ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ಸಂಪೂಣ೯- ಕಥೆಗಳು

ಕ್ಷೇತ್ರಕ್ಕೆ ಬಂದನು. ವಿಚಾರ ಮಾಡುತ್ತಿರಲು, ಈ ಬ್ರಹ್ಮಚಾರಿಯು ಆ ವೃದ್ಧನ ವಂಶಕ್ಕೆ ಹೊಂದಿದ ದೂರಿನ ಆಪ್ತನಾಗಿದ್ದನು. ಕ್ಷೇತ್ರಪುರೋಹಿತರ ಹಸ್ತಕದಲ್ಲಿದ್ದ ವಂಶಾವಳಿಯ ಪುಸ್ತಕಗಳನ್ನು ಬ್ರಹ್ಮಚಾರಿಯ ಮುಂದೆ ಬಿಚ್ಚಿಟ್ಟು ಈ ಮಾತಿನ ಸತ್ಯತೆಯನ್ನು ಆ ವೃದ್ಧ ಪುರೋಹಿತನು ಅವನಿಗೆ ಸಿದ್ಧ ಮಾಡಿ ಕೊಟ್ಟನು. ದ ಕವಿಧಾನಕ್ಕೆ ಆ ಬ್ರಹ್ಮಚಾರಿಯ ಸಮ್ಮತಿಯನ್ನು ದೊರಕಿಸಲು ಪುರೋಹಿತನು ಪ್ರಯಸಹತ್ತಿದನು ಬ್ರಹ್ಮಚಾರಿಯ ಮನಸ್ಸಿನ ಪ್ರವೃತ್ತಿಯು ಮಧುಕರಿಯ ವೃತ್ತಿಯ ಕಡೆಗೆ ಪೂರ್ಣವಾಗಿದ್ದರೂ ಅವನು ಪುರೋಹಿತನ ಮಾತುಗಳನ್ನು ಲಕ್ಷ್ಮಗೊಟ್ಟು ಕೇಳುತಿದ್ದನು. ಬರಬರುತ್ತ, ಈ ಮಾತುಗಳ ಪರಿಣಾಮವು ಬ್ರಹ್ಮಚಾರಿಯ ಮನಸ್ಸಿನ ಮೇಲೆ ಆಗಹತ್ತಿದ ಚಿಹ್ನೆಗಳು ಅವನ ಮೋರೆಯ ಮೇಲೆ ಕಾಣಹತ್ತಿದವು. ಪುರೋಹಿತನು ತನ್ನ ಸಂಭಾಷಣದಲ್ಲಿ ಬ್ರಹ್ಮಚಾರಿಯ ಭಾವೀ ಸುಖಗಳ ಹಾಗೂ ವೈಭವದ ಚಿತ್ರಗಳನ್ನು ಒಳ್ಳೆ ಮೋಹಕವಾಗಿ ತೆಗೆಯುತ್ತಿದ್ದನು. ಒಂದು ಪ್ರಸಂಗದಲ್ಲಿ, ಅವನ ಮನಸ್ಸು ಒಳಿತಾಗಿ ಒಲಿದದ್ದನ್ನು ಕಂಡು, ಪುರೋಹಿತನು ಅವನನ್ನು ಈ ರೀತಿಯಾಗಿ ಸಂಬೋಧಿಸಿದನು : "ನಿಮ್ಮ ದತ್ತ ವಿಧಾನವಾಯಿತೆಂದರೆ, ನಿಮಗೆ ಯಾರ ಕೊರತೆ ? ಸ್ವಸ್ಥ ಕುಳಿತು ಐಶ್ವರ್ಯವನ್ನು ಉಪಭೋಗಿಸುವದೇ ನಿಮ್ಮ ಕೆಲಸ ದೇವಾಧಿದೇವತೆಗಳಿ೦ದ ಪ್ರಾರ್ಥಿಸಲ್ಪಟ್ಟ ಲಕ್ಷ್ಮಿಯು ತಾನಾಗಿ ನಡೆದು ನಿಮ್ಮ ಹತ್ತರ ಬಂದಿರಲು, ಅವಳನ್ನು ಧಿಕ್ಕರಿಸಿ ಮಧುಕರಿಯ ಜೋಳಿಗೆಯನ್ನು ಕೈಯಲ್ಲಿ ಹಾಕಿಕೊಳ್ಳುವದು ಎಲ್ಲಿಯ ನ್ಯಾಯವು ? ಸುಂದರಳೂ, ಚತುರಳೂ ಆದ ಕನ್ನಿಕೆಯ ಕೂಡ ನಾವು ನಿಮ್ಮ ವಿವಾಹವನ್ನು ಮಾಡುವವು. ವಿಪುಲವಾದ ಸಂಪತ್ತು ಹಾಗೂ ಮನೋಜ್ಞಳಾದ ಸ್ತ್ರೀಯು ದೊರಕುತ್ತಿದ್ದರೆ, ಉಪವಾಸ ವನವಾಸಪಟ್ಟು ಸ್ವರ್ಗವನ್ನಾದರೂ ಇಚ್ಛಿಸುವದ್ಯಾಕೆ ? ಧರ್ಮವನ್ನೇ ಆಚರಿಸುವದು ನಿಮ್ಮ ಇಚ್ಛೆಯಾಗಿದ್ದರೆ, ಶ್ರೀಮಂತರಾಗಿ ಗೃಹಸ್ಥಾಶ್ರಮದಲ್ಲಿದ್ದು ಧರ್ಮಾಚರಣವನ್ನು ಮಾಡುವದಕ್ಕೆ ನಿಮಗೆ ಯಾವ ಪ್ರತ್ಯನಾಯವು? ಮೇಲಾಗಿ ಈ ಬ್ರಹ್ಮಚರ್ಯವನ್ನು ಕಾಪಾಡುವದರಲ್ಲಿ ಇಲ್ಲವೆ, ಈ ಧರ್ಮಾಚರಣವನ್ನುಆಚರಿಸುವದರಲ್ಲಿ ಉದ್ದೇಶವಾದರೂ ಯಾವದು ? ಪುಣ್ಯ ಪ್ರಾಪ್ತಿಯ ಸಲು