ಅತ್ಯಂತ ವಿನಯಭಾವವು ವ್ಯಕ್ತವಾಗುತ್ತದೆ. ಆ ಕಾಲದ- ಆ ದಿನ ಮೂರ್ತಿಯನ್ನು ನೋಡಿದಕೂಡಲೆ , ಸಾಕ್ಷಾತ್ ದೇವತೆಯೇ ಭೂತಳದಲ್ಲಿ ಅವತರಿಸಿರುವಂತೆ ನನಗೆ ಭಾಸ ನಾಗುತ್ತದೆ. ಇಂಥ ಸದ್ಗುಣಸಂಪನ್ನಳಾದ ಹೆಂಡತಿಯ ಮೇಲೆ ಯಾಜ್ಞವಲ್ಐಕರ ಅಕೃತ್ರಿಮಪ್ರೇಮವು ಎಷ್ಟಿರುತ್ತದೆಂಬದನ್ನು ನಾನು ಬಲ್ಲೆನು; ಆದ್ದರಿಂದ ಒಂದು ಪಕ್ಷ ಧಲ್ಲಿ ಯಾಜ್ಞವಲ್ಕ್ಯ ನಮ್ಮ ಮೈತ್ರೇಯಿಯನ್ನು ಲಗ್ನವಾಗಲಿಚ್ಛಿಸಿದರೊ ,ಅವರ ಸುಂದರಸಂಸಾರದಲ್ಲಿ ಮಣ್ಣುಗೂಡಿಸುವ ಎರಡನೆಯ ಲಗ್ನದ ಯೋಗವನ್ನು ನಾನು ಎಂದಿಗೂ ತರಲಿಚ್ಛಿಸುವದಿಲ್ಲ. ಅದರಲ್ಲಿ ನನ್ನ ಮಗಳು ತರುಣಿಯೂ, ಅನನುಭವಿಯ ಇರುವದರಿಂದ, ಆಕೆಯು ಅವರೊಡನೆ ಯಾವಾಗಲೂ ವಿವೇಕದಿಂದ ನಡೆದುಕೊಳ್ಳುವ ಳೆಂಬ ನಿಯಮವೂ ಇಲ್ಲ ! ಅಂದಬಳಿಕ ಯಾಜ್ಞವಲ್ಕರಿಗೆ ಇಲ್ಲದ ತೊಂದರೆಯನ್ನು ನಾನು ಯಾಕೆ ಉಂಟುಮಾಡಲಿ ?
ಮಿತ್ರನ ಈ ಮಾತುಗಳನ್ನು ಕೇಳಿ ಯಜ್ಞದತ್ತನಿಗೆ ಸ್ವಲ್ಪ ಸಂಶಯ ಉಂಟಾ,
ಯಿತು. ಆತನು ಮತ್ತೆ ಮಿತ್ರನನ್ನು ಕುರಿತು-"ಮುನಿಶ್ರೇಷ್ಠಾ, ಭಗವತೀಕಾತ್ಯಾಯನಿ ಯು ಪ್ರತ್ಯಕ್ಷ ದೇವತೆಯು ಅವತರಿಸಿದಂತೆ ಇರುವಳೆಂದು ನೀವು ಹೇಳುತ್ತಿರುವಾಗ, ಆಕೆ ಯು ಬಹುತರ ಯಾಜ್ಞವಲ್ಕರಿಗೆ ಒಪ್ಪುವಂಥ ಹೆಂಡತಿಯಾಗಿರುವಳೆಂದು ಹೇಳಿದ್ದರಿಂದ ನನಗೆ ಸಂಶಯ ಉಂಟಾಯಿತು. "ಬಹುತರ"ಎಂಬ ಶಬ್ದ ಪ್ರಯೋಗದಿಂದ ಕಾತ್ಯಾಯನಿ ಯಲ್ಲಿ ಏನೋ ಕೊರತೆಯಿದ್ದಂತೆ ತೋರುತ್ತದೆ; ಆದರೆ ಆ ಕೊರತೆಯು ಯಾವದು ?" ಎಂದು ಕೇಳಲು, ಮಿತ್ರನು _"ವತ್ಸಾ, ಕಾತ್ಯಾಯನಿಯ ಒಲವು ಆಧ್ಯಾತ್ಮವಿಷಯದ ಕಡೆಗೆ ವಿಶೇಷವಾಗಿ ಇಲ್ಲೆಂಬದೇ ಆ ಕೊರತೆಯು, ಆ ಕೊರತೆಯು ಕೇವಲ ಯಾಜ್ಯ ವಲ್ಕರ ದೃಷ್ಟಿಯಿಂದಲ್ಲದೆ, ಅನ್ಯರ ದೃಷ್ಟಿ ಯಿಂದ ಅಲ್ಲ. ಕಾತ್ಯಾಯನಿಯು ಪತಿಸೇವೆ, ಮಕ್ಕಳಆರೈಕೆ, ಬೇರೆ ಗೃಹಕೃತ್ಯಗಳು ಇವುಗಳಲ್ಲಿ ಯಾವಾಗಲೂ ತೊಡಗಿಹೋಗಿರುವದ ರಿಂದ, ಆಧ್ಯಾತ್ಮವಿಚಾರಕ್ಕೆ ಆಕೆಗೆ ಅವಸರವೇ ದೊರೆಯುವದಿಲ್ಲ. ಆಧ್ಯಾತ್ಮ ದೃಷ್ಟಿಯಿಂ ದ ಇದು ಕೆಲಮಟ್ಟಿಗೆ ಅನಿಷ್ಟವಾಗಿ ತೋರಿದರೂ, ಸುಂದರ ಸಂಸಾರದೃಷ್ಟಿಯಿಂದ ಇದು ಅತ್ಯಂತ ಇಷ್ಟವಾಗಿರುವದು,”ಅನ್ನಲು ಎಷ್ಟು ಮಿತ್ರನು-ಭಗವನ್, ನೀವು ಏನು ಹೇಳಿದರೂ, ಯಾಜ್ಞವಲ್ಕ್ಯರು ನಿಮ್ಮ ಮಗಳೊಡನೆ ಲಗ್ನವಾಗುವದಕ್ಕೆ ಈ ಕೊರ ತೆಯು ಆಸ್ಪದಕೊಡುತ್ತದೆಂದು ನಾನು ಹೇಳದೆ ಇರಲಾರೆನು; ಆದರೆ ಈ ಕೊರತೆಯನ್ನು ಪೂರ್ಣಮಾಡಿಕೊಳ್ಳುವದು ಬಿಡುವದು ಯಾಜ್ಞವಲ್ಕ್ಯರ ಕಡೆಗಿರುವದೆಂಬದು ನಿಜವು. ತಮ್ಮಂಥವರು ಅದಕ್ಕಾಗಿ ಪ್ರಯತ್ನ ಮಾಡುವದು, ಸ್ವಾರ್ಥವೆಂಬ ದೃಷ್ಟಿಯಿಂದ ಗೌಣವಾ ದದ್ದೇಸರಿ, ತಮ್ಮಂಥವರು ಅದಕ್ಕೆ ಮನಸ್ಸೊ ಮಾಡಲಾರಿರಿ,” ಎಂದು ನುಡಿಯುತ್ತಿರಲು, ಮಿತ್ರನ ಲಕ್ಷವು ಆ ಅರಣ್ಯದೊಳಗಿನ್ನದೊಂದು ದಿನ್ನೆಯ ಕಡೆಗೆ ಹೋಯಿತು. ಆತನು ಒಮ್ಮಿಂದೊಮ್ಮೆ ನಿಂತು ಆ ದಿನ್ನೆಯಕಡೆಗೆ ನೋಡಹತ್ತಿದನು. ಆತನ ದೃಷ್ಟಿಯು ಭಯ ರಸವಾಯಿತು. ಆ ಮೂವರು ದಟ್ಟವಾದ ಅರಣ್ಯದಲ್ಲಿ ಸಾಗಿದ್ದು, ಅವರು ಕ್ರಮಿಸು ತಿದ್ದ ಕಾಲಧಾರಿಯು ಬಲುಕಿರಿದಾಗಿತ್ತು. ಮಾರ್ಗದ ಎಡ-ಬಲದಲ್ಲಿ ಗಗನಚುಂಬಿತ