ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦ ಬಾಳ ನಿಯಮ ನಷ್ಟಗಳನ್ನೂ ಅದ್ಭುತ ಕಥಾರೂಪದಲ್ಲಿ ಹೇಳುತಿದ್ದರು. ಮತ್ತೆ ಕೆಲವು ವೇಳೆ ಹಿಂತಿರುಗಿ ಬರಲೇ ಇಲ್ಲ....ಆಗ ನಾವು ಯೋಚಿಸಿದೆವು : ( ಈ ಬಿಳೀ ಮನುಷ್ಯರು ಜೀವಕ್ಕೆ ಹೆದರದೆ ಇರಬೇಕಾದರೆ, ಅವರ ಜನಸಂಖ್ಯೆ ಹೆಚ್ಚಾಗಿರು ವುದೇ ಕಾರಣ. ಆದರೆ ನಮ್ಮ ವೈಟ್ ಫಿಶ್ ಜನರು ಅತ್ಯಲ್ಪ ಮಂದಿಯಿದ್ದಾರೆ. ಆದ್ದರಿಂದ ನಮ್ಮ ಯುವಕರು ಇನ್ನು ಮುಂದೆ ಹೋಗಕೂಡದು '. ಆದರೆ ಯುವಕರು ಹೋಗುತ್ತಲೇ ಇದ್ದರು. ವಯಸ್ಸಿಗೆ ಬಂದ ಹೆಣ್ಣು ಮಕ್ಕಳೂ ಪರಾರಿಯಾದರು. ನನಗೆ ಕೋಪ ನೆತ್ತಿಗೇರಿತು. “ನಿಜ; ನಾವು ಹಿಟ್ಟನ್ನೂ ಉಪ್ಪಾಗಿದ್ದ ಹಂದಿ ಮಾಂಸವನ್ನೂ ತಿನ್ನು ತಿದ್ದೆವು. ಟೀ ಕುಡಿಯುತ್ತಿದ್ದೆವು. ಅದೊಂದು ಮಾತ್ರ ಸಂತೋಷ ದಾಯಕವಾಗಿತ್ತು. ಟೀ ಸಿಗದಿದ್ದಾಗ ಹುಚ್ಚರಾಗುತಿದ್ದೆವು ; ಮಾತನಾಡದೆ ಕೋಪಗೊಂಡು ಮೂಲೆ ಸೇರುತಿದ್ದೆವು. * ಪದಾರ್ಥಗಳ ಅಭಾವದಿಂದ ಹಸಿದವರಾಗಿ ಬಿಳಿಯರು ಪ್ಯಾಪಾರಕ್ಕಾಗಿ ತಂದ ಪದಾರ್ಥಗಳಿಗಾಗಿಯೆ ಬಾಯಿಬಿಡಬೇಕಾಯಿತು. ಎಲ್ಲೆಲ್ಲಿ ನೋಡಿದರೂ ವ್ಯಾಪಾರ ! ವ್ಯಾಪಾರಕ್ಕೆ ಒಂದು ನಿಮಿಷವೂ ಬಿಡುವಿಲ್ಲ ; ಒಂದು ಚಳಿಗಾಲದಲ್ಲಿ ಮಾಂಸವನ್ನೆಲ್ಲ ಮಾರಿ ದೆವು. ಅದಕ್ಕೆ ವಿನಿಮಯವಾಗಿ ಬಂದ ವಸ್ತುಗಳು : ಕ್ರಮ ತಪ್ಪಿದ ಗಡಿ ಯಾರಗಳು, ನುಣುಪಾಗಿ ಹರಿದಿದ್ದ ಫೈಲುಗಳು ಮತ್ತು ಸಿಡಿಮದ್ದಿಲ್ಲದ ಪಿಸ್ತೂಲುಗಳು. ಆಮೇಲೆ ಬಂತು ಕಾಮ! ನಮಗೆ ಮಾಂಸವಿಲ್ಲ ; ವಸಂತ ಕಾಲಕ್ಕೆ ಮುಂಚೆಯೆ ನಲವತ್ತು ಜನ ಸತ್ತರು. “ನಾವು ಈಗ ದುರ್ಬಲರಾಗಿದ್ದೇವೆ. ಸೆಲ್ಲಿಗಳು ನಮ್ಮ ಮೇಲೆ ಬಿದ್ದು ಎಲೆ ಗಳನ್ನು ನಿರ್ಮೂಲಗೊಳಿಸಬಹುದು ಎಂದು ಕೊಂಡೆವು. ಆದರೆ ಪೆಲ್ಲಿಗಳೂ ಕೂಡ ನಮ್ಮಂತೆಯೇ ಪೆಟ್ಟು ತಿಂದು ಮೇಲೆಬೀಳಲು ನಿಶ್ಯಕ್ತ ರಾಗಿದ್ದರು. “ಆ ಸಂದರ್ಭದಲ್ಲಿ ಮುದುಕನಾಗಿದ್ದರೂ, ಬಲಶಾಲಿಯೂ ಬುದ್ದಿ ವಂತನೂ ಆಗಿದ್ದ ನನ್ನ ತಂದೆ ಓಟ್ಸ್ ಬೋಕ್, ನಾಯಕನಿಗೆ ಹೇಳಿದ : “ನೋಡಯ್ಯ, ನಾಯಿಗಳು ಕೆಲಸಕ್ಕೆ ಬಾರದ್ದಾಗಿವೆ ; ದಪ್ಪನೆಯ 'ಫರ್‌' ಇಲ್ಲದೆ ನಿಶ್ಯಕ್ತವಾಗಿ ಮಂಜಿನಲ್ಲಿ ಸಾಯುತ್ತಿವೆ. ದಪ್ಪನೆಯ ಚರ್ಮದ ಮತ್ತು ಶಕ್ತಿಯುತವಾದ ನಾಯಿಗಳು ಇನ್ನು ಸಿಗುವಂತಿಲ್ಲ. ಆದ್ದರಿಂದ ಹಳ್ಳಿಗೆ ಹೋಗೋಣ. ತೋಳ ನಾಯಿಗಳನ್ನು ಮಾತ್ರ ಬಿಟ್ಟು ಉಳಿದ ವನ್ನು ತೀರಿಸೋಣ. ಆ ತೋಳನಾಯಿಗಳನ್ನು ರಾತ್ರಿಯ ವೇಳೆ ಕಟ್ಟಿ ಹಾಕ