ಈ ಪುಟವನ್ನು ಪ್ರಕಟಿಸಲಾಗಿದೆ
೫೦
ಸಂಪೂರ್ಣ-ಕಥೆಗಳು

ವೇಷಾಂತರವನ್ನು ಮಾಡಿ ಹೊರಬಿದ್ದಳು. ಮತ್ತು ಪಾಲಿಕೆಯನ್ನೇರಿ ಸೈನ್ಯವನ್ನು ಕೂಡಿಕೊಂಡಳು. ತನ್ನ ತಮ್ಮನಿಗೂ, ಮುಖ್ಯ ಮುಖ್ಯ ಸರದಾರರಿಗೂ ತನ್ನೆದುರಿಗೆ ಕರೆ ತರಿಸಿ, ಬಾದಶಹನು ಈ ರೀತಿಯಾಗಿ ಗಂಡಾಂತರದಲ್ಲಿ ಬೀಳುವಷ್ಟು ದುರ್ಲಕ್ಷವು ಅವರಿಂದ ಹ್ಯಾಗೆ ಸಂಭವಿಸಿತೆಂದು ಅವರ ನಿರ್ಭತ್ಸನೆಯನ್ನು ಮಾಡಿದಳು.

ಬಾದಶಹನ ಮುಕ್ತತೆಗಾಗಿ ಎಲ್ಲ ಸೈನ್ಯವು ಮರುದಿವಸ ಹೊರಬೀಳಬೇಕೆಂದು ಆ ಕ್ಷಣೆಯನ್ನು ಮಾಡಿ, ಸೈನ್ಯದ ಆಧಿಪತ್ಯವನ್ನು ತನ್ನ ಕಡೆಗೆ ತೆಗೆದುಕೊಂಡ ಒಂದು ಬಲಾಢವಾದ ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತುಕೊಂಡ. ಸೈನ್ಯಕ್ಕೆ ಅಪ್ಪಣೆ ಮಾಡಹತ್ತಿದಳು; ಆದರೆ ನದಿಯು ಪಾತ್ರವು ಬಹಳ ದೊಡ್ಡದಿದ್ದದರಿಂದ, ಮತ್ತು ಅದರ ಮೇಲಿನ ಪೂಲು ಸುಟ್ಟು ಹೋದ್ದರಿಂದ ಅವಳ ಪ್ರಯತ್ನವು ನಿಷ್ಪಲವಾಗಹತ್ತಿತು. ಇತ್ತ ಮೋಹಬತಖಾನನ ಸೈನ್ಯದವರು ಒಳ್ಳೆ ರಭಸದಿಂದ ಹೋರಾಡಿ ನೂರ ಜಹಾನಳ ಸೈನ್ಯವನ್ನು ಸೋಲಿಸಿ ಓಡಿಸಿಬಿಟ್ಟರು.

ಪರಾಭೂತಳಾದ ರಾಣಿಯನ್ನು ಹಿಡಿಯುವದರ ಸಲುವಾಗಿ ಮೋಹ ಬರಖಾನನು ವಿತಿಮಿಾರಿ ಪ್ರಯತ್ನ ಪಟ್ಟನು; ಆದರೆ ಅವಳಿಲಿ ಒಳ್ಳೇ ಧೂರ್ತತೆಯಿಂದ ಜನನ ಕೈಯೊಳಗಿಂದ ಪಾರಾಗಿ ಲಾಹೋರಕ್ಕೆ ಹೋದಳು. ಅದರಿಂದ ಮೇ ಜಬತಖಾನನ ಎಲ್ಲ ಪ್ರಯತ್ನಗಳು ನಿಷ್ಪಲವಾದವು. ಕೊನೆಗೆ ಆವನು ಬಾದಶಹನ ಕಡಿಂದ " ಎಲ್ಲ ಸಂಗತಿಗಳ ನಿರ್ಣಯವು ಅನುಕೂಲವಾಗಿದೆ; ಇನ್ನು ಮೇಲೆ ಬಾದಶಹನನ್ನು ಬಂದು ಕೂಡುವದಕ್ಕೆ ಯಾವ ಪ್ರಕಾರದ ಭೀತಿಯೂ ಇಲ್ಲ”ವೆಂದು ಬಲಾತ್ಕಾರದಿಂದ ಅವಳಿಗೆ ಪತ್ರಗಳನ್ನು ಬರೆಸಿದನು. ಈ ಪತ್ರಗಳನ್ನು ನೋಡಿ ಅವಳ ಮನಸಿನೊಳಗಿನ ಎಲ್ಲ ಸಂಶಯವು ನಷ್ಟವಾಯಿತು; ಬಾದಶಹನ ಬಿಡಾರಕ್ಕೆ ಹೋಗುವದರ ಸಲುವಾಗಿ ಅವಳು ಲಗುಬಗೆಯಿಂದ ಹೊರಟಳು. ಬಿಡಾರದ ಸಮಾಪಕ್ಕೆ ಬಂದ ಕೂಡಲೆ, ಖಾನನ ಸೈನ್ಯದವರು ಅವಳನ್ನು ಸುತ್ತು ಹಾಕಿ, ಸೆರೆಹಿಡಿದು ಬಾದಶಹನ ಮುಂದೆ ತಂದು ನಿಲ್ಲಿಸಿದರು. ತನ್ನ ಅಳಿಯನಾದ ಶಹಾರಿಯಾರನನ್ನು, ಪಟ್ಟದ ಮೇಲೆ ಕೂಡಿ ಸುವದಕ್ಕಾಗಿ ಇವಳ ಪ್ರಯತ್ನಗಳು ನಡೆದದ್ದರಿಂದ ಇವಳು ರಾಜದ್ರೋಹವನ್ನು ಮಾಡಿದಂತಾಯಿತು; ಮತ್ತು ಇದಕ್ಕಾಗಿ ಇವ