________________
ಮೋಹದ ಬಲೆಯಲ್ಲಿ ೧f4 ದ್ದನು. ಹಿಗಿನ್ಸ್ ವರ್ತ್ ನನ್ನನ್ನು ಎಳೆದುತಂದು ಅವನಿಗೆ ಭೇಟಿಮಾಡಿಸಿದಳು. ಅಷ್ಟು ಹೊತ್ತಿಗೆ ಲಿಹೂ ರಾಜಕುಮಾರಿ ಹಿಗಿನ್ಸ್‌ವರ್ತ್ಳನ್ನು ಕೂಗಿ ಕರೆದಳು. ಜೀಸಲ್ ಹೊಟ್ಟನ್ನು ತರಬೇಕಿತ್ತು. ಸರಿ ; ಅಲ್ಲಿಂದ ಕಾರ್ಯಾರ್ಥಿಯಾಗಿ ಹಿಂದಕ್ಕೋಡಿಬಿಟ್ಟಳು ! “ ನಾನು ಮಾತ್ರ ಸರಕ್ಕನೆ ಸರಿದರೂ ಅಲ್ಲೇ ನಿಲ್ಲಬೇಕಾಯಿತು. ಅವನ ದೃಷ್ಟಿ ನನ್ನ ಮೇಲೆ ಬೆಳಗಿತು. ಮನಃಶೋಭೆಯಿಂದ ಹಿಗ್ಗಾಮುಗ್ಗ ಎಳೆಯಲ್ಪಟ್ಟೆ. ಆದರೂ ಅವನನ್ನು ನೋಡಿದಾಗ........ ಅವನ ತಲೆ ಸ್ವಲ್ಪ ಹಿಂದಕ್ಕೆ ಬಾಗಿತ್ತು. ಎಂಥ ವರ್ಚಸ್ಸು ! ಎಂಥ ಎದೆಗಾರಿಕೆ! ಎಂಥ ದರ್ಪ! ಅವನ ಸ್ವಭಾವಕ್ಕನುಗುಣವಾದ, ಯಾರನ್ನೂ ಲಕ್ಷಿಸದ, ನಿಲುವು ! ನಮ್ಮ ಕಣ್ಣು ಗಳು ಮಿಳಿತವಾದುವು. ಅವನ ತಲೆ ಮುಂದಕ್ಕೆ ಬಾಗಿ ನನ್ನ ಕಡೆ ಬರತೊಡಗಿತು. ಏನಾಯಿತೋ ನನಗೆ ಗೊತ್ತಿಲ್ಲ. ಅವನು ಏನನ್ನಾದರೂ ಆಜ್ಞೆ ಮಾಡಿದನೇ ? ಅದರಂತೆ ನಾನು ವರ್ತಿಸಿದೆನೇ ? ಯಾವುದೂ ನನಗೆ ತಿಳಿಯದು.
- ಇಷ್ಟು ಮಾತ್ರ ಹೇಳಬಲ್ಲೆ : ನಾನು ಆಗ ಚೆನ್ನಾಗಿದ್ದೆ. ತಲೆಯ ತುಂಬ ಸುಗಂಧಪೂರಿತ ಮೈಲೆ' ಪುಷ್ಪಗಳನ್ನು ಮುಡಿದಿದ್ದೆ. ಜಾನ್ ಮಾವ ತನ್ನ ಪ್ರೇಯಸಿಗೆ ಅಂದರೆ, ಸತ್ತುಹೋಗಿದ್ದ ನಿಮಿ ರಾಜಕುಮಾ ರಿಗೆ-ಇಟ್ಟಿದ್ದ ಸೊಗಸಾದ ಗೌನನ್ನು ನನಗೆ ಕೊಟ್ಟಿರಲಿಲ್ಲವೇ ? ಅದನ್ನೇ ನಾನು ಧರಿಸಿದ್ದೆ.
“ ನಾನಾ ಉದ್ಯಾನದಲ್ಲಿ ಒಬ್ಬಳೇ ತಿರುಗಾಡುತ್ತಾ ಅವನ ಕಡೆಯೇ ಸೆಳೆಯಲ್ಪಟ್ಟೆ. ಅವನೂ ಅಷ್ಟೇ; ಹೂಗಿಡಗಳನ್ನು ಹಾರುತ್ತ ಅರ್ಧ ದಾರಿಯಲ್ಲೇ ನನ್ನನ್ನು ಭೇಟಿಮಾಡಿದನು. ಹುಲ್ಲುಪೊದೆಯ ಹತ್ತಿರ ಇಬ್ಬರೂ ಸೇರಿದೆವು. ನಮ್ಮನ್ನು ಕೇಳುವವರೇ ಇಲ್ಲ. ಒಳ್ಳೆಯದೇ ಆಯಿತು. ಎರಡು ಜೀವಗಳೂ ಪರಸ್ಪರ ವಿನಿಮಯವಾದಂತಿತ್ತು.
- ಸೋದರಿ ಮಾರ್ಥ, ನಾನು ಯುವತಿಯಾಗಿದ್ದಾಗ ನನ್ನ ರೂಪ ತುಂಬ ಸುಂದರವಾಗಿತ್ತೆ ? ಮತ್ತೊಬ್ಬರು ಹೇಳಬೇಕೇ ಹೊರತು ನನಗೆ ತಿಳಿಯದು....ಅದರೆ, ಆ ಕ್ಷಣದಲ್ಲಿ ಅವನ ಸರ್ವಾಂಗ ಸೌಂದರ್ಯವೂ ರಾಜ ಪೌರುಷವೂ ನನ್ನ ಹೃದಯವನ್ನು ಹೊಕ್ಕಿದವು. ತಕ್ಷಣ ನನ್ನಲ್ಲಿಯೂ ಸೌಂದರ್ಯದ ಸುತ್ತಾಟ ಆರಂಭವಾಯಿತು ! ಆ ಅನುಭವವನ್ನು ಏನೆಂದು ಹೇಳಲಿ? ಅವನಲ್ಲಿದ್ದುದು ಹೊರಬಂದು ನನ್ನಲ್ಲಿ ಸೇರಿತ್ತು! ಕಾಣದ ಹಾಗೆ