ಈ ಪುಟವನ್ನು ಪರಿಶೀಲಿಸಲಾಗಿದೆ

೨೮

ಸಂಪೂರ್ಣ-ಕಥೆಗಳು

ವಿವಾಹವಾಗಿ ಉಭಯತರಲ್ಲಿ ಪತಿ ಪತ್ನಿಯರ ಸಂಬಂಧವು ಘಟಿತವಾಯಿತು. ಆ ಕಾಲಕ್ಕೆ ಉತ್ತರ ಭಾಗದಲ್ಲಿರುತ್ತಿದ್ದ ತಾರ್ತರ ಜನರಿಗೆ ದಾರಿದ್ರದ ವ್ಯಥೆಯು ಅಸಹ್ಯವಾಗಹತ್ತಿತೆಂದರೆ, ಅವರು ಹಿಂದುಸ್ಥಾನದ ದಾರಿಯನ್ನು ಹಿಡಿಯುತ್ತಿದ್ದರು. ಮನೆ ಬಾಗಿಲವಿಲ್ಲದೆ ಗೃಹಸ್ಥಾಶ್ರಮವನ್ನು ಆರಂಭಿಸಿದ ಸ್ವಾಜಾ ಆಯಾಸನಿಗಾದರೂ ಇದೇ ಮಾರ್ಗವನ್ನು ಅವಲಂಬಿಸಬೇಕಾಯಿತು,

ಪ್ರವಾಸದ ನಿಶ್ಚಯವಾದ ಕೂಡಲೆ ಖ್ಯಾ ಜಾಳಿಯಾಸನು ತನ್ನ ಹತ್ತಿರ ವಿದ್ದ ಎಲ್ಲ ಚೂರು ಚಾರು ಒಡಿವೆಗಳನ್ನು ಮಾರಿ, ಒಂದು ಕುದುರೆ ಮತ್ತು ಸ್ವಲ್ಪು ಹಣ, ಇಷ್ಟು ಸಾಮಗ್ರಿಯನ್ನು ತನ್ನ ಸಂಗಡ ತೆಗೆದುಕೊಂಡು ಪತ್ನಿ ಸಮೇತನಾಗಿ ಹಿಂದುಸ್ಥಾನಕ್ಕೆ ಬರಬೇಕೆಂದು ಹೊರಟನು. ಕೋಮಲ, ಅದರಲ್ಲಿ ಗರ್ಭಿಣಿ ಸ್ಥಿತಿಯನ್ನು ಹೊಂದಿ ತೀರ ಅಶಕ್ತಳಾದ ತನ್ನ ಹೆಂಡತಿಯನ್ನು ಕುದುರೆಯ ಮೇಲೆ ಕುಳ್ಳಿರಿಸಿ, ಖಾಜಾಆಯಾಸನು ಅವಳ ಹಿಂದೆ ನಡೆಯಹತ್ತಿದನು.

ಕೆಲವು ಕಾಲದ ವರೆಗೆ ಎಲ್ಲ ಸಂಗತಿಗಳು ಸುಸೂತ್ರವಾಗಿ ನಡೆದವು. ಆದರೆ ಅವರು ಮಾಡೆತಕ್ಕೆ ಪ್ರವಾಸವು ಅವರು ಯೋಚಿಸಿದಷ್ಟು ಸನಿವಾಸ ವುಳ್ಳದ್ದಾಗಿದ್ದಿಲ್ಲ; ಹಾಗು ಹತ್ತಿರವಿದ್ದ ಗಂಟು ಸಾಕಾಗುವಂತಿದ್ದಿಲ್ಲ. ಹತ್ತರ ವಿದ್ದ ಎಲ್ಲ ಹಣವು ತೀರಿಹೋದ ಬಳಿಕ ಅವರು ದೊಡ್ಡ ಪೇಚಿನಲ್ಲಿ ಬಿದ್ದರು. ಭಿಕ್ಷೆಯ ವೃತ್ತಿಯನ್ನು ಸ್ವೀಕರಿಸಿ ಕೆಲವು ದಿವಸಗಳ ವರೆಗೆ ತಮ್ಮ ಮಾರ್ಗ ಕ್ರಮಣವನ್ನು ಮಾಡಿದರು. ಇವರು ಹಿಂದುಸ್ಥಾನ ಮತ್ತು ತಾರ್ತರಿ ಇವುಗಳ ಮಧ್ಯದಲ್ಲಿರುವ ಸಿರ್ಜನವಾದ ಪ್ರದೇಶ: ಸೀಮೆಯನ್ನು ಹೊಕ್ಕ ಬಳಿಕ ಪ್ರಾರಂಭವಾದ ಇವರ ಕಷ್ಟಾ ಪೇಷ್ಟೆಗಳ ವರ್ಣನ ಮಾಡು ವದು ತೀರ ಅಶಕ್ಯವಾದದ್ದು. ಅಸಹ್ಯವಾದ ಕಟಕಟ ಚಳಿ ಚು ; ರಾತ್ರಿ ಯಲ್ಲಾದರೂ ವಿಶ್ರಮಿಸಿಕೊಳ್ಳಬೇಕೆಂದರೆ ಗಂಡು ಸಲ ಸಹ ಇಲ್ಲ; ಸc ಕಟ ದಲ್ಲಿ ಯಾರನ್ನಾದರೂ ಕರೆಯಬೇಕೆ ದರೆ, ಇವರ ಕೂಗು ಕೇಳಿ ಸವಿಾಸದಲ್ಲಿ ರುವವರು ಯಾರಾದರೂ ಸಹಾಯಾರ್ಥ ಬಂದಾರೆಂದು ಕಲ್ಪಿಸುವದು ಸಹ ತೀರ ಅಸಂಭವವು; ಹಿಂದಕ್ಕೆ ತಿರುಗಿ ಹೋಗಬೇಕೆಂದರೆ, ತಮ್ಮ ದೇಶವು ಬಹಳೀ ದೂರ ಉಳಿದದ್ದರಿಂದ ಮಾರ್ಗದಲ್ಲಿ ಉಂಟಾಗುವ ಅಸಂಖ್ಯ ದುಃಖ ಗಳ ಕಲ್ಪನೆಯು ಅವರ ಮುಂದೆ ಬಂದು ನಿಲ್ಲುತ್ತಿತ್ತು; ಮುಂದೆ ಹೋಗ