ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ “ನಾನು ಗೆದ್ದರೆ, ಮೂವತ್ತು ಸೌಂಡು ಹಣ-ಆಗ ಸಾಲವನ್ನೆಲ್ಲ ತೀರಿಸ ಬಹುದು. ತಕ್ಕಮಟ್ಟಿಗೆ ಉಳಿಸಲೂಬಹುದು. ನಾನು ಸೋತರೆ, ನನಗೆ ಏನೂ ಸಿಗುವುದಿಲ್ಲ. ಪ್ರಾಮಿನಲ್ಲಿ ಮನೆಗೆ ಬರಲು ಒಂದು ಪೆನ್ಸಿಯೂ ಇರುವು ದಿಲ್ಲ. ಏಕೆಂದರೆ ಸೋಲಿನ ಹಣವನ್ನು ಕಾರ್ಯದರ್ಶಿ ಆಗಲೇ ಸಾಲವಾಗಿ ಕೊಟ್ಟಿದ್ದಾನೆ.... ವೃದ್ದ ಹೆಂಗಸೇ, ನಮಸ್ಕಾರ.....ಗೆಲುವಾದರೆ ನೇರವಾಗಿ ಮನೆಗೇ ಬರುತ್ತೇನೆ....” ಎಂದು ಬೇಸರದ ಧ್ವನಿಯಲ್ಲಿ ಹೇಳಿ, ಟಾಮ್ ಕಿಂಗ್ ಹೊರಡಲು ಸಿದ್ಧನಾದನು. ಕೊಠಡಿಯಲ್ಲೇ ನಿಂತು, ಅವನ ಹೆಂಡತಿ ಹೇಳಿದಳು: "ನಾನು ಕಾಯು ತಿರುತ್ತೇನೆ ...” ಗಯೆಟಿಗೆ ಸೇರಬೇಕಾದರೆ ಸಂಪೂರ್ಣ ಎರಡು ಮೈಲಿಯನ್ನು ನಡೆಯ ಬೇಕು. ಅದೇ ಹಾದಿಯಲ್ಲಿ ಟಾಮ್ ಕಿಂಗ್ ನಡೆಯುತ್ತಿದ್ದನು. ತನ್ನ ಉತ್ಕರ್ಷದ ದಿನಗಳನ್ನು ನೆನೆಸಿಕೊಂಡನು-ಒಂದು ಕಾಲದಲ್ಲಿ ತಾನು ನ್ಯೂ ಸೌತ್ ವೇಲ್ಸನ - ಹೆವಿ ವೈಟ್ ಛಾಂಪಿಯನ್,' ಆಗ ಕ್ಯಾಟ್ ಬಂಡಿಯಲ್ಲೇ ಆಟದ ಸ್ಥಳಗಳಿಗೆ ಪ್ರಯಾಣ ಮಾಡುತಿದ್ದನು. ತನ್ನ ಕಡೆಯ, ಭಾರಿ ಆಸಾಮಿ ಗಳಲ್ಲಿ ಯಾರಾದರೂ ಖರ್ಚು ವಹಿಸಿಕೊಳ್ಳಲು ಸಿದ್ದರಾಗಿ, ತನ್ನೊಡನೆ ಕುಳಿತು ಬರುತಿದ್ದರು....ಈಗ ಬ್ರಿಟನ್ನಿನ ಬರ್ನ್ಸ್, ಅಮೆರಿಕದ ಜ್ಯಾಕ್ ಜಾನ್ಸನ್ ಮುಂತಾದ ಸಾಮಾನ್ಯರು ಕಾರಿನಲ್ಲಿ ಓಡಾಡುತ್ತಿದ್ದಾರೆ. ತಾನು ಮಾತ್ರ ನಡೆಯುತ್ತಿದ್ದೇನೆ! ಪಂದ್ಯದಲ್ಲಿ ಭಾಗವಹಿಸಲು ಎರಡು ಮೈಲಿ ದೂರ ನಡೆದು ಬರುವುದು ಒಳ್ಳೆಯ ಪೂರ್ವ ಸಿದ್ದತೆಯಲ್ಲ. ಅದು ಎಲ್ಲರಿಗೂ ಗೊತ್ತಿದೆ. ಆದರೇನು ಮಾಡುವುದು? ಮುದುಕರ ಪ್ರಪಂಚ ಹಾಗೆಯೆ. ಈಗ ತಾನು ಯಾವ ಕೆಲಸವನ್ನೂ ಮಾಡುವಂತಿಲ್ಲ. ನೌಕಾ ದಳವೊಂದಿದೆ; ಮುರಿದ ಮಗು, ಉಬ್ಬಿದ ಕಿವಿಗಳನ್ನು ನೋಡಿದರೆ ಅಲ್ಲೂ ಅವಕಾಶವಿಲ್ಲ. ಯಾವುದಾದರೂ ವ್ಯಾಪಾರವನ್ನು ಹಿಡಿದಿದ್ದರೆ ಚೆನ್ನಾಗಿತ್ತು. ಇಷ್ಟು ಹೊತ್ತಿಗೆ ಉತ್ತಮ ಸ್ಥಿತಿ ಯಲ್ಲಿ ಇರಬಹುದಾಗಿತ್ತು. ಹಿಂದೆ ಯಾರೂ ತನಗೆ ಆ ಸಲಹೆ ಕೊಟ್ಟಿರಲಿಲ್ಲ. ಒಂದು ವೇಳೆ ಹೇಳಿದ್ದರೂ ಕಿವಿಗೊಡುತ್ತಿರಲಿಲ್ಲ ಎಂಬ ಅಂಶ ತನ್ನ ಸ್ವಭಾವ ದಲ್ಲೇ ಅಡಗಿತ್ತು; ಏಕೆಂದರೆ ತಾನು ನಡೆಸುತ್ತಿದ್ದ ವೃತ್ತಿ ಅಷ್ಟು ಸುಲಭ ವಾಗಿತ್ತು.... ಬೇಕಾದಷ್ಟು ಹಣ ; ತೀವ್ರ ಉತ್ಸಾಹದ ಆಟಗಳು ; ಮಧ್ಯೆ ಮಧ್ಯೆ ವಿಶ್ರಾಂತಿ ಇಲ್ಲವೆ ಹೆಮ್ಮೆಯ ಅಲೆದಾಟ. ಉತ್ಸಾಹಿ ಹೊಗಳುಭಟ್ಟರಂತೂ