ಈ ಪುಟವನ್ನು ಪ್ರಕಟಿಸಲಾಗಿದೆ

ಕೊಡಿಯಾಳು ಭೂಪಾಲ

೧೦೧

ಸೇವೆಯು ನನಗೆ ಯಾವಜ್ಜೀವವೂ ತಪ್ಪಲಾಗದೆಂದೂ, ಮಹಾರಾಜರ ಮೇಲೆ ನಾನು ಹಿಡಿಯುತ್ತಿರುವ ಕಡೆಯು ಇನ್ನೊಬ್ಬರ ಕೈ ಸೇರಬಾರದೆಂದೂ ನಾನು ಬೇಡಿಕೊಳ್ಳುತ್ತೇನೆ' ಎಂದು ಕೇಳಿಕೊಂಡನು.

ಕೇರಳಾಧೀಶ್ವರನ, ಅವನ ಮಂತ್ರಿಗಳೂ, ನಾಗರಿಕರೂ, ವಿಪ್ರಮುನಿವರರೂ ಆ ಕೊಡೆಯಾಳ ಭೂಪಾಲನ ಮೇಲೆ ಪುಷ್ಪಾಕ್ಷತೆಗಳ ಮಳೆಗರೆದರು. ಈ ಪುಣ್ಯತಮವಾದ ಕಥೆಗೆ ಮಹಾತ್ಮರಾರ ಫಲಶ್ರುತಿಯನ್ನು ಬರೆಯಲಿಲ್ಲ. ಆದರೆ ಇದರ ಶ್ರುತಿಫಲವಿಲ್ಲವೆಂದು ಮಾತ್ರ ಯಾರೂ ನಂಬಲಾಗದು.

ಇದು ಕಟ್ಟು ಕಥೆಯಲ್ಲ. ನಿಜವಾದ ಇತಿಹಾಸವಿದು. ಕೊಡೆಯಾಳುಭೂಪಾಲನು ಹಾಕಿಕೊಟ್ಟ ಭೂಮಿಗಳ ಸೀಮೆಯ ಕಲ್ಲುಗಳ ಮೇಲೆ ಅಶ್ವಾ ರೂಢನಾದ ರಾಜನ ತಲೆಯ ಮೇಲೆ ಕೊಡೆ ಹಿಡಿದ ಬಂಟನ ಮೂರ್ತಿಗಳು ಇ೦ದಿಗಾದರೂ ಕಾಣುವವೆಂದು ಕೆಲಜನ ಪ್ರವಾಸಿಗಳು ಹೇಳುವುದುಂಟು.