ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಸಂಪೂರ್ಣ-ಕಥೆಗಳು

ವಾದ ಬಡಿದಾಟವು ಮಕ್ಕಳಲ್ಲಿ ನಡೆಯಿತು. ತಂದೆಯ ಹಿಂದೆ ಬೆಟ್ಟದ ಮೇಲೆ ಕೂಡುವ ಅಧಿಕಾರವು ಶಹಾಜಹಾನನದೆಂದು ಸರ್ವಸಾಧಾರಣ ತಿಳುವಳಿಕೆ ಯಾಗಿತ್ತು; ಆದರೆ ಕೆಲವರ ಮನೋದಯವು ನೂರಜಹಾನಳ ಅಳಿಯನಾದ ಶಜಾರಿಆರನಿಗೆ ಪಟ್ಟವು-ದೊರೆಯಬೇಕೆಂದಿತ್ತು. ಶಹಾಜಹಾನನು ಬಂಡಾಯವನ್ನು ಮಾಡಿದನು; ಆದರೆ ಆದರಲ್ಲಿ ಅವನ ಪರಾಜಯವಾಗಿ ತಂದೆಯ ಕ್ಷಮೆಯನ್ನು ಅವನು ಬೇಡಿಕೊಳ್ಳಬೇಕಾಯಿತು ಎತ್ತು ತಂದೆಯಾದರೂ ಅವನಿಗೆ ಕ್ಷಮೆಯನ್ನು ನೀಡಿದನು, ಶಹಾಜಹಾನನ ಬಂಡಾಯವು ಮುರಿದು ಶಾಂತತೆಯು ನೆಲೆಗೊಳ್ಳುವಷ್ಟರಲ್ಲಿ ಮೋಹಬತಖೆ ನನೆಂಬ ಒಬ್ಬ ಬಲಿಷ್ಠ ಮತ್ತು ಸುಪ್ರಸಿದ್ಧ ಸರದಾರನು ಬಂಡಾಯವನ್ನು ಆರಂಭಿಸಿದನು. ಬಂಡಾಯದಲ್ಲಿ ನೂರಜಹಾನಳು ಒಳ್ಳೆ ಧೈರ್ಯವನ್ನು ತೋರಿಸಿದಳು ಮೋಹಬತಖಾನನಿಗೆ ಸರಿಯಾದ ವಿಜಯಶಾಲೀ ಸರದಾರನು ಆ ಕಾಲಕ್ಕೆ ಮತ್ತೊಬ್ಬನಿದ್ದಿಲ್ಲ. ರಾಜ್ಯದ ಸಂರಕ್ಷಣೆಗಾಗಲೀ ಅಥವಾ ರಾಜ್ಯ ಕಾರಸ್ಥಾನದ ಸಿಧ್ಯರ್ಥನಾಗಲೀ ಅವನು ಕತ್ತಿಯನ್ನು ಹಿರಿದುಕೊಂಡು ನಿಂತರೆ, ಅವನ ಸುತ್ತಲೂ ಸಾವಿರಾರು ನುರಿತ ವೀರರು ವಿಲಂಬ ಹತ್ತದೆ ಮಿಲಿತವಾಗುವಂತೆ ಅವನ ಕೀರ್ತಿಯು ತುಂಬಿಕೊಂಡಿತ್ತು. ಈ ಸರದಾರನು ಬಂಗಾಲದ ಸುಭೇದಾರನಾಗಿದ್ದನು. ಇವನ ರಾಜ್ಯ ಕಾರಭಾರದಲ್ಲಿ ದ್ರವ್ಯದ ದುರ್ವಿನಿಯೋಗವಾಗಿದೆಂಬ ಸಂಗತಿಯ ವಿಚಾರಣೆಯು ದರಬಾರದಲ್ಲಿ ನಡೆದಿತ್ತು. ಆದ್ದರಿಂದ ಕೂಡಲೆ ದರಬಾರದಲ್ಲಿ ಬಂದು ಹಾಜರಾಗುವದಕ್ಕೆ ಅವನಿಗೆ ಅಪ್ಪಣೆಯಾಗಿತ್ತು. ತನ್ನ ಮೇಲೆ ಮಿಥ್ಯಾರೋಪ ಬಂದಿರುತ್ತದೆಂದು ಜಾಹೀರಪಡಿಸಿ ದರಬರಕ್ಕೆ ಹೋಗುವದನ್ನು ಅವನು ಶಸ್ಪಿ ಸಹ ದನು, ಆದರೆ ದರಬಾರಕ್ಕೆ ಬರಲೇಬೇಕೆಂದು ವಿಶೇಷವಾದ ಆಗ್ರಹವಾಗಲು, ಅವನಿಗೆ ದಿಲ್ಲಿಗೆ ಹೊಗುವದು ಅಗತ್ಯವಾಯಿತು, ದಿಲ್ಲಿಗೆ ಹೋಗುವ ಕಾಲಕ್ಕೆ ಐದು ಸಾವಿರ ರಜಪೂತ ವೀರರು ಅವನ ಸಂಗಡದಲ್ಲಿದ್ದರು.

ಜಹಾಂಗೀರ ಬಾದಶಹನು ಕಾಬೂಲದ ಮೇಲೆ ದಂಡೆತ್ತಿ ಹೋಗುವ ತಯಾರಿಯಲ್ಲಿದ್ದನು. ಬಾದಶಾಹೀ ಸೈನ್ಯದ ತಳವು ತುಸು ಅ೦ತರದ ಮೇಲಿದದ್ದನ್ನು ಕಂಡು, ವಾದಗ್ರಸ್ತವಾದ ಏಷಯದ ನಿರ್ಣಯವನ್ನು ಮಾಡುವದಕ್ಕಾಗಿ ಮೊಹಬತಖಾನನು ತನ್ನ ಅಳಿಯನನ್ನು ಮುಂದೆ ಕಳಿಸಿದನು;