ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಲಿ ೫೬ ಸಂಸ್ಥೆಯ ಹತ್ತಿರವೇ ಮರದ ರಾಶಿ ಇದ್ದುದು, ಅದರ ಮೇಲೆಯೇ ಇಂಬರ್ ಕುಳಿ ತಿದ್ದುದು, ತಿಂಡಿಗೆ ಹೋಗುವುದಕ್ಕಿಂತ ಮುಂಚೆ ಡಿಕನ್ಸನ್ ಕಿಟಕಿ ಯಾಚೆ ನೋಡಿದನು. ಪುನಃ ಬಂದು ನೋಡಿದಾಗಲೂ ಮುದಕ ಅಲ್ಲೇ ಕುಳಿತಿದ್ದನು. ಡಿಕನ್ಸನ್ ಒಂದೇ ಸಮನೆ ನೋಡುತ್ತಲಿದ್ದನು. ಇತರರಂತೆ ತಾನು ಕೂಡ ತನ್ನ ಸೂಕ್ಷ್ಮಗ್ರಹಣ ಶಕ್ತಿಯ ಬಗ್ಗೆ ಅಭಿಮಾನ ತಾಳಿದನು. ತನ್ನಲ್ಲೂ ಕಲ್ಪನಾ ದೃಷ್ಟಿ ಇಲ್ಲವೇ ಎಂದು ಜಂಭಪಟ್ಟನು. ಮೇಲೆ ಬೀಳುತ್ತಿದ್ದ ಸ್ಯಾಕ್ಸನ ರನ್ನು ಶಾಂತ ರೀತಿಯಿಂದ ನೋಡುತ್ಯ, ಚಲಿಸದೆ ಕುಳಿತಿದ್ದ ಅಸಂಸ್ಕೃತನಾದ ಮುದುಕನು ಸಿವಾಶ್ ಜನಾಂಗದ ಪ್ರಮುಖ ಪ್ರತಿನಿಧಿ ಇರಬಹುದೆಂದು ಡಿಕನ್ಸನ್ ಊಹಿಸಿದನು. ಗಂಟೆಗಳು ಉರುಳಿದವು. ಆದರೆ ಇಂಬರ್ ತನ್ನ ಭಂಗಿಯನ್ನು ಬದ ಲಾಯಿಸಲಿಲ್ಲ. ಅಂಗಾಂಗಗಳು ಸ್ವಲ್ಪವೂ ಅಲುಗಿದಂತಿರಲಿಲ್ಲ. ಡಿಕನ್ಸನ್‌ಗೆ ಆಶ್ಚರ್ಯವಾಯಿತು ; ಹಿಂದೆ ಗಲಾಟೆಯ ಕೇಂದ್ರದಲ್ಲಿ ಒಬ್ಬ ಸ್ಟೇಜ್ ಮೇಲೆ ನಿಗುರಿ ಕುಳಿತದ್ದು ಜ್ಞಾಪಕವಾಯಿತು. ಅವನು ವಿಶ್ರಾಂತಿ ಪಡೆಯುತ್ತಿರ ಬಹುದೆಂದು ಊಹಿಸಿದರು. ಆದರೆ ಮುಟ್ಟಿದಾಗ ಅವನು ಸಡೆದುಕೊಂಡಿದ್ದನು. ಮೈ ತಣ್ಣಗಾಗಿತ್ತು. ಜನ ಜಂಗುಳಿಯ ಮಧ್ಯದಲ್ಲಿ ಆತ ಸಾವಿಗೆ ಆಹುತಿ ಯಾಗಿದ್ದನು. ಮೈಯೂದಿದ್ದ ಅವನನ್ನು ಕಾಫಿನ್ ಗೆ ಸೇರಿಸಲು ಕಷ್ಟವಾಗಿತ್ತು. ಆದುದರಿಂದ ದೇಹವನ್ನು ಪ್ರಯಾಸದಿಂದ ಬೆಂಕಿಯ ಬಳಿ ಎಳೆದು ನೀರನ್ನು ತೆಗೆಯಬೇಕಾಯಿತು ! ಡಿಕನ್ಸನ್ ಆ ನೆನಪಿನಿಂದ ನಡುಗಿದನು. ಸ್ವಲ್ಪ ಹೊತ್ತಾದ ಮೇಲೆ ಡಿಕನ್ಸನ್ ಸಿಗರೇಟು ಸೇದಲು ಕಾಲು ದಾರಿಯ ಕಡೆ ಹೊರಟನು. ತಲೆಗೇರಿದ್ದ ಬಿಸಿಯನ್ನು ಕಡಿಮೆಮಾಡಿಕೊಳ್ಳಲು ಪ್ರಯತ್ನ ಪಟ್ಟನು. ಕೆಲ ಕಾಲಾನಂತರ ಎಮಿಲಿ ಟ್ರಾವಿಸ್ ಅದೇ ದಾರಿಯಲ್ಲಿ ಬಂದಳು. ಅವಳು ಸಿಗುವುದೇ ಅಪರೂಪ, ಎಷ್ಟಾದರೂ ಕೋಟ್ಯಾಧೀಶ ಗಣಿಯ ಇಂಜನಿಯರ್ ಮಗಳಲ್ಲವೇ ? ಲಂಡನ್ನಿನಲ್ಲಿರಲಿ, ಕ್ಲಾಂಡೈಕ್‌ನಲ್ಲಿರಲಿ ಅವಳು ತನ್ನ ಯೋಗ್ಯತೆಗೆ ತಕ್ಕಂತೆ ಮೇಲುಡುಪನ್ನು ಧರಿಸುತಿದ್ದಳು. ಲಾವಣ್ಯ ವತಿಯೂ ಸೂಕ್ಷ್ಮ ಪ್ರಕೃತಿಯವಳೂ ಆಗಿದ್ದಳು. ಕಿರಿಯ ಡಿಕನ್ಸನ್ ಅವಳನ್ನು ಕಂಡೊಡನೆ ಸಿಗರೇಟನ್ನು ಹೊರ ಕಿಟಕಿಯ ಬದಿಯಲ್ಲಿ ಕಾಣುವಂತೆ ಇರಿಸಿ, ಹ್ಯಾಟ್ ಮೇಲೆತ್ತಿದನು. ಅವರಿಬ್ಬರು ಕೇವಲ ಹತ್ತು ನಿಮಿಷ ಮಾತನಾಡಿರಬಹುದು. ಎಮಿಲಿ