ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಗೊಂಡಿರಬಹುದು ; ಆ ನಿರ್ದಿಷ್ಟ ಸಂಖ್ಯೆ ಆಯಾ ಮನುಷ್ಯನ ದೇಹ ಸೌಷ್ಟವದ ಮೇಲೆ ನಿಂತಿದೆ. ಅಷ್ಟು ಸಂಖ್ಯೆ ಮುಗಿದ ಮೇಲೆ ಅವನ ಯೋಗ್ಯತೆಯೂ ಮುಗಿಯಿತು. ಹಾಗೆ ನೋಡಿದರೂ, ತನಗೆ ಇತರರಿಗಿಂತ ಹೆಚ್ಚು ಸಂಖ್ಯೆ ಸಲ್ಲುತ್ತದೆ. ಅದೂ ಅಲ್ಲದೆ ತಾನು ಆಡಿರುವ ಪಂದ್ಯಗಳು ಸಾಮಾನ್ಯ ವಾದವಲ್ಲ; ಹೃದಯ ಒಡೆಯುವಂಥಾದ್ದು; ರಕ್ತದ ಒತ್ತಡದಿಂದ ಯೌವನದ ಮೃದು ಚರ್ಮ ಗಂಟು ಗಂಟಾಗಿ, ಪುನಃ ಹಿಂದಿನ ಸಿ ತಿಗೆ ಬರಲು ಅಸಾಧ್ಯವಾಯಿತು ; ತುಂಬಾ ಸಾಧನೆಯಿಂದ ಮೆದುಳ. ಬೇಸರಗೊಂಡಿತು. ಸಹನೆಯಂತೂ ದಾರಿತಪ್ಪಿ ಮಿತಿ ಮಾರಿ ಕೆರಳಿತು....ತನ್ನೊಡನೆ ಕಾದಾಡು ತಿದ್ದ ಹಳೆಯ ಜೊತೆಗಾರರಲ್ಲಿ ಈಗ ಯಾರೂ ಉಳಿದಿಲ್ಲ. ತಾನೊಬ್ಬನೇ ಕೊನೇ ಆಸಾಮಿ.. ತನ್ನವರು ಜೀವನಯಾತ್ರೆ ಮುಗಿಸಿದ್ದನ್ನು ಅವನು ನೋಡಿದ್ದನು. ಅಷ್ಟೇಕೆ ? ಕೆಲವರ ಕೊನೆಗಾಲ ತನ್ನ ಕೈವಾಡದಿಂದಲೇ ನಡೆದಿತ್ತು. ತನ್ನನ್ನು ಎದುರಿಸಲು ಮುದುಕರೇ ಬರುತ್ತಿದ್ದರು. ಒಬ್ಬೊಬ್ಬ ರನ್ನಾಗಿ ತಾನು ಬಿಗಿದು ಎಸೆಯುತ್ತಿದ್ದನು. ಬಿಲ್‌ನಂತೆ ಅವರೂ ಡ್ರೆಸಿಂಗ್ ರೂಮಿನಲ್ಲಿ ಅಳುತ್ತಿದ್ದಾಗ ತಾನು ನಗುತ್ತಿದ್ದನು..... ಈಗ ಟಾಮ್ ಕಿಂಗ್ ಮುದುಕ. ಅವನನ್ನು ಎದುರಿಸಲು ಯುವಕ ರಿದ್ದಾರೆ. ಅಂಥವರಲ್ಲಿ ಸ್ಯಾಂಡಲ್ ಮುಂದಾಳಾಗಿದ್ದಾನೆ. ನ್ಯೂಜಿಲೆಂಡಿ ನಲ್ಲಿ ರಿಕಾರ್ಡು ಸ್ನಾಪಿಸಿ ಆತ ಇಲ್ಲಿಗೆ ಬಂದಿದ್ದಾನೆ. ಆದರೆ ಆಸ್ಟ್ರೇಲಿಯದ ಜನರಿಗೆ ಆತನ ಬಗ್ಗೆ ಏನೂ ತಿಳಿಯದು. ಆದ್ದರಿಂದಲೇ ಅವನನ್ನು ಟಾಮ್ ಕಿಂಗಿಗೆ ಎದುರಾಗಿ ನಿಲ್ಲಿಸಿದ್ದರು. ಅವನು ಉತ್ತಮ ಪ್ರದರ್ಶನ ನೀಡಿದರೆ, ಮುಂದೆ ಹೆಚ್ಚು ಯೋಗ್ಯತೆಯುಳ್ಳ ಮನುಷ್ಯರೊಡನೆ ಆಟವಾಡಿ ಪಂದ್ಯದ ಭಾರಿ ಹಣವನ್ನು ಹೊಡೆಯಲು ಅವಕಾಶವಿತ್ತು. ಆದ್ದರಿಂದ ಅವನು ಭಯಂಕರ ಹೋರಾಟ ನಡೆಸದೆ ಇರುತ್ತಾನೆಯೇ ? ಕೇವಲ ಹಣವಲ್ಲ; ಅದ ರಿಂದ ಅವನ ಕೀರ್ತಿ, ವೃತ್ತಿಯ ಗೌರವ ಎಲ್ಲವೂ ಹೆಚ್ಚುತ್ತದೆ. ಅಂಥ ಕೀರ್ತಿಯ ಮತ್ತು ಅದೃಷ್ಟದ ರಾಜಮಾರ್ಗವನ್ನು ತಡೆದು, ಮುದುಕ ಟಾಮ್ ಕಿಂಗ್ ನಿಂತಿದ್ದಾನೆ. ತನಗೆ ಯಾವ ಕೀರ್ತಿ ಕಾಮಿನಿಯ ಬೇಡ, ವ್ಯಾಪಾರಸ್ಥರಿಗೆ ಮತ್ತು ಮನೆ ಯಜಮಾನನಿಗೆ ಕೊಡಬೇಕಾಗಿರುವ ಮೂವತ್ತು ಪೌಂಡು ಹಣ ಗೆದ್ದರೆ ಸಾಕು.... ಟಾಮ್ ಕಿಂಗ್ ಮತ್ತೆ ಯೋಚಿಸಿದನು. ಪುನಃ ವೈಭವಯುತ ಯೌವನದ ದೃಶ್ಯ ಕಣ್ಣಿಗೆ ಕಟ್ಟಿದಂತಾಯಿತು ; ಜಯೋನ್ಮತ್ತನಾಗಿ ಮೆರೆದ