ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ೪೭ ಸಂಪೂರ್ಣ ಉತ್ಸಾಹಕ್ಕೆ ಎಡೆಕೊಟ್ಟು, ಅದರಿಂದಲೇ ನಿಸ್ತೇಜನಾಗುವಂತೆ ಏರ್ಪಾಟುಮಾಡುತಿದ್ದನು. ಕೈಕಾಲು ಮತ್ತು ದೇಹದ ಹುಸಿದಾಳಿಯಿಂದ ಸ್ಯಾಂಡಲ್‌ನನ್ನು ಗುರಿತಪ್ಪಿಸಿ ಸೆಳೆಯುತ್ತಿದ್ದನು. ಆಗ ಸ್ಯಾಂಡಲ್ ಹಿಂದಕ್ಕೆ ನೆಗೆಯುತಿದ್ದನು; ಏಟನ್ನು ತಪ್ಪಿಸಿಕೊಳ್ಳಲು ತಲೆಯನ್ನು ಥಟ್ಟನೆ ಚಲಿಸು ತಿದ್ದನು; ಅಥವಾ ಎದುರೇಟು ಕೊಡುತ್ತಿದ್ದನು. ಕಿಂಗ್ ವಿಶ್ರಾಂತಿ ತೆಗೆದು ಕೊಳ್ಳುತಿದ್ದನು ; ಆದರೆ ಅವನು ಸ್ಯಾಂಡಲ್‌ಗೆ ವಿಶ್ರಾಂತಿ ಪಡೆಯಲು ಅವ ಕಾಶವನ್ನೇ ಕೊಡುತ್ತಿರಲಿಲ್ಲ. ಅದು ವಯಸ್ಸಿನ ತಂತ್ರ, ಕಿಂಗ್ ಮಾತ್ರ ತಿಳಿದಿದ್ದ. ಹತ್ತನೇ ರೌಂಡಿನ ಪ್ರಾರಂಭದಲ್ಲಿ, ಕಿಂಗ್ ತನ್ನ ಎದುರಾಳಿಯ ನುಗ್ಗಾಟವನ್ನು ತಪ್ಪಿಸಲು ಎಡಗೈಯಿಂದ ನೇರವಾಗಿ ಮುಖಕ್ಕೆ ಹೊಡೆಯಲು ಆರಂಭಿಸಿದನು. ಸ್ಯಾಂಡಲ್ ಹುಷಾರಿನಿಂದ ಹಿಂದಕ್ಕೆ ಸರಿದನು. ಆದರೆ ಅವನು ಉಯ್ಯಲಾಡುತ್ತಾ ತನ್ನ ಬಲಗೈನಿಂದ ಕಿಂಗ್‌ನ ತಲೆಯ ಭಾಗಕ್ಕೆ ಬಿಗಿದನು. ಅದರಿಂದ ಪ್ರಚಂಡ ಪರಿಣಾಮವಾಗದಿದ್ದರೂ, ಮೊದಲ ಏಟು ಬಿದ್ದಾಗ ಕಿಂಗ್‌ಗೆ ಒಂದಾಗುತ್ತಿದ್ದಂತೆ ತಲೆತಿರುಗಿ, ಕಣಕಾಲ ಜ್ಞಾನತಪ್ಪು ವಂಥ ಕಗ್ಗತ್ತಲು ಆವರಿಸಿತು. ಒಂದು ತಾಸು ಕಾಲ ಅವನ ದೃಷ್ಟಿ ಪಥವೇ ಬದಲಾಯಿಸಿತು ; ಎದುರಾಳಿ ಸಂಪೂರ್ಣವಾಗಿ ಕೈ ತಪ್ಪಿ ಹೋದಂತೆಯೂ, ಅದರ ಹಿನ್ನೆಲೆಯಲ್ಲಿ ಕಾಯುತಿದ್ದ ಉತ್ಸಾಹಿ ಬಿಳೀ ಮುಖಗಳು ಕಂಡಂತೆಯೂ ಭಾಸವಾಯಿತು. ಸ್ವಲ್ಪ ಕಾಲ ಮಲಗಿದ್ದು, ಆಗತಾನೆ ಕಣ್ಣು ಬಿಟ್ಟವನಂತೆ ಕಂಡನು. ಆದರೂ ಜ್ಞಾನ ತಪ್ಪಿದ ಘಳಿಗೆ ಎಷ್ಟು ಅತ್ಯಲ್ಪವಾಗಿತ್ತು! ಆ ಸಮಯದಲ್ಲಿ ಕೆಳಕ್ಕೆ ಬೀಳಲೂ ಅವಕಾಶವಿರಲಿಲ್ಲ. ತೂರಾಡುತ್ತಾ ಮೊಣ ಕಾಲು ಸಡಿಲವಾದ್ದನ್ನು ಸಭಿಕರು ನೋಡಿದರು ; ಮತ್ತೆ ಅವನು ಚೇತರಿಸಿ ಕೊಂಡು ತಲೆಯನ್ನು ಎಡಭುಜದ ಆಶ್ರಯಕ್ಕೆ ವಾಲಿಸಿದ್ದನ್ನು ನೋಡಿದರು. ಸ್ಯಾಂಡಲ್ ಹಲವು ಬಾರಿ ಅಂಥ ಏಟುಗಳನ್ನು ಕೊಟ್ಟನು. ಆಗ ಸ್ವಲ್ಪ ಹೊತ್ತು ಕಿಂಗ್ನ ಕಣ್ಣು ಮಂಜಾಗುತಿತ್ತು. ಆದರೂ ಕಿಂಗ್ ಅರ್ಧ ಹೆಜ್ಜೆ ಹಿಂದೆ ಹೋಗಿ ಬಲಗೈಯನ್ನು ಕೆಳಮಟ್ಟದಿಂದ ಬೀಸತೊಡಗಿದನು. ಖಚಿತವಾದ ಕಾಲಗತಿಯಲ್ಲಿ ಸ್ಯಾಂಡಲ್‌ನ ಮುಖ ಸಂಪೂರ್ಣವಾಗಿ ಸಿಕ್ಕಿ ಬಿಡುತಿತ್ತು. ಸ್ಯಾಂಡಲ್ ಗಾಳಿಯಂತೆ ಮೇಲೇರುತ್ತಿದ್ದನು; ಹಿಂದೆ ಹಿಂದಕ್ಕೆ ಸುರಳಿ ಸುತ್ತಿ ಇಳಿಯುತ್ತಿದ್ದನು. ಆದರೆ ತನ್ನ ಭುಜಗಳು ನೆಲಕ್ಕೆ ತಾಕು ತಿದ್ದವು. ಎರಡು ಬಾರಿ ಇಂಥ ಕೆಲಸ ಮಾಡಿ, ಕಿಂಗ್ ಸಡಿಲಗೊಂಡನು.