ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೨ ಬಾಳ ನಿಯಮ ಮಾರ್ಥಳೇ ಮುಂದುವರಿದು, “ಇದಕ್ಕೆಲ್ಲ ಮೂಲ ಜಾರ್ಜ್ ಕ್ಯಾಸ್ಟ್‌ ಎಂದೇ ನಾವು ಯೋಚಿಸಿದ್ದೆವು. ಆ ಊಹೆಗೆ ಸೂಕ್ತ ಸಮರ್ಥನೆಯೂ ಇತ್ತು. ಎಷ್ಟಾದರೂ ಅವನು ಶೀತಲ ಮನುಷ್ಯ, ನೀನಾದರೋ ಬಿಸಿರಕ್ತದ ಹವಾಯಿ ಯವಳು. ಅವನು ಕ್ರೂರವಾಗಿ ವರ್ತಿಸಿರಬೇಕು. ಸೋದರ ನಾಲ್ ಕಾಟ್ ಹೇಳುತ್ತಲೇ ಇದ್ದ: ಅವನಿಂದ ನಿನಗೆ ಏಟುಗಳೇ ಬಿದ್ದಿರಬಹುದೆಂದು....” ಬೆಲ್ಲ ಮಧ್ಯೆ ಬಾಯಿಹಾಕಿದಳು : “ಇಲ್ಲ! ಇಲ್ಲ ! ಜಾರ್ಜ್ ಕ್ಯಾಸ್ಟ್ನರ್ ಎಂದಿಗೂ ಪಶುಪ್ರಾಯನಾಗಿರಲಿಲ್ಲ. ಅವನು ಸ್ವಲ್ಪ ಮಟ್ಟಿಗಾದರೂ ಮೃಗ ಸದೃಶನಾಗಿದ್ದರೆ ಚೆನ್ನಾಗಿತ್ತು ಎಂದು ನಾನು ಅನೇಕ ವೇಳೆ ಇಚ್ಚಿಸಿದ್ದೆ. ಒಂದು ದಿನವೂ ಕೈ ಮುಟ್ಟಲಿಲ್ಲ ಅಥವಾ ತನ್ನ ಕೈ ಎತ್ತಿ ಹೊಡೆಯಲೂ ಇಲ್ಲ. ನನ್ನ ವಿಷಯದಲ್ಲಿ ಜೋರಾಗಿ ಮಾತನಾಡಿದ್ದೇ ಅಪರೂಪ.... ನೀನು ನಂಬು ಯೋ ಇಲ್ಲವೋ ? ಈಗ ದಯವಿಟ್ಟು ನನ್ನ ಮಾತನ್ನಾದರೂ ನಂಬು.... ಜಾರ್ಜ್ ಮತ್ತು ನಾನು ಒಟ್ಟಿಗೆ ಸೇರಿ ದೊಡ್ಡ ದೊಡ್ಡ ಮಾತುಗಳನ್ನು ಆಡಿ ಕೊಂಡ ಪ್ರಸಂಗವೇ ಇಲ್ಲ. ಇನ್ನು ಪರಸ್ಪರ ವಿರೋಧಕ್ಕೆ ಅವಕಾಶ ಹೇಗೆ ತಾನೆ ಉಂಟಾದೀತು ? ಆದರೆ ಒಂದು ಮಾತ್ರ ನಿಜ ; ಅವನ ಮನೆ-ಅಂದರೆ ನಹಾಲದಲ್ಲಿದ್ದ ನಮ್ಮ ಮನೆ •ಸದಾ ಮೋಡ ಕವಿದಂತೆ ನಿರುತ್ಸಾಹಕರ ವಾಗಿತ್ತು. ಸುತ್ತಲಿನ ಆವರಣವೆಲ್ಲ ತಣ್ಣಗಿತ್ತು; ಸ್ಫೂರ್ತಿಯೇ ಇಲ್ಲ. ಆದರೆ ನನ್ನ ರಕ್ತಗತ ಸ್ವಭಾವ ಅದಕ್ಕೆ ತೀರ ವಿರುದ್ಧವಾಗಿತ್ತು. ಭೂಮಿ ಮತ್ತು ಸೂರ್ಯನ ನೇರ ಸಂಪರ್ಕದಿಂದ ಹುಟ್ಟಿದವರಂತೆ ನನ್ನ ದೇಹ ಉಜ್ವಲ ವಾಗಿತ್ತು.....ಸನ್ನಿವೇಶಕ್ಕೆ ತಕ್ಕಂತೆ ನನ್ನ ಗಂಡನೂ ಹೊಂದಿಕೊಂಡಿದ್ದನು. ಅವನಲ್ಲಿ ಉಲ್ಲಾಸದ ಸಣ್ಣ ಕಣವೂ ಇರಲಿಲ್ಲ...ಮಾರ್ಥ, ನೀನೇ ಅವನನ್ನು ನೋಡಿದ್ದಿ ; ಎಷ್ಟು ಮಂಕು ಕವಿದಿತ್ತು. ನಾವು ಶಾಲೆಯಲ್ಲಿ ನೋಡುತಿದ್ದ ಮಾಸಲು ಬಣ್ಣದ ಎಮರ್ಸನ್ ಭಾವ ಚಿತ್ರದಂತೆ ಇದ್ದನಲ್ಲವೇ ? ನಿಜ ವಾಗಿಯೂ ಅವನ ಚರ್ಮ ಬೂದುಬಣ್ಣಕ್ಕೆ ತಿರುಗಿತ್ತು. ಸದಾಕಾಲ ಕುದುರೆಯ ಮೇಲೇರಿ, ಬಿಸಿಲ ತಾಪವನ್ನು ಲಕ್ಷಿಸದೆ, ವಿವಿಧ ಹವಾಮಾನದ ಪ್ರದೇಶ ಗಳಲ್ಲಿ ಪ್ರಯಾಣ ಮಾಡುತಿದ್ದರೂ, ಅವನ ಬಣ್ಣ ಮಾತ್ರ ಹದವಾಗಲಿಲ್ಲ ! ಅವನ ಬಹಿರಂಗ, ಅಂತರಂಗ ಎರಡೂ ಒಂದೇ ಆಗಿತ್ತು..... “ರಾಬರ್ಟ್ ಮಾವ ನನಗೆ ಮದುವೆ ನಿಶ್ಚಯ ಮಾಡಿದಾಗ, ನನ್ನ ವಯಸ್ಸು ಹತ್ತೊಂಬತ್ತು. ಆಗ ಏನು ತಾನೆ ಗೊತ್ತಿತ್ತು ? ಹವಾಯಿ ದ್ವೀಪದ ಆಸ್ತಿ ಪಾಸ್ತಿಗಳು ಬಿಳಿಯರ ವಶವಾಗಲು ಆಗಲೆ ಪ್ರಾರಂಭವಾಗಿದ್ದನ್ನು