ಈ ಪುಟವನ್ನು ಪ್ರಕಟಿಸಲಾಗಿದೆ

೪೬

ಸಂಪೂರ್ಣ-ಕಥೆಗಳು

ಬಾದಶಹನು ಸಂತೊಸ ಭರಿತನಾಗಿ ಕಂಬದಂತೆ ನಿಂತುಕೊಂಡನು.

ಸ್ವಲ್ಪ ಹೊತ್ತಿನಮೇಲೆ ಬಾದಶಹನ ಚಿತ್ರವು ಸ್ಥಿರವಾದ ಬಳಿಕ ಮಂಚದಮೇಲೆ ಕುಳಿತುಕೊಂಡನು; ಮತ್ತು ನೂರಮಹಾಲಳಿಗಾದರೂ ವಿಶ್ರಮಿಸಿಕೊಳ್ಳುವದಕ್ಕಾಗಿ ಹೇಳಿದನು. ಬಳಿಕ ಬಾದಶಹನು ನೂರಮಹಾಲಳಿಗೆ ಉದ್ದೇಶಿಸಿ : "ನಿಮ್ಮ ದಾಸೀಜನರೆಲ್ಲರೂ ಪರಿಪರಿಯ ವಸ್ತ್ರಾಲಂಕಾರ ಭೂಷಣಗಳಿಂದ ಭೂಷಿತರಾಗಿರಲು ಅವರ ಸ್ವಾಮಿನಿಯರಾದ ತಾವು ಮಾತ್ರ ತೀರ ಸಾಧಾರಣಪ್ರತಿಯ ವೇಷವನ್ನು ಧರಿಸುವದೆಂದರೆ, ಆಶ್ಚರ್ಯವೇ ಸರಿ.”

ಆಗ್ಗೆ ಚತುರಳಾದ ಆ ಸ್ತ್ರೀಯು ಉತ್ತರವನ್ನು ಕೊಟ್ಟಿದ್ದೇನಂದರೆ, "ಈ ದಾಸೀಜನರು ನನ್ನ ಸೇವಕರು, ನನ್ನ ಇಚ್ಛೆಗನುಸರಿಸಿ ನಾನು ಇವರಿಗೆ ವಸ್ವಾಭೂಷಣಗಳನ್ನು ಕೊಡುತ್ತೇನೆ; ಮತ್ತು ನನ್ನ ತಿಳುವಳಿಕೆಯ ಪ್ರಕಾರ ಇವರ ಹೀನಸ್ಥಿತಿಯನ್ನು ದೂರಮಾಡಲು ಪ್ರಯತ್ನಿಸುತ್ತೇನೆ. ನಾನು ಅವರ ಸ್ವಾಮಿನಿಯಾಗಿರುವದರಿಂದ ನನ್ನ ಇಚ್ಛೆಯ ಪ್ರಕಾರ ಅವರಿಗೆ ನಡೆದು ಕೊಳ್ಳಬೇಕಾಗುತ್ತದೆ. ಆದರೆ ಶಹಾನಶಹನೇ, ನಾನು ಈ ನಮ್ಮ ಚರಣ ಕಮಲಗಳ ದಾಸಿಯಾಗಿರುವದರಿಂದ ನನ್ನ ವೇಷವ ತಮ್ಮ ಮನೋದಯಾನು ರೂಪವಾಗಿಯೇ ಇರಬೇಕು. ಬಾದಶಹರ ಇಚ್ಛೆಯು ನನಗೆ ತಿಳಿಯ ಬಂತೆಂದರೆ ಅದಕ್ಕನುಸಾರವಾಗಿ ನಾನು ನಡೆದುಕೊಳ್ಳುವೆನು."

ಆರು ವರ್ಷಗಳ ಏಕಾಂತವಾಸದಿಂದ ನೂರಮಹಾಲಳ ಚಿತ್ತವು ಚಂಚಲವಾಗಿತ್ತು; ಮತ್ತು ಬಾದಶಹನೇ ತನ್ನ ಪತಿಯ ಮರಣಕ್ಕೆ ಕಾರಣನಾಗಿದ್ದನೆಂಬ ಸಂಗತಿಯ ವಿಸ್ಮರಣನವು ಅವಳಿಗೆ ಆಗಹತ್ತಿತ್ತು. ಅವಳ ಕೂಡ ಸಂಭಾಷಣೆಯು ನಡೆದಾಗ ಬಾದಶಹನ ಪೂರ್ವದ ಪ್ರೇಮವು ಜಾಗೃತವಾಗಿ ಪ್ರೀತಿ ಪೂರ್ಣ ಅಂತಃಕರಣದಿಂದ ಅವಳನ್ನು ಆಲಿಂಗಿಸಿ, ನಡೆದು ಹೋದ ಸಂಗತಿಗಳನ್ನು ಮರೆತುಬಿಡುವದಕ್ಕಾಗಿ ಅವಳಿಗೆ ಹೇಳಿಕೊಂಡನು. ಮತ್ತು ತತ್ಕ್ಷಣವೇ ದೊಡ್ಡ ಆಕಾರಗಳುಳ್ಳ ನಾಲ್ವತ್ತು ಮುತ್ತುಗಳ ಒಂದು ಅಮೌಲ್ಯವಾದ ಮುಕ್ತಾಹಾರವನ್ನು ತನ್ನ ಸ್ವಹಸ್ತದಿಂದ ಅವಳ ಕಂಠದಲ್ಲಿ ಹಾಕಿ "ನಾನು ನಿನ್ನನ್ನು ನನ್ನ ಸಿಂಹಾಸದ ಸ್ವಾಮಿಯನ್ನು ಮಾಡುವೆನೆಂಬ' ಮಧುರ ವಾಕ್ಯವನ್ನು ಅವಳ ಕಿವಿಯಲ್ಲಿ ನುಡಿದನು. ಕೂಡಲೆ