________________
೪೦ ಬಾಳ ನಿಯಮ ಯಲ್ಲಿ ಜೀವಂತ ಪದಾರ್ಥಗಳಂತೆ ಮೇಲೆ ಕೆಳಗೆ ಓಡಾಡುತಿದ್ದವು. ಇಡೀ ದೇಹ ಸ್ಫೂರ್ತಿಯುತವಾಗಿತ್ತು. ಅ ಜೀವ ತನ್ನ ಹೊಸತನವನ್ನು ಕಳೆದು ಕೊಂಡಿರಲಿಲ್ಲ; ದೊಡ್ಡ ಕಾದಾಟಗಳಲ್ಲಿ ಹುಮ್ಮಸ್ಸಿನಿಂದ ನುಗ್ಗಿ, ಹಿಂದಕ್ಕೆ ಬರುವಾಗ ಜರ್ಜರಿತ ದೇಹದಿಂದ ಸುಂಕತೆರುವ ಅವಕಾಶ ಇನ್ನೂ ಹೊಂದಿ ರಲಿಲ್ಲ. ಇಬ್ಬರೂ ಭೇಟಿಯಾಗಲು ಮುಂದೆಬಂದರು. ಗಂಟೆ ಬಾರಿಸಿತು. ಸಹಾಯಕರು ದಡಬಡಿಸಿ ಕುರ್ಚಿಗಳನ್ನು ಹೊತ್ತು ರಂಗದ ಹೊರಕ್ಕೆ ಬಂದರು. ಟಾಮ್ ಕಿಂಗ್ ನ್ಯಾಂಡಲ್ ಇಬ್ಬರೂ ಕೈ ಕುಲುಕಿ, ಒಂದೇ ಕ್ಷಣದಲ್ಲಿ ಕಾದಾಡುವ ಭಂಗಿಯನ್ನು ತಾಳಿದರು. ತಕ್ಷಣ ಸ್ಯಾಂಡಲ್ ಒಳಗೂ ಹೊರಗೂ ವ್ಯಾಪಿಸತೊಡಗಿದನು. ತುಪಾ ಕಿಯ ಉಪಕೀಲಿನ ಮೇಲೆ ನಿಂತ ಸಿಂಗಿನಂತೆ ಜಗ್ಗು ತಿದ್ದನು. ಒಮೆ ಕಣ್ಣಿನ ಎಡಕ್ಕೆ ನಿಂತರೆ, ಮತ್ತೊಮ್ಮೆ ಪಕ್ಕೆಲುಬಿನ ಬಲಭಾಗದಲ್ಲಿ ಕಾಣಿಸಿ ಕೊಳ್ಳುತಿದ್ದನು. ಎದುರೇಟಗೆ ಸಿಗದೆ ಹಾದುಹೋಗುತ್ತಿದ್ದನು. ಹಗುರ ವಾಗಿ ಹಿಂದಕ್ಕೆ ಓಡುತ್ತಿದ್ದನು. ಪುನಃ ಬೆದರಿದವನಂತೆ ಹಿಂದೆ ಬರುತಿದ್ದನು. ಅವನು ಚತುರನೂ ಚುರುಕುಳ್ಳವನೂ ಆಗಿದ್ದನು. ಅದೊಂದು ಕಣ್ಣು ಕುಕ್ಕುವ ವಿಸ್ಮಯಗೊಳಿಸುವಂಥ ದೃಶ್ಯವಾಗಿತ್ತು. ಸಭೆ ಮೆಚ್ಚಿಗೆ ಸೂಚಿಸಲು ಕೂಗಾಡಿತು. ಆದರೆ ಕಿಂಗ್ ಯಾವ ವಿಸ್ಮಯವನ್ನೂ ಹೊಂದಲಿಲ್ಲ. ಅವನು ಎಷ್ಟೋ ಯುವಕರೊಡನೆ ಕಾದಾಟನಡೆಸಿದವನು. ಯುವಕರ ಕೈಚಳಕ ತೀವ್ರವಾಗಿದ್ದಷ್ಟೂ ಗುದ್ದಾಟದಿಂದ ಅಪಾಯವಿಲ್ಲ. ನ್ಯಾಂಡಲ್ ಪ್ರಾರಂಭ ದಲ್ಲೇ ಕಾರ್ಯ ಮುಗಿಸುವ ರಭಸದಲ್ಲಿದ್ದಾನೆ. ಅದೇನೂ ಸಹಜವಾದದ್ದೇ ; ಯುವಕರ ಮಾರ್ಗವೇ ಹಾಗೆ; ತಮ್ಮ ಭವ್ಯತೆಯನ್ನು ಕಳೆದುಕೊಂಡು ರೌದ್ರಾವತಾರದಿಂದ ಮೇಲೆ ಬೀಳುವರು. ಮಿತಿಯಿಲ್ಲದ ಶಕ್ತಿ ಮತ್ತು ಆಸೆ ಯಿಂದ ಜೋರಾದ ಪ್ರತಿಕ್ರಿಯೆಯನ್ನು ಬರಮಾಡಿಕೊಳ್ಳುವರು..... ಸ್ಯಾಂಡಲ್ ಅಲ್ಲಿ ಇಲ್ಲಿ, ಎಲ್ಲೆಲ್ಲೂ ಇರುತ್ತಿದ್ದನು. ಆತನ ಹೆಜ್ಜೆ ತುಂಬ ಹಗುರವಾಗಿತ್ತು. ಹೃದಯವಂತೂ ಅತ್ಯಾತುರದಿಂದ ಬಡಿಯು ತಿತ್ತು. ಮಾಂಸಖಂಡಗಳನ್ನು ನೆಯ್ದು ಮಾಡಿದ ವಿಸ್ಮಯಕಾರಕ ಪ್ರತಿ ಭಟನೆಯ ವಗ್ರದಂತೆ ತನ್ನ ದೇಹವನ್ನು ಬೀಸುತಿದ್ದನು. ಹಾರಾಡುವ ಲಾಳಿ ಯಂತೆ ಮೇಲೆ ಕೆಳಗೆ ನೆಗೆದಾಡುತ್ತಿದ್ದನು. ಒಂದರಿಂದ ಮತ್ತೊಂದಕ್ಕೆ ಹಾರಿ ನೂರಾರು ಪಟ್ಟುಗಳ ಅಭ್ಯಾಸಮಾಡುತಿದ್ದನು. ಎಲ್ಲದರ ಗಮನವೂ