ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧೯೧ ದನು. ಪ್ರಾರಂಭದಲ್ಲಿ ತೊಂದರೆಯಾದರೂ ಸುಧಾರಿಸಿಕೊಂಡೆ. ಕುದುರೆಯ ಮುನ್ನೋಟಕ್ಕೆ ಹೆದರಲಿಲ್ಲ. ಆದ್ದರಿಂದಲೇ ಅದು ತಹಬಂದಿಗೆ ಸಿಕ್ಕಿತು. “ ಮುಂದೇನಾಗಬಹುದೆಂದು ಜಾನ್ ಮಾವ ಮೊದಲೇ ಕನಸುಕಂಡಿ ದ್ದನೋ ಏನೊ ಎಂದು ನನಗೇ ಅನೇಕ ವೇಳೆ ಆಶ್ಚರ್ಯವಾಗುತಿತ್ತು. ಅಂತೂ * ಮಾನಾ'ಕ್ಕೆ ಹೋಗುತ್ತೇನೆಂದು ಆ ಬೆಳಗಿನ ತನಕವೂ ಗೊತ್ತಿರಲಿಲ್ಲ ; ಎಲ್ಲವೂ ವಿಚಿತ್ರ ಕಾರ್ಯಕ್ರಮವೇ ಆಗಿತ್ತು. ಹಿಲೋ ಕುದುರೆಯ ಮೇಲೆ ಹತ್ತಿ, ಜೋಕಾಗಿ ಸವಾರಿಮಾಡಿದೆ. ಈ ಮಾನಾ'ದಲ್ಲಿದ್ದ ರಾಣಿಯ ಗುಂಪಿಗೆ ಬಂದುಸೇರಿದೆ. “ ಅಂಥ ಹರ್ಷದ ಹಬ್ಬವನ್ನು ಹಿಂದೆಂದೂ ನೋಡಿರಲಿಲ್ಲ. ವೃದ್ದ ಪಾ ರ್ಕರುಗಳ ಸತ್ಕಾರ ಅದ್ದೂರಿಯಾಗಿತ್ತು. ಈಟಿಯಿಂದ ತಿವಿಯುತ್ತಾ ಕಾಡು ಹಂದಿಯ ಬೇಟೆಯಾಡುತಿದ್ದರು. ದುಷ್ಟ ಜಾನುವಾರುಗಳ ಮೇಲೆ ಗುಂಡು ಹಾರಿಸುತಿದ್ದರು. ಛಂಗನೆ ಕುಣಿದಾಡುತಿದ್ದ ಕುದುರೆಗೆ ಬರೆ ಹಾಕಿ ಪಳಗಿಸು ತಿದ್ದರು. ಜವಾನರ ಅಂಗಳ ತುಂಬಿಹೋಗಿ ಕಾಲಿಡಲೂ ಜಾಗವಿರಲಿಲ್ಲ. ಎಲ್ಲೆಲ್ಲಿ ನೋಡಿದರೂ ಪಾರ್ಕರ್ ಕ್ಷೇತ್ರದ ಗೊಲ್ಲ ಹುಡುಗರೇ ಕಣ್ಣಿಗೆ ಬೀಳು ತಿದ್ದರು. ವೈಮಿಯ, ವೈಸಿಯೊ, ಹೊನಾಕ ಇತ್ಯಾದಿ ಸಳಗಳ ಹುಡುಗಿಯ ರೆಲ್ಲ ಸೇರಿಬಿಟ್ಟಿದ್ದರು ; ದೊಡ್ಡಿಯ ಸುತ್ತಲೂ ಹಾಕಿದ್ದ ಕಲ್ಲುಗೋಡೆಗಳ ಮೇಲೆ ಸಾಲಾಗಿ ಕುಳಿತಿದ್ದರು. ಗೊಲ್ಲರ ಗುಂಪಿನಲ್ಲಿದ್ದ ಎಷ್ಟೋ ಹುಡುಗರನ್ನು ಆಗಲೇ ಬುಟ್ಟಿಗೆ ಹಾಕಿದ್ದರು! ತಮ್ಮ ತಮ್ಮ ಪ್ರೇಮಿಗಳ ನೇರಕ್ಕೆ ಸರಿಯಾಗಿ ಹೂವಿನ ಬಾಣಗಳನ್ನು ಎಸೆಯುತಿದ್ದರು !........ “ ಆ ರಾತ್ರಿ ; ಸುವಾಸನೆಯಿಂದ ತುಂಬಿಹೋಗಿತ್ತು. ಸುತ್ತಲೂ ನೃತ್ಯ ಸಂಗೀತ ನಡೆಯುತಿತ್ತು. ' ನಾನಾ 'ದ ನೆಲ ಎಷ್ಟು ಪ್ರಮಾಡಿತೊ? ಮರಗಳ ಕೆಳಗೆ ಪ್ರೇಮಿಗಳು ಜೊತೆ ಜೊತೆಯಾಗಿ ಓಡಾಡುತಿದ್ದರು.... ಎಲ್ಲೆಲ್ಲಿ ನೋಡಿದರೂ ಪ್ರೇಮಮಯ ವಾತಾವರಣ.

  • ಮತ್ತು ರಾಜಕುಮಾರ........ ” ಬೆಲ್ಲ ಮಾತನ್ನು ಅರ್ಧಕ್ಕೇ ನಿಲ್ಲಿಸಿ ವಳು. ಫಳ ಫಳ ಹೊಳೆಯುತಿದ್ದ ಸಾಲು ಹಲ್ಲು ಕೆಳತುಟಿಯನ್ನು ಕಚ್ಚಿತು. ದೂರದ ನೀಲಿಯ ದಿಗಂತದ ಕಡೆ ದೃಷ್ಟಿ ಬೀರಿದಳು. ಅವಳ ಕಣ್ಣು ಪುನಃ ಸೋದರಿಯು ಕಡೆ ತಿರುಗಬೇಕಾದರೆ ಒಂದು ನಿಮಿಷ ಹಿಡಿಯಿತು,
  • ಮಾರ್ಥ, ನಿಜವಾಗಿಯೂ ಅವನೊಬ್ಬ ರಾಜಕುಮಾರ. “ ಇದಕ್ಕಿಂತಲೂ ಮುಂಚೆ-ಅಂದರೆ, ನೀನು ಶಾಲೆಯನ್ನು ಬಿಟ್ಟು