ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ಬಾಳ ನಿಯಮ “ನೀನು ಹುಷಾರಾಗಿರಬೇಕು. ನಿನ್ನ ಕೈಲಾದಷ್ಟು ಆಟದ ಕಾಲವನ್ನು ಎಳೆಯಬೇಕೆಂದು ಕೆಲ್ಲಿ ಸೂಚಿಸಿದ್ದಾನೆ. ಹಾಗೆ ಮಾಡದಿದ್ದರೆ ಪತ್ರಿಕೆಯವ ರಂತೂ ಕಪ್ಪು ಅಕ್ಷರಗಳಲ್ಲಿ ಹೀಯಾಳಿಸದೆ ಬಿಡುವುದಿಲ್ಲ....” ಎಂದು ಎಚ್ಚರಿಕೆ ಯಿತ್ತನು. ಒಟ್ಟಿನಲ್ಲಿ ಯಾವ ಮಾತುಗಳೂ ರಿವರನಿಗೆ ಪ್ರೋತ್ಸಾಹಕರವಾಗಿರಲಿಲ್ಲ. ಆದರೂ ರಿವರ ಗಮನಕೊಡದೆ ತನ್ನ ಪಾಡಿಗೆ ತಾನಿದ್ದನು. ಬಹುಮಾನ ಕ್ಯಾಗಿ ಆಡುವ ಮುಷ್ಟಿ ಕಾಳಗವನ್ನು ಕಡೆಗಣಿಸಿದ್ದನು. ಗ್ರಿನ್‌ಗೋಗಳನ್ನು ಎಷ್ಟರಮಟ್ಟಿಗೆ ದ್ವೇಷಿಸಬಹುದೋ, ಅಷ್ಟರಮಟ್ಟಿಗೆ ಪಂದ್ಯವನ್ನೂ ದ್ವೇಷಿಸು ತಿದ್ದನು. ತಾನು ಅಭ್ಯಾಸ ರಂಗಕ್ಕೆ ಇಳಿದದ್ದು ಯಾವ ಉದ್ದೇಶದಿಂದಲೂ ಅಲ್ಲ. ಹೊಟ್ಟೆಗಿಲ್ಲದಿದ್ದ ಕಾರಣ ಮತ್ತೊಬ್ಬರ ಮೇಲೆ ಬೀಳುವ ಪ್ರವೃತ್ತಿ ತಾನಾಗಿಯೆ ಉನ್ನವಿಸಿತು. ಅವನ ದೇಹ ಸ್ವಭಾವತಃ ಮುಷ್ಠಿ ಕಾಳಗಕ್ಕಾ ಗಿಯೆ ಮಾಡಲ್ಪಟ್ಟಿತ್ತು; ಆ ಅಂಶ ತಿಳಿದವನಾದರೂ ರಿವರ ವಿಪರೀತ ಅರ್ಥವನ್ನು ಕಲ್ಪಿಸಿಕೊಳ್ಳಲಿಲ್ಲ. ಸಂಚುಕೂಟಕ್ಕೆ ಸೇರಿದಮೇಲೆ ಹಣ ಸಂಪಾದಿ ಸುವ ಮಾರ್ಗ ಹುಡುಕಬೇಕಾಯಿತು. ಆಗಲೇ ಹಣಕ್ಕಾಗಿ ಕಾದಾಡಲು ಆರಂಭಿಸಿದ್ದು, ಅದು ಸುಲಭವಾಗಿತ್ತು. ಯಾವ ವೃತ್ತಿಯನ್ನು ಹೇಯ ವೆಂದು ಪರಿಗಣಿಸಿದ್ದನೋ, ಅದರಲ್ಲೇ ಜಯಶಾಲಿಯಾಗಿದ್ದನ್ನು ಕಂಡು ಕೊಂಡನು !.... ಅವನು ವಿಶ್ಲೇಷಣೆಗೆ ಹೊರಡಲಿಲ್ಲ. ಆಟದಲ್ಲಿ ಗೆಲ್ಲಬೇಕೆಂದು ಪ್ರತಿಜ್ಞೆ ಮಾಡಿದನು. ಅದುಬಿಟ್ಟು ಬೇರೆ ಯೋಚನೆಯೇ ಇಲ್ಲ. ಇಷ್ಟರಮಟ್ಟಿಗೆ ತನ್ನನ್ನು ತಾನು ನಂಬಲು ಕಾರಣ- ತನ್ನ ನರಗಳಲ್ಲಿ ಹರಿದಾಡುತಿದ್ದ ಗಾಢ ವಾದ ಶಕ್ತಿಗಳು, ಈ ಅಸಂಖ್ಯಾತ ಜನಸಮುದಾಯ ಆ ಶಕ್ತಿಗಳನ್ನು ಕನಸಿ ನಲ್ಲೂ ಕಾಣಲು ಸಾಧ್ಯವಿಲ್ಲ. ಡ್ಯಾನಿವಾರ್ಡ್ ದುಡಿಗಾಗಿ ಹೊಡೆದಾಡುವವನು, ದುಡಿ ನಿಂದ ಪಡೆಯಬಹುದಾದ ಆರಾಮ ಜೀವನದಲ್ಲಿ ಅವನ ಮನಸ್ಸಿತ್ತು. ಆದರೆ ರಿವೆರ ಯಾವುದಕ್ಕಾಗಿ ಹೊಡೆದಾಡುತಿದ್ದನೋ, ಆ ಅಂಶಗಳು ತಲೆಯಲ್ಲಿ ಮಿಂಚಿನಂತೆ ಸುಳಿಯುತ್ತಿದ್ದುವು. ಪ್ರಜ್ವಲಿಸುವ ಭಯಂಕರ ದೃಶ್ಯಗಳು ಕಣ್ಣ ಮುಂದೆ ಹಾದುಹೋದವು. .... - ರಯೊಬ್ಲಾನ್ಕೊವಿನ ಬಿಳಿಗೋಡೆಯ ಜಲಶಕ್ತಿಯ ಕಾರ್ಖಾನೆಗಳು : ಅದರಂತೆಯೇ ಒಳಗೆ ಕೆಲಸಮಾಡುತಿದ್ದ ಆರು ಸಾವಿರ ಸಂಖ್ಯೆಯ ಹಸಿವಿನಿಂದ ಕಂಗಾಲಾಗಿದ್ದ ಕೂಲಿಗಾರರು, ದಿನವೊಂದಕ್ಕೆ ಹತ್ತು ಸೆಂಟುಗಳನ್ನು ಸಂಪಾದಿ