________________
೧೪೨ ಬಾಳ ನಿಮಯ ಅವನನ್ನು ಜೊತೆಯಲ್ಲಿ ಕರಕೊಂಡು ಹೋಗಲೇಬೇಕು. ಇದಕ್ಕಿಂತ ಹೆಚ್ಚಿಗೆ ನಾವೇನು ಮಾಡಬಲ್ಲೆವು ?” ಎಂದು ಕೆಲ್ಲಿ ವಾದಿಸಿದನು. ಡ್ಯಾನಿ ಮತ್ತೆ ಬೇಜವಾಬ್ದಾರಿಯಿಂದ ಮೇಲೆ ಕೆಳಗೆ ನೋಡುತ್ತಾ ನಿಟ್ಟುಸಿರು ಬಿಟ್ಟನು. “ನಾನೇನು ಅವನೊಡನೆ ಸುಲಭವಾಗಿ ವರ್ತಿಸಬಲ್ಲೆ. ಮೇಲೆ ಬೀಳದೆ ಹುಷಾರಿದ್ದರೆ ಅವನಿಗೇ ಉತ್ತಮ....” ರಾಬರ್ಟ್ ಘಂಕರಿಸಿದನು. “ನೀನು ಹುಷಾರಾಗಿರಬೇಕು. ಹುಡುಗನೆಂದು ಹಗುರವಾಗಿ ಹೋರಾ ಡುವುದು ಬೇಡ. ಯಾರಿಗೆ ಗೊತ್ತು ? ಈ ಗುರುಗಮ್ಮನ ಕಡೆಯೆ ಅದೃಷ್ಟ ಒಲಿಯಬಹುದು ...” ಎಂದು ಡ್ಯಾನಿಯ ವ್ಯವಸ್ಥಾಪಕ ಎಚ್ಚರಿಕೆಯಿತ್ತನು. ಡ್ಯಾನಿ ನಸುನಗೆ ಬೀರುತ್ತಾ, “ಸರಿಕಣಯ್ಯಾ, ಜಾಗರೂಕನಾಗಿಯೇ ಇರುತ್ತೇನೆ..ಈತನನ್ನು ಪ್ರಾರಂಭದಿಂದ ಕೊನೆಯ ತನಕ ಪ್ರೀತಿಯ ಜನತೆಗಾಗಿ ಜಾಗ್ರತೆಯಿಂದ ರಕ್ಷಿಸಿಕೊಳ್ಳುತ್ತೇನೆ. ಏನು ಹೇಳುವೆ ಕೆಲ್ಲಿ ? ಹದಿನೈದು ರೌಂಡುಗಳ ತನಕ ಹೋರಾಡುವಂತೆ ಮಾಡಿದರೆ ಮತ್ತೆ ಜಯವನ್ನು ಗಳಿಸುವ ನಲ್ಲವೇ ?” ಎಂದನು. “ಅಷ್ಟೇ ಸಾಕು. ನೀನು ಈಗ ಹೇಳಿದುದನ್ನು ಕಾರ್ಯರೂಪಕ್ಕೆ ತಂದರೆ ಸರಿ !” ಎಂದನು. “ಹಾಗಾದರೆ ವ್ಯವಹಾರಕ್ಕೆ ಬರೋಣ,” ಎಂದು ಡ್ಯಾನಿ ಸ್ವಲ್ಪ ಹೊತ್ತು ಸುಮ್ಮನಿದ್ದು ಲೆಕ್ಕಾಚಾರ ಹಾಕಿದನು_ಕಾರ್ಥೆಗೆ ಹೇಳಿರುವಂತೆಯೇ ನಮಗೂ ಕೂಡ ಗೇಟು ಹಣದಲ್ಲಿ ಶೇಕಡ ಅರವತ್ತೈದನ್ನು ಮಾಸಲಿಡಬೇಕು. ಆದರೆ ವಿಭಾಗ ಮಾಡುವುದರಲ್ಲಿ ವ್ಯತ್ಯಾಸವಿದೆ. ನನಗೆ ಅದರಲ್ಲಿ ಎಂಬತ್ತರಷ್ಟು ಭಾಗ ಕೊಟ್ಟರೆ ಒಪ್ಪಿಗೆಯುಂಟು. ಮ್ಯಾನೇಜರ್ ಸಾಹೇಬರೆ, ಸರಿ ತಾನೆ ?” ವ್ಯವಸ್ಥಾಪಕ ತಲೆದೂಗಿದನು. “ಎಲಾ, ನಿನಗೆ ಅರ್ಥವಾಯಿತೇ ?” ಎಂದು ಕೆಲ್ಲಿ ರಿವರನನ್ನು ಕೇಳಿದನು. ರಿವರ ತಲೆಯಲ್ಲಾಡಿಸಿದನು. ಇರಲಿ; ಇಲ್ಲಿ ಕೇಳು. ಪಂದ್ಯದ ಪರ್ಸ್ ಎಷ್ಟೆಂದರ ಗೇಟು ಹಣದ ಶೇಕಡ ಅರವತ್ತೈದು. ನೀನು ಇನ್ನೂ ಬೆಳಕಿಗೆ ಬರದ ಸಣ್ಣವನಾಗಿದ್ವಿ. ಆದ್ದರಿಂದ ಪರ್ಸಿನ ಶೇಕಡ ಇಪ್ಪತ್ತು ಭಾಗ ನಿನಗೆ ಮತ್ತು ಎಂಬತ್ತು ಭಾಗ ಡ್ಯಾನಿಗೆ....” ಎಂದು ಕೆಲ್ಲಿ ವಿವರಿಸಿ, ರಾಬರ್ಟ್ ಕಡೆ ನೋಡಿದನು.