ಯಂತೆ ಮೈತ್ರೇಯಿಯು ಬ್ರಹ್ಮಚರ್ಯದಿಂದ ಕಾಲಹರಣಮಾಡುವಳೆಂದು ಜನರು ಅನ್ನುತ್ತಿದರು. ಹೀಗೆ ಸದುಣಮಂಡಿತಳೂ, ಲೋಕೋತ್ತರ ಸುಂದರಿಯಾ ಆದ ಮಗಳಿಗೆ ತಕ್ಕವರನನ್ನು ಆರಿಸುವವಿಷಯದಲ್ಲಿ ಮಿತ್ರನು ಯಾವಾಗಲೂ ಚಿಂತಿಸುತ್ತಿದನು. ಮಗಳು ಕಣ್ಣಿಗೆ ಬಿದಾಗೆಲ್ಲ, ಮತ್ತು ಆಕೆಯ ನೆನಪುಆದಾಗೆಲ್ಲ ಮಿತ್ರನ ಮನಸ್ಸು ವಗ್ರವಾಗುತ್ತಿತು. ಹೆಣ್ಣು ಹಡೆದವರ ಸಿತಿಯು ಹೀಗೆಯೇ ಸರಿ!
ಮೇಲೆ ಹೇಳಿದಂತೆ ಮಿತ್ರನುಇಬ್ಬರು ಕ್ಷತ್ರಿಯವೀರರೊಡನೆ ಜನಕಪುರದಕಡೆಗೆ ಹೊರ
ಟದ್ದಾಗ, ಆತನಿಗೆ ಮಗಳ ನೆನಪಾಗಿ ಆತನ ಮನಸ್ಸು ವ್ಯಗ್ರವಾಗಿತ್ತು. ಮಾತಿನಕಡೆಗೆ ಆತನ ಲಕ್ಷವಿದ್ದಿಲ್ಲ. ಈ ಸಂಗತಿಯು ಆ ಕ್ಷತ್ರಿಯವೀರರಿಗೆ ಗೊತ್ತಾಗಿತ್ತು. ತಮ್ಮ ಮಾತಿನಕಡೆಗೆ ಮಿತ್ರನ ಲಕ್ಷವಿಲ್ಲೆಂಬದನ್ನೂ, ಮಹಾಸಭೆಯಾದಂದಿನಿಂದ ಇತ್ತಿತ್ತಲಾಗಿ ಮಿತ್ರನು ಬಹುತರ ಯಾವಾಗಲೂ ಚಿಂತಾಮಗ್ನನಾಗಿರುವನೆಂಬುದನ್ನೂ ಅವರು ಅರಿತಿದ್ದರು; ಮಿತ್ರ ನಂಥ ಜ್ಞಾನಧನನ ಚಿಂತೆಯಕಾರಣವು ಗೊತ್ತಾಗದ್ದರಿಂದ ಅವನ್ನು ಅರಿತುಕೊಳ್ಳಲಿಕ್ಕೆ ಅವರು ಆತುರಪಡುತ್ತಿದ್ದರು; ಆದರೆ ಒಮ್ಮೆಲೆ ಮಿತ್ರನನ್ನು ಕೇಳುವ ಧೈರ್ಯವು ಅವರಿಗೆ ಆಗಿದ್ದಿಲ್ಲ. ಆ ಕ್ಷತ್ರಿಯವೀರರಿಬ್ಬರೂ ಮಿತ್ರನ ಆದರಕ್ಕೆ ಪಾತ್ರರಾಗಿದ್ದರೂ, ಯಾವದೊಂದು ಮಾತನ್ನು ಕುರಿತು ಮಿತ್ರನನ್ನು ತಟ್ಟನೆ ಕೇಳಲಿಕ್ಕೆ ಅವರು ಆತಂಕಪಡುತ್ತಿದ್ದರು. ಆ ಕ್ಷತ್ರಿಯವೀರರಿಬ್ಬರಲ್ಲಿ ಯಜ್ಞದತ್ತನೆಂಬುವನು ಮಿತ್ರ, ನನ್ನು ಕುರಿತು ವಿನಯದಿಂದ -- "ಭಗವನ್, ತಾವು ಚಿಂತಾತುರರಾಗಿರುವಂತೆ ತೋರುತ್ತದೆ. ಮಹಾಸಭೆಯಾದಂದಿನಿಂದ ನಿಮ್ಮ ಮನಸ್ಸಿಗೆ ಸ್ಪಷ್ಟವಿಲ್ಲ. ಮಹಾಸಭೆಗೂ ನಿಮ್ಮ ಚಿಂತೆಗೂ ಸಂಬಂಧವೇನೋ ತಿಳಿಯದಾಗಿದೆ. ಚಿಂತೆಯಕಾರಣವು ನಾನು ಕೇಳ ತಕ್ಕದ್ದಾಗಿದ್ದರೆ ದಯಮಾಡಿ ಹೇಳೋಣಾಗಬೇಕು, ಆಜ್ಞಾಧಾರಕರಾದ ನಮ್ಮಲ್ಲಿ ಪರಕೀಯತ್ವವನ್ನು ವಹಿಸಬಾರದು” ಎಂದು ಕೇಳಿಕೊಂಡನು. ಅದಕ್ಕೆ ಮಿತ್ರನು -- "ವತ್ಸಾ, ನೀನೂ, ವಿಷ್ಣುಮಿತ್ರನೂ ನನಗೆ ಹೊರಗಿನವರಲ್ಲ. ನಿಮ್ಮ ಮುಂದೆ ಹೇಳಲಿಕ್ಕೆ ಯಾವ ಬಗೆಯ ಸಂಕೋಚವೂ ನನಗೆ ಆಗುವಹಾಗಿಲ್ಲ. ನನ್ನ ಚಿಂತೆಯಕಾರಣವು ನನ್ನ ಮಗಳು ಆಗಿರುವಳು. ಆಕೆಯ ಲಗ್ನದ ಚಿಂತೆಯು ಯಾವಾಗಲೂ ನನ್ನನ್ನು ಬಾಧಿಸುತ್ತದೆ. ಅದೊಂದು ಕಾರ್ಯವು ಆದರೆ ನನ್ನ ಮನಸ್ಸಿಗೆ ಸಮಾಧಾನವಾಗುವದು. ಯಜ್ಞದತ್ತಾ, ಏನುಮಾಡುವದು ಹೇಳು. ಬ್ರಹ್ಮಸಂಕಲ್ಪವಿದ್ದಂತೆ ಆಗುತ್ತದೆಂದು ಬಾಯಿಂದ ಯಾರಾದರೂ ಹೇಳಬಹುದು; ಆದರೆ ಹಾಗೆಹೇಳುವದು ಕೇವಲ ಪ್ರಯತ್ನಾಂತದಲ್ಲಿ ಸಮಾಧಾನಪಡಲಿಕ್ಕೆ ತಕ್ಕಮಾತಲ್ಲದೆ, ಪ್ರಯತ್ನ ಮಾಡದೆ ಆ ಮಾತನ್ನು ನಂಬಿ ಸುಮ್ಮನೆ ಕುಳಿತುಕೊಳ್ಳತಕ್ಕದಲ್ಲ. ಯತ್ನಮಾಡುವದು ನಮ್ಮ ಕರ್ತವ್ಯವಾದ್ದರಿಂದ ಯೋಗ್ಯವರಪ್ರಾಪ್ತಿಗಾಗಿ ಯತ್ನಮಾಡಲೇಬೇಕು. ಹಾಗೆ ನಾನು ಈವರೆಗೆ ಯತ್ನಿಸಿದ್ದರೂ, ಆಯತ್ನಕ್ಕೆ ಸಿದ್ದಿಯು ದೊರೆತಿರುವದಿಲ್ಲ. ಮೈತ್ರೇಯಿಯ ಶಿಕ್ಷಣದ ವಿಷಯವಾಗಿ ನಾನು ದುರ್ಲಕ್ಷಮಾಡಿರುವದಿಲ್ಲ. ಗಾರ್ಗಿಯಂಥ ಯೋಗ್ಯತಾಸಂಪನ್ನಳಾದ ಸ್ತ್ರೀಯಸಹವಾಸವೂ ಮೈತ್ರೇಯಿಗೆ ಇರುತ್ತದೆ. ಆದ್ದರಿಂದ ಆ ನನ್ನಮಗಳು ಕೇವಲ ವಿಷಯೋಪ