ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ ಬಾಳ ನಿಮಯ ಕ್ರಾಂತಿ ಭವಿಷ್ಯ ನಿಧಾನವಾದರೂ, ಜಾರ್ಜ್ಕ್ಯಾಸ್ಟಂನ ಹೆಂಡತಿ ಎಂದಿಗೂ ಹವಾಯಿಯ ರಾಣಿಯಾಗಲಾರಳು ! ಅಂದರೆ, ಅಲೋಲಿಲೋ ರಾಜಕುಮಾರ ರಾಜನ ಪಟ್ಟಕ್ಕೇರಿದರೂ, ನಾನು ಮಾತ್ರ ರಾಣಿಯಾಗಲು ಅವಕಾಶವಿಲ್ಲ..... ಹಾಳಾಗಿ ಹೋಗಲಿ; ನಾನು ಎಂದಿಗೂ ಸಿಂಹಾಸನಕ್ಕೆ ಹಾತೊರೆದವಳಲ್ಲ. ನನಗೆ ಬೇಕಾಗಿದ್ದುದು ಇಷ್ಟೆ: ಅವನಸಂಗಾತಿಯಾಗಿ ಬಾಳಬೇಕೆಂದು. ಅದರಲ್ಲಿ ತಪ್ಪೇನು ? ನಾನೇನೂ ಗಾಳಿಗೋಪುರ ಕಟ್ಟಲಿಲ್ಲ. ಯಾವುದು ಅಸಾಧ್ಯವೋ ಅದನ್ನು ಅಸಾಧ್ಯವೆಂದೇ ಅರಿತು ಸುಮ್ಮನಿದ್ದೆ. ಸುಳ್ಳು ಕನಸನ್ನು ಕಾಣಲು ಪ್ರಯತ್ನ ಪಡಲಿಲ್ಲ. “ ಪ್ರೇಮದ ವಿಶಿಷ್ಟ ವಾತಾವರಣವದು. ಲಿಲಿಯೊ ಮುಖ್ಯ ಪಾತ್ರ ವಹಿಸಿದ್ದನು. ಅವನ ದೂತರು ನನಗೋಸ್ಕರ 'ಮಾನ' ಉದ್ಯಾನದಿಂದ ಹೂವುಗಳನ್ನು ತರುತಿದ್ದರು. ಎಲ್ಲಿಂದ ಎಲ್ಲಿಗೆ ? ಐವತ್ತು ಮೈಲಿಗಳ ವಿವಿಧ ಕ್ಷೇತ್ರಗಳನ್ನು ಹಾದು ಬರಬೇಕು. ಇಬ್ಬನಿಗೂಡಿದ ಹೂವುಗಳು ಆಗತಾನೆ ಕ್ಲೋದಂತಿದ್ದವು. ಅಂದರೆ, ಅವರು ಎಷ್ಟು ಜೋರಾಗಿ ಓಡಿಬಂದಿರಬೇಕು ! ಎಲ್ಲವೂ ಲಿಲೋಲಿಲೋವಿನ ಆಜ್ಞೆ, ಆಭರಣವನ್ನು ತರುವಷ್ಟು ಜಾಗರೂಕತೆ ವಹಿಸಿದ್ದರು. ಸೊಗಸಾದ ಬನಾನ ಪಟ್ಟಿಯಲ್ಲಿ ಗುಲಾಬಿ ಹೂವನ್ನು ಸುತ್ತಿದ್ದರು. ಕೆಂಪು ಮೊಗ್ಗುಗಳು ಹವಳದಂತೆ ಹೊಳೆಯುತ್ತಿದ್ದವು. ಅಂಥ ಹೂವುಗಳಿಂದಲೇ ನನ್ನ ತಲೆಯನ್ನು ತುಂಬಿಸಿಬಿಡುತ್ತಿದ್ದನು.....

  • ಎಲ್ಲಕ್ಕಿಂತಲೂ ಹೆಚ್ಚಾಗಿ ಅವನ ಸ್ವಂತ 'ಮಕಿ' ಚಾಪೆಯ ಮೇಲೆ ನನ್ನನ್ನು ಎಳೆದುತಂದು ಕೂಡಿಸಿದನು ! ರಾಜ ಕುಮಾರನಿಗೇ ಮಾಸಲಾದ ಚಾಪೆಯ ಮೇಲೆ ನಾನು ಕೂಡುವುದೆಂದರೆ ಅರ್ಥವೇನು ? ಅವನ ವಿಪರೀತ ಅನುಗ್ರಹಕ್ಕೆ ಪಾತ್ರರಾದವರಿಗೂ ಆ ಯೋಗ ಸಿಕ್ಕಿರಲಾರದು. ಅದು ಸಾಮಾನ್ಯ ಚಾಪೆಯಲ್ಲ: ಮೋಹದ ಬಲೆ ! ಮೋಹದ ಬಲೆಯಲ್ಲಿ ಸಿಕ್ಕಿಕೊಂಡ ಮೇಲೆ ಅವನು ಹೇಳಿದ ಹಾಗೆ ಕೇಳಬೇಕು–ರಾಜಕುಮಾರನ ಬೋಗುಣಿಯಲ್ಲೇ ನನ್ನ ಕೈಯನ್ನೂ ಆಡಿಸಿದೆ; ನೀರು ಬಿಸಿಯಾಗಿತ್ತು; ಸುಗಂಧ ಪುಷ್ಪದ ದಳಗಳು ತೇಲಾಡುತಿದ್ದವು. ಒಂದಾದ ಮೇಲೊಂದು ಉಲ್ಲಾಸದ ಕಾರ್ಯಗಳನ್ನು ಮಾಡಿಸಿದನು. ಯಾವುದನ್ನೂ ಲಕ್ಷ್ಯಮಾಡದ ರಾಜಕುಮಾರನ ಪ್ರವಾಸ ವೈಭವವನ್ನು ಕೇಳಬೇಕೆ ? ಅವನಿಗೂ, ಲಿಹೂ ರಾಜಕುಮಾರಿಗೂ ಒಂದೇ ರೀತಿಯ ಸಂಭಮದೂಟ ನಡೆಯುತಿತ್ತು. ಮೂರನೆಯವಳಾಗಿ ನಾನೂ ಅದರಲ್ಲಿ ಭಾಗಿಯಾಗಿದ್ದೆ. ಅವನ ಚಾಮರದ ಗಾಳಿ ನನಗೂ ಬೀಸಿತು.