ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಲಿ “ಕಡೆಗೆ ಸಣ್ಣ ಕೂದಲಿನ ಅಸಹನೀಯ ನಾಯಿಗಳ ಸಿಂಹಸ್ವಪ್ನ ಕಂಡಂ ತಾಯಿತು. ಮುಂದಿನ ಮಾರ್ಗ ತಿಳಿಯಿತು ! ಬಲಿಷ್ಠನಾದ ನನ್ನ ತಂದೆ ಒಬ್ ಬೋಕ್‌ನ ಬುದ್ದಿವಂತಿಕೆಯಿಂದ ನಮ್ಮ 'ತೋಳ ನಾಯಿ'ಗಳು ಬೆಚ್ಚಗಿದ್ದು ಬಲಿಷ್ಠ ವಾಗಿವೆ. ಅವುಗಳ ರಕ್ತಪರಿಶುದ್ಧವಾಗಿರುವುದೇ ಇದಕ್ಕೆ ಕಾರಣ. ಕೂಡಲೇ ಹಳ್ಳಿಗೆ ಹಿಂತಿರುಗಿ ನಮ್ಮವರ ಮುಂದೆ ದೀರ್ಘ ಭಾಷಣ ಮಾಡಿದೆ: -ಬಿಳಿಯ ಮನುಷ್ಯರ ತಂಡವೊಂದಿದೆ. ಬಹು ದೊಡ್ಡ ತಂಡವೇ ಇರಬೇಕು. ನಿಸ್ಸಂಶಯವಾಗಿಯೂ ಅವರ ನಾಡಿನಲ್ಲಿ ಮಾಂಸವಿಲ್ಲ. ನಮ್ಮ ನಾಡನ್ನು ತಮ್ಮದಾಗಿ ಮಾಡಿಕೊಳ್ಳಲು ಅವರು ಬರುತ್ತಾರೆ. ನಮ್ಮನ್ನು ನಿರ್ಮಿಯಣ ರನ್ನಾಗಿ ಮಾಡುತ್ತಾರೆ ; ನಾವು ಸಾಯುತ್ತೇವೆ. ಅವರಂತೂ ತೀರ ಹಸಿದ ಜನ. ಈಗಾಗಲೇ ಮಾಂಸ ನಮ್ಮ ಕೈ ಬಿಟ್ಟು ಹೋಯಿತು. ನಾವೇ ನಾದರೂ ಬದುಕಬೇಕಾದರೆ, ಅವರ ನಾಯಿಗಳನ್ನು ಹೇಗೆ ನಾಶಪಡಿಸಿದೆವೋ ಹಾಗೆಯೇ ಅವರ ವಿಷಯದಲ್ಲೂ ವರ್ತಿಸಬೇಕು.” ಮುಂದುವರಿಸುತ್ತಾ ಹೋರಾಟ ನಡೆಸಲೇಬೇಕೆಂದು ಸಲಹೆಕೊಟ್ಟೆ. ವೈಟ್ ಫಿಶ್ ಜನ ಆಲಿಸಿದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ಕೆಲಸಕ್ಕೆ ಬಾರದ ಮಾತುಗಳನ್ನಾಡಿದರು. ಯಾರೂ ಯುದ್ಧ ಮಾಡುವ ಧೈರ್ಯದ ಮಾತನ್ನು ತರಲಿಲ್ಲ. ಸುತ್ತಲೂ ನೋಡಿದೆ. ನೀರ ಗುಳ್ಳೆಯಂತೆ ಯುವಕರು ಹೇಡಿಗಳಾಗಿದ್ದರು. ಮುದುಕರು ಸುಮ್ಮನೆ ಕುಳಿ ತಿದ್ದರು ; ಆದರೆ ಮಧ್ಯೆ ಮಧ್ಯೆ ಅವರ ಕಣ್ಣಿಂದ ಕಿಡಿಗಳು ಹೊರಸೂಸುತಿ .ದ್ದು ವು. ಆದೇ ರಾತ್ರಿ ಹಳ್ಳಿಯಲ್ಲಿ ಎಲ್ಲರೂ ನಿದ್ದೆ ಹೋದಮೇಲೆ ಯಾರಿಗೂ ತಿಳಿಯದ ಹಾಗೆ ಮುದುಕರನ್ನು ಮಾತ್ರ ಎಬ್ಬಿಸಿ, ಕಾಡಿಗೆ ಕರೆದುಕೊಂಡು ಹೋದೆ ! ಬಹಳ ಹೊತ್ತು ಮಾತುಕಥೆ ನಡೆಯಿತು. ನಾವೆಲ್ಲರೂ ಒಪ್ಪಿ ಕೊಂಡೆವು. ನಮ್ಮ ಯೌವನದ ಸುದಿನಗಳನ್ನು ನೆನೆಸಿಕೊಂಡೆವು. ಎಂಥ ಸ್ವತಂತ್ರ ನಾಡು; ಎಲ್ಲಕ್ಕೂ ಸಮೃದ್ಧಿಯ ಕಾಲ, ಸೂರ್ಯ ಬೆಳಗುತಿದ್ದ ಸಂತಸದ ದಿನಗಳು. ನಾವೆಲ್ಲರೂ ಸೋದರರೆಂದು ಭಾವಿಸಿ ಆತ್ಯಂತ ಗುಟ್ಟಿ ನಲ್ಲಿ, ನಮ್ಮ ನಾಡಿನಲ್ಲಿ ಹರಡುತ್ತಿದ್ದ ಕೆಟ್ಟ ವಂಶದ ಕುಡಿಯನ್ನು ಸಂಪೂರ್ಣ ನಾಶಗೊಳಿಸಬೇಕು ಎಂಬುದಾಗಿ ಘೋರಪ್ರತಿಜ್ಞೆ ಮಾಡಿದೆವು. ಇದು ಬರೇ ಹುಚ್ಚಾಟವೆಂಬುದೇನೋ ಸ್ಪಷ್ಟ. ಆದರೆ ವೈಟ್ ಫಿಶ್ ಮುದುಕರಾದ ನಮಗೆ ಹೇಗೆ ತಿಳಿಯಬೇಕು ? (ಇತರರರಿಗೆ ಸ್ಪೂರ್ತಿದಾಯಕವಾಗಿ ಮೊದಲ ಕೆಲಸವನ್ನು ನಾನೇ