ವಲ್ಕ್ಯರು-“ನಾನು ದಿನಾಲು ಹೋಗುವದಿಲ್ಲ. ನನ್ನ ಸರತಿಬಂದಾಗ ಹೋಗುವೆನು" ಎಂದು ಉತ್ತರಕೊಟ್ಟರು. ಅದನ್ನು ಕೇಳಿ ವೈಶಂಪಾಯನರು ಕೋಪಗೊಂಡು-- "ಆಮ್ನಾಯಂ ದೇಹಿ ಮೇ ಶೀಘ್ರಂ ಯದಿ ತತ್ರ ನ ಗಚ್ಛಸಿ| ನಿರ್ಗಚ್ಚ ಭವನಾದಸ್ಮಾ ನ್ನೃಶಂಸ ಗುರುನಿಂದಕ || ” ಅಂದರೆ, “ ಅರಸನ ಬಳಿಗೆ ಹೋಗದಿದ್ದರೆ ನನ್ನ ವೇದವನ್ನು ನನಗೆ ತಿರುಗಿ ಕೊಟ್ಟು ಇಲ್ಲಿಂದ ಹೊರಟುಹೋಗು; ಯಾಕಂದರೆ ನೀನು ಗುರ್ವಾಜ್ಞೆ ಯನ್ನು ಮೀರುವವನೂ, ಗುರುನಿಂದಕನೂ ಆಗಿರುತ್ತೀ ” ಎಂದು ನುಡಿದರು. ಆಗ ಯಜ್ಞವಲ್ಕ್ಯರು ರಕ್ತರೂಪದಿಂದ ವೇದವನ್ನು ಕಾರಿ, ಗುರುವನ್ನು ನಮಸ್ಕರಿಸಿ ಹೊರ ಟುಹೋದರು. ಉಳಿದ ಶಿಷ್ಯರು ಗುರುವಿನ ಆಪ್ಪಣೆಯಿಂದ ತಿತ್ತಿರಿರೂಪಗಳನ್ನು ಧರಿಸಿ ಆ ಕಾರಿಕೆಯನ್ನು ಭಕ್ಷಿಸಿದರು. ಆದ್ದರಿಂದ ತೈತ್ತಿರೀಯಶಾಖೆಯು ಉತ್ಪನ್ನವಾಯಿತು. ಮುಂದೆ ಯಜ್ಞವಲ್ಕ್ಯರು ವಿರಜಾತೀರ್ಥಕ್ಕೆ ಬಂದು ಶಿವನನ್ನು ಆರಾಧಿಸಿದರು. ಆಗ ಶಿವನು ಪ್ರತ್ಯಕ್ಷನಾಗಿ ಯಾಜ್ಞವಲ್ಕ್ಯರನ್ನು ಸೂರ್ಯನ ಬಳಿಗೆ ಕಳಿಸಿದನು. ಅಲ್ಲಿ ಹೋಗಿ ಯಜ್ಞವಲ್ಕ್ಯರು ಋಗಾದಿ ಯಾವತ್ತು ವೇದಗಳ ಅಧ್ಯಯನ ಮೂಡಿದರು.
ಈ ವಿವಾದದ ರಹಸ್ಯವು ವಿಚಾರಣೀಯವಾಗಿರುತ್ತದೆ; ಇತ್ತ ವೈಶಂಪಾಯನರು
ಸಾಮನ್ಯರಲ್ಲ ; ಬ್ರಹ್ಮಜ್ಞರು, ಶಾಂತರು, ವ್ಯಾಸಶಿಷ್ಯರು. ಅತ್ತ ಯೊಜ್ಞವಲ್ಕ್ಯರೂ ಸಾಮನ್ಯರಲ್ಲ ; ಮಹಾಜ್ಞಾನಿಗಳು, ಅತ್ಯಂತ ತೇಜಸ್ವಿಗಳು, ತಮ್ಮ ಆಶೀರ್ವಚನದಿಂದ ನಿರ್ಜೀವವಸ್ತುವನ್ನು ಸಜೀವಗೊಳಿಸುವಂಥ ಮಹಾಮಹಿಮೆಯುಳ್ಳವರು. ಅಂದಬಳಿಕ ಇಂಥವರಲ್ಲಿ ವಿವಾದವು ಉತ್ಪನ್ನವಾದ ಬಗೆಯೇನು ? ಲೋಕಕಲ್ಯಾಣಕ್ಕಾಗಿ ಪ್ರಕಟ ವಾಗುವ ಸತ್ಪುರುಷರೂಪ ವಿಭೂತಿಗಳ ಪ್ರತಿಒಂದು ಕೃತಿಯಿಂದ - ಆಕೃತಿಯು ಶ್ಲಾಘ್ಯ ವಿರಲಿ, ಅಶ್ಲಾಘ್ಯವಿರಲಿ ಲೋಕಕಲ್ಯಾಣವೇ ಆಗುವದೆಂದು ಹೇಳಬೇಕಾಗುತ್ತದೆ. ಅಜ್ಞಾ ನಿಗಳುಮಾತ್ರ ಇದನ್ನು ಎಣಿಸದೆ ವಿಕಲ್ಪವನ್ನು ಭಾವಿಸುವರು. ಮಹಾಮಹಾಋಷಿಗಳು ಪ್ರತ್ಯಕ್ಷ ದೇವರನ್ನು ಶಪಿಸಿ ಲೋಕಕಲ್ಯಾಣವನ್ನುಂಟುಮೂಡಿರುವರು. ಭಗವಂತನ ದಶಾ ವತಾರಗಳೇ ಇದಕ್ಕೆ ಸಾಕ್ಷಿಯಾಗಿರುವವು. ಸತ್ಪುರುಷರ ನಿಗ್ರಹಾನುಗ್ರಹಗಳಂತ, ಅವರ ಸ್ನೇಹ-ಕಲಹಗಳೆರಡೂ ಕಲ್ಯಾಣಕಾರಕಗಳಾಗಿಯೇ ಇರುವವೆಂಬದನ್ನು ಮರೆಯಲಾ ಗದು. ಮಹಾತ್ಮರಾದ ವೈಶಂಪಾಯನರು ಬ್ರಹ್ಮಹತ್ಯಾದೋಷದಿಂದ ವ್ಯಾಕುಲಚಿತ್ತರಾಗಿ ಶಿಷ್ಯನನ್ನು ನಿಗ್ರಹಿಸಿದಂತೆ ತೋರಿದರೂ, ಅದರಿಂದ ಶಿಷ್ಯನ ನಿಜವಾದ ತೇಜೋವೈಭವವು ಪ್ರಕಟವಾಗಿ, ಅದು ಜಗತ್ತಿನ ಕಲ್ಯಾಣಕ್ಕೇ ಕಾರಣವಾದದ್ದರಿಂದ ಇದೊಂದು ಈಶ್ವರೀ ಸಂಕಲ್ಪವೆಂತಲೇ ಒಪ್ಪಬೇಕಾಗುವದು. ಇರಲಿ. ಯೋಗೀಶ್ವರರಾದ ಯಾಜ್ಞವಲ್ಕ್ಯರು ಗುರ್ವಾಜ್ಞೆಯಂತೆ ಯಜುರ್ವೇದವನ್ನು ಕಾರಿ, ಸೂರ್ಯನಾರಾಯಣನನ್ನು ಕುರಿತು ತಪ ಸ್ಪನ್ನಾಚರಿಸಲು, ಆ ಲೋಕಚಕ್ಷುವು ಪ್ರಸನ್ನನಾಗಿ- "ಎಲೈ ಬ್ರಾಹ್ಮಣಶ್ರೇಷನೇ, ನಿನಗೆ ಕಲ್ಯಾಣವಾಗಲಿ. ನಿನ್ನ ತಪಸ್ಸು ಸಿದ್ಧವಾಗಿರುವದು. ನಿನಗೆ ಬೇಕಾದದ್ದನ್ನು ಬೇಡಿಕೋ” ಎಂದು ಹೇಳಿದನು. ಆಗ ಯಾಜ್ಞವಲ್ಕ್ಯರು ಸೂರ್ಯನಾರಾಯಣನನ್ನು ಪೂಜಿಸಿ ಕೈ ಜೋಡಿಸಿ ನಿಂತುಕೊಂಡು-- "ನೀನು ವರಪ್ರದಾನವೂಡುವದಾದರೆ, ನಮ್ಮ ಗುರುಗಳಾದ