ವಾಗಿ ಯಜುರ್ವೇದದ ವಿಷಯದಲ್ಲಿ ಬಹಳ ಪ್ರಸಿದ್ಧವಾಗಿದ್ದರೂ, ಅವರಿಗೆ ಋಕ್ಸಾಮಾದಿಗಳಲ್ಲಿಯೂ ಅಪಾರವಾದ ಪರಿಚಯವಿತ್ತು. ಅವರು ಈ ಮೂರುವೇದ ಗಳಲ್ಲಿಯೂ ಪಾಠವನ್ನು ಹೇಳುತ್ತಲಿದ್ದರು; ಆದರೆ ಅವರ ಶುಕ್ಲ ಯಜುರ್ವೇದ ವಿಷಯದ ಉಪನ್ಯಾಸಗಳು, ಉಳಿದವೇದವೇದಾಂಗಗಳ ಉಪನ್ಯಾಸಗಳಿಗಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳ ಚಿತ್ತವನ್ನು ಆಕರ್ಷಿಸುತ್ತಲಿದ್ದವು. ವೇದವ್ಯಾಸರ ಮೊಮ್ಮಗನಾದ (ಮಗಳಮಗನಾದ) ಮಹಾಯೋಗಿ ಬ್ರಹ್ಮದತ್ತನು ಯಾಜ್ಞವಲ್ಕ್ಯರ ಶಿಷ್ಯನಾಗಿ, ನಾಲ್ಕೂ ವೇದಗಳ ಅಧ್ಯಯನಮಾಡಿದನು. ಮುಂದೆ ಬ್ರಹ್ಮದತ್ತನು ಒಂದುಶ್ರೇಷ್ಠ ವಾದ ಯಜ್ಞವನ್ನು ಆರಂಭಿಸಲು, ವೈಶಂಪಾಯನ, ಪೈಲ, ಮೊದಲಾದ ದೊಡ್ಡದೊಡ್ಡ ಋಷಿಗಳು ಕೂಡಿದರು. ಆಗ ಕೆಲವರು ಶಂಕಿತರಾಗಿ ಯಾಜ್ಞವಲ್ಕ್ಯರನ್ನು ಕುರಿತು -- "ಪೌರುಷೇಯವಾಗಿ ತೋರುವ ಈ ಶುಕ ಯಜುರ್ವೇದದ ಅಧ್ಯಯನವನ್ನು ನೀವು ಯಾರಬಳಿಯಲ್ಲಿ ಮಾಡಿದಿರಿ ?” ಎಂದು ಪ್ರಶ್ನೆಮಾಡಲು, ಯಾಜ್ಞವಲ್ಕ್ಯರು ಅವರಿಗೆ -- "ಸಾವಧಾನಚಿತ್ತದಿಂದ ಸ್ವಲ್ಪಹೊತ್ತು ಕುಳಿತುಕೊಳ್ಳಿರಿ, ಅಂದರೆ ಈ ವೇದವನ್ನು ಉಪ ದೇಶಿಸಿದ ಗುರುವನ್ನು ತೋರಿಸುವೆನು” ಎಂದು ಹೇಳಿದರು.
ಈ ಮೇರೆಗೆ ನುಡಿದು ಯಾಜ್ಞವಲ್ಕ್ಯರು ಏಕಾಗ್ರಚಿತ್ತರಾಗಿ ಸೂರ್ಯನನ್ನು ಧ್ಯಾ-
ನಿಸತೊಡಗಿದರು. ಆಗ ಸೂರ್ಯನಾರಾಯಣನು ಪ್ರಕಟನಾಗಲು, ಎಲ್ಲರ ಕಣ್ಣುಗಳು ಮುಚ್ಚಬಡಿದದ್ದರಿಂದ "ರಕ್ಷಿಸು, ರಕ್ಷಿಸು” ಎಂದು ಅವರು ಪ್ರಾರ್ಥಿಸತೊಡಗಿದರು. ಆಗ ಮೇಘದಂಥ ಗಂಭೀರಧ್ವನಿಯಿಂದ ಶ್ರೀಸೂರ್ಯನಾರಾಯಣನು ಋಷಿಗಳನ್ನು ಕುರಿತು -- “ಈ ಅಯಾತಯಾಮ ಸಂಜ್ಞಕವಾದ ವೇದವನ್ನು ಯಾಜ್ಞವಲ್ಕ್ಯರಿಗೆ ನಾನು ಉಪದೇಶಿಸಿರುವೆನು. ಪೌರುಷೇಯವಾಗಿ ತೋರುವ ಈ ವೇದದ ವಿಷಯವಾಗಿ ಯಾವ ಬಗೆಯ ಸಂಶಯವನ್ನೂ ಪಡಬಾರದು. ನಿಃಸಂಶಯವಾದ ಅಂತಃಕರಣದಿಂದ ಯಾಜ್ಞ ವಲ್ಕ್ಯರಿಂದ ಸಹಿತರಾಗಿ, ಶುದ್ಧವಾದ ಅಧ್ವರಭಾಗದೊಡನೆ ಒಪ್ಪುತ್ತಿರುವ ಶುಕ್ಲಯಜುರ್ವೇದದಿಂದ ಯಜ್ಞಭಾಗವನ್ನು ಸಂಪೂರ್ಣವಾಗಿ ಮಾಡಿರಿ” ಎಂದು ಹೇಳಿ, ಆ ಜಗಚ್ಚಕ್ಷುವು ಅಂತರ್ಧಾನವನ್ನು ಹೊಂದಿದನು. ಆ ಮೇಲೆ ಋಷಿಗಳೆಲ್ಲರೂ ಕಣ್ದೆ ರೆದು ಯಾಜ್ಞವಲ್ಕ್ಯರ ಸೋತ್ರಮಾಡಿದರು. ತಮ್ಮ ಶಿಷ್ಯನ ಮಹತ್ವವನ್ನು ನೋಡಿ ವೈಶಂಪಾಯನರು ಸಂತೋಷಭರಿತರಾಗಿ ಸದ್ಗದಿತಾಂತಃಕರಣದಿಂದ ಯಾಜ್ಞವಲ್ಕ್ಯರನ್ನು ಬಿಗಿಯಾಗಿ ಅಪ್ಪಿಕೊಂಡರು; ಮತ್ತು ತಮ್ಮ ಶಿಷ್ಯನ ಅದ್ಭುತವಾದ ಯೋಗಶಕ್ತಿಯನ್ನು ಯಾವತ್ತು ಋಷಿಗಳಮುಂದೆ ಶ್ಲಾಘಿಸಿ, ಶಿಷ್ಯ ನನ್ನು ಆಶೀರ್ವದಿಸಿ ತಾವು ಆ ಯಜ್ಞದಲ್ಲಿ ಋತ್ವಿಕ್ಕರ್ಮವನ್ನು ಸ್ವೀಕರಿಸುವವರಾದರು. ಆಮೇಲೆ ಯಾಜ್ಞವಲ್ಕ್ಯರು ಯಾವತ್ತು ಋಷಿಗಳೊಡನೆ ಬ್ರಹ್ಮದತ್ತನ ಯಜ್ಞವನ್ನು ಸಾಂಗಗೊಳಿಸಿದರು. ಇಂಥ ಮಹಾ ಪ್ರಭಾವಶಾಲಿಗಳಾದ ಶ್ರೀಯಾಜ್ಞವಲ್ಕ್ಯರಿಂದ ಶುಕ್ಲ ಯಜುರ್ವೇದವು ಹೀಗೆ ಪ್ರಸ್ಥಾ ಪಿತವಾಯಿತು.
ಒಮ್ಮೆ ಜನಕಮಹಾರಾಜನು ಏಕಾಂತದಲ್ಲಿ ಕುಳಿತಿದ್ದ ಯಾಜ್ಞವಲ್ಕ್ಯರನ್ನು