ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ಸಂಪೂರ್ಣ-ಕಥೆಗಳು

ಧರ್ಮಸುಧಾರಣೆಯ ಪ್ರಯತ್ನಕ್ಕೆ ಅಲೌಕಿಕವಾದ ಬೇರೊಂದು ಶಕ್ತಿಯ ಬೆಂಬಲವಾಗಿತ್ತು. ಆ ಶಕ್ತಿಯೆಂದರೆ, ಹಿಪ್ಪಾಟಿಝಮ್ ಅಥವಾ ವಿದ್ಯುನ್ನಾನಸಶಾಸ್ತ್ರವು. ರಾಸಪುಟನನು ತನ್ನ ಕೇವಲವಾದ ಆಶೀರ್ವಾದದಿಂದಲೂ ದೃಷ್ಟಿ ಕ್ಷೇಪದಿಂದಲೂ ಅಸಾಧ್ಯವಾದ ರೋಗಗಳನ್ನು ವಾಸಿಮಾಡುತ್ತಾನೆಂಬ ವಿಶ್ವಾಸವು ಸರ್ವಸಾಧಾರಣರಾದ ಜನರಲ್ಲಿ ನೆಲೆಗೊಂಡಿತ್ತು. ಇಂಥ ಅನುಭವವಾದರೂ ಅನೇಕರಿಗೆ ಬಂದಿತ್ತು. ಕ್ರಮೇಣ, ರಾಸಪುಟಿನನೆಂದರೆ ದೈವೀಚಮತ್ಕಾರಗಳನ್ನು ಮಾಡುವ ಸಿದ್ಧ ಪುರುಷನೂ, ಹರಿಕಗಳನ್ನು ಹೊತ್ತರೆ ಪ್ರಸನ್ನನಾಗುವವನೂ ಎಂಬ ವಿಶ್ವಾಸವು ಧರ್ಮಸಂವಢರ ಜಡಮತಿಗಳೂ ಆದ ಅನಾಥರಿಂದ, ಧನಾಡ್ಯರೂ ಗರ್ಭಶ್ರೀಮಂತರೂ ಆದ ಸರದಾರರ ಕುಟುಂಬಗಳೊಳಗಿನ ಸ್ತ್ರೀಯರ ವರೆಗೆ ದೃಢವಾಗಿದ್ದರಿಂದ ತನ್ನ ಕೈ ಕಾಲುಗಳನ್ನು ಚಾಚಲು ಅವನಿಗೆ ಅವಕಾಶ ದೊರೆಯಿತು. ಇದರಿಂದ ರಾಸಪುಟಿನನ ಶಿಷ್ಯ ಸಂಪತ್ತು ಬೆಳೆಯಿತು;ಹತ್ತರದಲ್ಲಿ ದ್ರವ್ಯ ಸಂಚಯವಾಯಿತು; ಆವನ ಧರ್ಮಮತದ ಪ್ರಸಾರವನ್ನು ಮಾಡುವದಕ್ಕಾಗಿ ಸ್ಥಲ ಸ್ಥಲಾಂತರಗಳಲ್ಲಿ ಧರ್ಮಾಲಯಗಳು ಸ್ಥಾಪಿತವಾದವು ; ರಾಜಧಾನಿಯಾದ ಪೆಟ್ರೋಗ್ರಾಡದಲ್ಲಿ ಕೂಡ ಅವನ ಧರ್ಮಾಲಯದ ಕಾರ್ಯವು ಪ್ರಬಲವಾಗಿ ನಡೆಯಹತ್ತಿತು. ಕೊನೆಯಲ್ಲಿ ಇವನ ಕೀರ್ತಿಯು ಝಾರ ಹಾಗೂ ಝರೀನಾ ಇವರ ಕಿವಿಗಳಿಗೆ ಮುಟ್ಟಿತು.


ರಶಿಯಾದ ರಾಜದಂಪತಿಗಳಿಗೆ ಪುತ್ರ ಪ್ರಾಪ್ತಿಯಾಗದ್ದರಿಂದ ಅವರ ಅಂತಃಕರಣಗಳು ಬಹಳೇ ಖಿನ್ನವಾಗಿದ್ದವು. ಇಂಥ ಸ್ಥಿತಿಯಲ್ಲಿ ರಾಸಪುಟದ ಸಾಧುವಿನ ದೈವೀಚಮತ್ಕಾರದ ವೃತ್ತಾಂತವನ್ನು ಕೇಳಿದವರಾದ ಝರೀನಾ ಇವರ ಮನಸ್ಸಿನಲ್ಲಿ ಆಶಾ೦ಕುರವು ಹುಟ್ಟಿ, ಈ ಸಾಧುವಿನ ಪ್ರಸಾದದಿಂದಾದರೂ ತಮಗೆ ಪುತ್ರಲಾಭವಾಗಲೆಂದು ಅವರು ರಾಜಪುಟಿನನ ಅನುಯಾಯಿ ವರ್ಗವನ್ನು ಸೇರಿದರು. ರಾಣಿಯವರು ಭಕ್ತಿ ಭಾವದಿಂದ ರಾಸಪುಟವನ ದರ್ಶನಕ್ಕೆ ಮೇಲಿಂದ ಮೇಲೆ ಹೋಗಹತ್ತಿದರು. ಕರ್ಮಧರ್ಮಸಂಯೋಗದಿಂದ ಮುಂದೆ ಕೆಲವು ದಿವಸಗಳಲ್ಲಿ ರಾಣಿಯವರಿಗೆ ಮಗ ಹುಟ್ಟಿದನು. ರಾಣಿಯವರಿಗೆ ಈ ಮೊದಲು ನಾಲ್ಕು ಜನ ಹೆಣ್ಣು ಮಕ್ಕಳಾಗಿದ್ಧ ರೂ ವಂಶಾಭಿವೃದ್ಧಿಕರನಾದ ಮಗನು ಹುಟ್ಟಿದ್ದಿಲ್ಲ, ರಾಸಪುಟನನ ಆಶೀರ್ವಾದದಿಂದಲೂ