ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಇತ್ತೀಚಿನ ಆಶ್ಚರ್ಯಕರ ಯಕ್ಷಿಣಿ ವಿದ್ಯೆಯಲ್ಲಿ ಅವನಿಗೆ ಆಸಕ್ತಿ ಹುಟ್ಟಿತು. “ ಮೊದಲು ಗಮನಿಸಬೇಕಾದ ಅಂಶವೊಂದಿದೆ. ಪ್ರತಿ ಪ್ರಸಾರವಾದ ನಾದ ಮೇಲೂ ನಾನು ಹೊಸ ಔಷಧಿಯನ್ನು ಲೇಪಿಸಿಕೊಳ್ಳಬೇಕು. ಕೊಡಲಿ ಭಾರವಾಗಿಯೂ ಹರಿತವಾಗಿಯೂ ಇರುವುದರಿಂದ, ನಾನು ತಪ್ಪಿ ಬೀಳ ಬಾರದು.” ಎಂದು ಸೂಕ್ಷ್ಮಮತಿಯಾದ ಪೋಲೆಂಡಿನವನು ಆತುರದಿಂದ ಹೇಳಿದನು. ಒಪ್ಪಿಗೆಯನ್ನು ಸೂಚಿಸುವ ಅಷ್ಟೇ ಆತುರದಲ್ಲಿ ಮಕಾಮುಕ್ ಕೂಗುತ್ತಾ, “ ನಿನ್ನ ಕೇಳಿಕೆಗಳೆಲ್ಲವನ್ನು ಒಪ್ಪಿದ್ದೇನೆ. ಇನ್ನು ನಿನ್ನ ಔಷಧಿ ತಯಾರಿಸಲು ಪ್ರಾರಂಭಿಸು” ಎಂದನು. ಸುಬೆನ್ ಕೊವ್ ತನ್ನ ಉತ್ಸಾಹವನ್ನು ಹೊರಗೆ ತೋರ್ಪಡಿಸಲಿಲ್ಲ. ಅವನು ಅತ್ಯಂತ ಅಪಾಯಕರವಾದ ಪಂದ್ಯವನ್ನು ಆಡುತ್ತಿದ್ದನು. ಬಿಗಿ ತಪ್ಪ ದಂತೆ ವರ್ತಿಸಬೇಕಾಗಿತ್ತು. ಆದ್ದರಿಂದಲೇ ಸೊಕ್ಕಿನಿಂದ ಮಾತನಾಡಿದನು. “ ನೀನು ತುಂಬ ನಿಧಾನಿ. ನನ್ನ ಔಷಧಿಯ ಘನತೆಗೆ ಕುಂದುಂಟಾ ಯಿತು. ಇದನ್ನು ಸರಿಪಡಿಸಲು ನೀನು ನಿನ್ನ ಮಗಳನ್ನು ನನಗೆ ಒಪ್ಪಿಸ ಬೇಕು” ಎಂದು ಹತ್ತಿರದಲ್ಲಿದ್ದ ಹುಡುಗಿಯ ಕಡೆ ಕೈ ತೋರಿಸಿದನು. ಮಕಾ ಮುಕನ ಮಗಳು ನೋಟಕ್ಕೆ ಹಿತಕರವಲ್ಲದ ಪಾಣಿಯೇ ಸರಿ. ಅವಳದು ವಕ್ರದೃಷ್ಟಿ, ತೋಳನ ಕೋರೆ ಹಲ್ಲಿನಂತಹ ಒಂದು ಹಲ್ಲು ಎದ್ದು ಕಾಣು ತಿತ್ತು! ನಕಾಮುಕನು ಕೋಪಗೊಂಡನು. ಆದರೆ ಸುಬೆನ್ಕೊವ್ ಶಾಂತ ನಾಗಿದ್ದನು. ಮತ್ತೊಂದು ಸಿಗರೇಟು ಹಚ್ಚಿದನು. ಆ ನಿಶ್ಯಬ್ದ ವಾತಾವರಣದಲ್ಲಿ ಮಂಕು ಕವಿದ ನಾರ್ತ್ ಲ್ಯಾಂಡ್ ಅವನ ದೃಷ್ಟಿಯಿಂದ ಮರೆಯಾಯಿತು. ಇನ್ನೊಂದು ಬಾರಿ ತನ್ನ ಹುಟ್ರದ ಸ್ಥಳ ಮತ್ತು ಫ್ರಾನ್ಸ್ ಕಣ್ಮುಂದೆ ನಿಂತಂತಾಯಿತು. ತೋಳನ ದಾಡೆಯುಳ್ಳ ಹುಡುಗಿಯನ್ನು ನೋಡಿದಾಗ ಮತ್ತೊಂದು ಹುಡುಗಿಯ ಜ್ಞಾಪಕವಾಯಿತು. ಆದರೆ ಇವರಿಬ್ಬರಿಗೂ ಯಾವ ಹೋಲಿಕೆಯೂ ಇಲ್ಲ. ತಾನು ಯುವಕನಾಗಿ ಪ್ಯಾರಿಸ್ಸಿಗೆ ಬಂದಿದ್ದಾಗ ಒಬ್ಬಳ ಪರಿಚಯವಾಗಿತ್ತು, ಅವಳು ಗಾಯಕಿಯೂ, ನರ್ತಕಿಯೂ ಅಗಿದ್ದಳು........ “ ಹುಡುಗಿಯನ್ನು ಕೇಳುವುದರಲ್ಲಿ ಅರ್ಥವೇನು ?” ಎಂದು ಮಕಾ ಮುಕ್ ಕೇಳಿದನು.