂದೇ ಆಜ್ಞೆಯ ಪದಕ್ಕಾಗಿ ಕಾದಿದ್ದಾನೆ. ಆದರೆ ಅವನಿಗೆ ಬಂದೂಕಗಳು ಬೇಕಾಗಿವೆ. ಅಟ್ಲಾಂಟಿಕ್ ಆಚೆಯ ಸಂಚುಕೂಟದವರ ಸಂಪರ್ಕ ಕೂಡ ಬೆಳೆದಿದೆ; ಅಲ್ಲಿಯವ ರಿಗೂ ಬಂದೂಕಗಳ ಅವಶ್ಯಕತೆಯುಂಟು. ಆಧುನಿಕ ಪ್ರಪಂಚದ ಹುಚ್ಚು ಹೊಳೆಯಲ್ಲಿ ತೇಲಿಬಂದ ಅಥವಾ ಎಸೆಯಲ್ಪಟ್ಟ ವ್ಯಕ್ತಿಗಳು ತಮ್ಮ ಸಂಗಾತಿಗಳ ಗುಂಪಿನಲ್ಲಿ ಸೇರಿದ್ದಾರೆ. ಎಲ್ಲ ರೀತಿಯ ಎಲ್ಲ ವೃತ್ತಿಯ ಜನರನ್ನೂ ಕಾಣ ಬಹುದು-ಬರಿಯ ಸಾಹಸಕ್ಕಾಗಿಯೆ ಜೀವ ತೆತ್ತವರು, ಅದೃಷ್ಟಕ್ಕಾಗಿ