ಈ ಪುಟವನ್ನು ಪ್ರಕಟಿಸಲಾಗಿದೆ

ನೂರಜಹಾನ

೪೩

ಪ್ರಿಯವಾದದ್ದನ್ನು ಮಾಡುವದರ ಸಲುವಾಗಿ ಯೋಚಿಸಿದ ಯುಕ್ತಿಯನ್ನು ಕಡೆಗಣಿಸುವದರಲ್ಲಿ ಕುತುಬನು ತನ್ನ ಜೀವಕ್ಕೆ ಎರವಾದನು, ಮತ್ತು ವಿಶ್ವಾಸಘಾತಕ ತನದ ಯೋಗ್ಯವಾದ ಪ್ರಾಯಶ್ಚಿತ್ತವು ಅವನಿಗೆ ದೊರೆಯಿತು.

ಈ ರೀತಿಯಾಗಿ ಕುತುಬಶಹನ ಪರಿಸಮಾಪ್ತಿಯಾದ ಬಳಿಕ, ಶೇರಆಫಗನನು ತನ್ನ ಸುತ್ತ ಸುಂದರವಾಗಿ ನಿಂತಿದ್ದ ಜವಾನರ ಕಡೆಗೆ ದೃಷ್ಟಿಯನ್ನು ಹೊಳ್ಳಿಸಿದನು. ಕೆಲ ಹೊತ್ತು ಚಕಮಕಿ ಹಾರಿದ ಬಳಿಕ ಕುತುಬನ ಸಂಗಡದಲ್ಲಿದ್ದ ನಾಲ್ಕು ಜನ ಸರದಾರರು ಗತಪ್ರಾಣರಾದರು. ಉಳಿದ ಸರದಾರರೂ ಶಿಖಾಯರೂ ಭಯಚಕಿತರಾಗಿ ಓಡಿ ಹೋಗಿ ದೂರದಲ್ಲಿ ನಿಂತುಕೊಂಡು, ಶೇರಆಫಗನನ ಮೇಲೆ ಗುಂಡು ಮತ್ತು ಬಾಣಗಳ ವೃಷ್ಟಿಯನ್ನು ಮಾಡಹತ್ತಿದರು ಶೇರಅಫಗನನ ಕುದುರೆಗೆ ಒಂದು ಗುಂಡು ತಗಲಿ ಅದು ಸತ್ತು ನೆಲಕ್ಕೆ ಬಿದ್ದಿತು. ಮುಂದೆ ಯಾವ ಉಪಾಯವೂ ಉಳಿಯಲಿಲ್ಲೆಂಬದನ್ನು ಕಂಡು ಶೂರನಾದ ಶೇರಅಫಗನನಿಗೆ ಬಹಳ ವಿಷಾದವೆನಿಸಹತ್ತಿತು. ಅವನು ಆ ಅಸಂಖ್ಯ ಶಿಪಾಯರ ಹೇಡಿತನಕ್ಕಾಗಿ ಅವರ ನಿರ್ಭತ್ಸನೆಯನ್ನು ಮಾಡಿದನು. “ನೀವು ಒಬ್ಬೊಬ್ಬರೇ ನನಗೆ ಎದುರಾಗಿ ಶಣರರಿಗೆ ಉಚಿತವಾಗಿರುವ ಮಾರ್ಗದಿಂದ ಕ್ಷಾತ್ರಧರ್ಮದ ಆಚರಣೆಯನ್ನು ಮಾಡಿರಿ" ಮುಂತಾದ ಅನೇಕ ಮಾತುಗಳನ್ನು ಆಡಿದರೂ ಆ ದುಷ್ಟರು ಅವನ ವಿನಂತಿಯನ್ನು ಮಾನ್ಯ ಮಾಡಲಿಲ್ಲ. ಇನ್ನು ಮೇಲೆ ನಿಶ್ಚಿತವಾಗಿ ಮರಣದ ಹೊರತು ಗತ್ಯಂತರವಿಲ್ಲೆಂದು ಯೋಚಿಸಿ, ತನ್ನ ಕೈಯೊಳಗಿನ ಖಡ್ಗವನ್ನು ನೆಲಕ್ಕೆ ಚೆಲ್ಲಿ ಮಕ್ಕೆಯ ದಿಕ್ಕಿಗೆ ಸಮ್ಮುಖನಾಗಿ, ಅಲ್ಲಿ ಅವನಿಗೆ ಆ ಕಾಲಕ್ಕೆ ನೀರು ಸಹ ದೊರೆಯದ್ದರಿಂದ, ಮೃತ್ತಿಕೆಯ ಸ್ನಾನವನ್ನು ಮಾಡಿ ಪರಮೇಶ್ವರನನ್ನು ಪ್ರಾರ್ಥಿಸಿ, ಆ ಬಳಿಕ ಶಾಂತನಾಗಿ ನಿಂತುಕೊಂಡನು. ಆದರೂ ಅವನ ಹತ್ತಿರ ಹೋಗುವದಕ್ಕೆ ಶತ್ರುಗಳು ಧೈರ್ಯಪಡಲಿಲ್ಲ. ಬಂದೂಕಿನ ಆರು ಗುಂಡುಗಳು ಅವನ ಮೈಯಲ್ಲಿ ನಟ್ಟವು. ಅದರಿಂದ ಅವನು ವಿಹ್ವಲನಾಗಿ ಮೃತ್ಯುಲೋಕವನ್ನು ಬಿಟ್ಟು ಹೋದನು. ಅವನು ಗತಪ್ರಾಣನಾಗಿ ನೆಲದ ಮೇಲೆ ಬಿದ್ದ ಬಳಿಕ ಸಹ ಶತ್ರುಗಳು ಅವನ ಮೇಲೆ ಭೀತಿಯಿಂದ ಗುಂಡುಗಳನ್ನು ಹಾಕುತ್ತಿದ್ದರು. ಶತ್ರು ಪಕ್ಷದವರು ಸಹ ಅವನ ಶೌರ್ಯದ ವರ್ಣನೆಯನ್ನು ಮಾಡಿದರು. ಆದರೆ ಅವರು ಅವನ ಕೀರ್ತಿಯನ್ನು ಹಚ್ಚಿ