ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೬ ಬಾಳ ನಿಯಮ ಹುಟ್ಟಿದ್ದರೂ, ಆ ಮೊಮ್ಮಕ್ಕಳು ಶುದ್ಧ ಹವಾಯಿ ಬಣ್ಣವನ್ನು ಹೆಚ್ಚಾಗಿ ಕಳೆದುಕೊಂಡಿರಲಿಲ್ಲ. ತನ್ನದೇ ಆದ ಹವಾಯಿ ಸೂರ್ಯನ ಪ್ರಭಾವವಿರಬೇಕು. ಯಾರು ಯಾರಲ್ಲಿ ಎಷ್ಟೆಷ್ಟರ ಮಟ್ಟಿಗೆ ಬಿಳಿಯರ ರಕ್ತ ಸೇರಿದೆಯೆಂಬುದನ್ನು ಸ್ವಲ್ಪ ಕಷ್ಟ ಪಟ್ಟರೆ ತಿಳಿದೀತು. ಅಂತೂ ಸ್ವಲ್ಪಮಟ್ಟಿಗಾದರೂ ಪಾಲಿನೇಶಿಯದ ಕಂದು ಬಣ್ಣ ಉಳಿದಿರುವುದು ಖಂಡಿತ. ಅಜ್ಜನಾದ ರಾಸ್ಕೋ ಸ್ವಾನ್‌ಡೈಲ್ ಶುದ್ಧವಾದ ಬಿಳಿಯ ರಕ್ತದವನು. ಮಾರ್ಥಳಲ್ಲೂ ಮುಕ್ಕಾಲು ಭಾಗ ಬಿಳಿಯ ಅಂಶ. ಅವರಿಬ್ಬರ ಸಂಪರ್ಕದಿಂದ ಬೆಳೆದ ವಂಶದಲ್ಲಿ ಸಾಕಷ್ಟು ಏರುಪೇರುಗಳು ಇದ್ದೇ ಇವೆ. ಅಂತೂ ಗಂಡು ಹೆಣ್ಣಿನ ಎರಡು ಕಡೆಯವರೂ ಒಳ್ಳೆಯ ವಂಶಕ್ಕೆ ಸೇರಿದವರೆಂದೇ ಹೇಳಬೇಕು ; ಏಕೆಂದರೆ ರಾಷ್ಟೊವಿನ ಮೂಲಪುರುಷರು ನ್ಯೂ ಇಂಗ್ಲೆಂಡಿನ ಪ್ಯೂರಿಟನರು ; ಮಾರ್ಥಳಂತೂ ಹವಾಯಿನ ರಾಜ ವಂಶದವಳು. ಅತಿ ಪ್ರಾಚೀನ ಜನಾಂಗ ಅವಳದು. ಅದರ ವಂಶಾವಳಿಯನ್ನು ದೊಡ್ಡ ದೊಡ್ಡ ಸಭೆಗಳಲ್ಲಿ ಹಾಡುತಿದ್ದರಂತೆ! ಬರವಣಿಗೆ ಬರುವುದಕ್ಕಿಂತ ಸಾವಿರ ವರ್ಷಗಳ ಹಿಂದೆ ಹಾಡಿದ್ದರ ಆಧಾರವಿದೆ! ದೂರದಲ್ಲಿ ಯಂತ್ರದ ಬಂಡಿಯೊಂದು ನಿಂತು ಹೆಂಗಸೊಬ್ಬಳನ್ನು ಕೆಳಕ್ಕಿಳಿಸಿತು. ಆಕೆಯ ವಯಸ್ಸು ಹೆಚ್ಚೆಂದರೆ ಅರುವತ್ತಿರಬಹುದೆಂದು ಊಹಿಸಬಹುದು. ಆದರೆ ಪಂಚಾಂಗದ ಪ್ರಕಾರ ಅರವತ್ತೆಂಟು ! ನಲವತ್ತು ವಯಸ್ಸಿನ ಶ್ರೀಮಂತ ಸ್ತ್ರೀಯಂತೆ ಉದ್ಯಾನದಲ್ಲಿ ಹಗುರವಾಗಿ ಹೆಜ್ಜೆ ಹಾಕುತ್ತಾ ನಡೆದು ಬಂದಳು. ಅವಳನ್ನು ಸ್ವಾಗತಿಸಲು ಮಾರ್ಥ ಮೇಲೆದ್ದಳು. ಹವಾಯಿ ಜನರ ಹಾರ್ದಿಕ ಸ್ವಾಗತವೆಂದರೆ ಕೇಳಬೇಕೆ ? ಇಬ್ಬರೂ ಮಿತಿ ಮಾರಿದ ಉತ್ಸಾಹದಿಂದ ಆಲಿಂಗಿಸಿದರು. ತೋಳುಗಳು ಬಳಸಿದವು. ತುಟಿಗೆ ತುಟ ತಾಕಿತು. ಮುಖ ಕ್ಷಣ ಕ್ಷಣಕ್ಕೂ ಉಜ್ವಲವಾಯಿತು. ಎರಡು ದೇಹ ಗಳೂ ಅತ್ಯಾನಂದದಲ್ಲಿ ಮುಳುಗಿಹೋದವು. ಇಬ್ಬರೂ ಸೋದರಿಯರು! ಆಗತಾನೆ ಬಂದವಳ ಹೆಸರು 'ಬೆಲ್ಲ', ತಮ್ಮನ್ನು ತಾವೇ ಹಿಡಿಯಲಾರದವ ರಂತೆ ತೂಗಾಡುತ್ತಿದ್ದರು. ಪರಸ್ಪರ ಯೋಗಕ್ಷೇಮವ ಜೊತೆಗೆ ಅಣ್ಣ, ಅತ್ತೆ, ಸೋದರಮಾವ ಎಲ್ಲರ ಸಮಾಚಾರವನ್ನೂ ವಿಚಾರಿಸಿದ್ದಾಯಿತು. ಆದರೆ ಒಂದು ಉತ್ತರವೂ ಪರಿಪೂರ್ಣವಾಗಿರದೆ ಅಸಂಬದ್ಧವಾಗಿತ್ತೆಂದೇ ಹೇಳಬೇಕು. ಅನೇಕ ವರ್ಷಗಳಿಂದ ನೋಡದೆ ಅಥವಾ ಆಲಿಂಗನ ಮಾಡಿಕೊಳ್ಳದೆ ಇದ್ದುದರ ಪರಿಣಾಮವಿರಬಹುದು. ಆದರೆ ಸತ್ಯಾಂಶ ಹಾಗಿಲ್ಲ; ಏಕೆಂದರೆ ಅವರಿಬ್ಬರೂ ಬೇರೆಯಾಗಿ ಕೇವಲ ಎರಡು ತಿಂಗಳಾಗಿತ್ತಷ್ಟೆ, ಅಂತೂ ಪ್ರಥಮ ಭೇಟಿ