ಯಾಜ್ಞವಲ್ಕ್ಯರ ಸ್ನೇಹದ ಅಭಿವೃದಿ ಯಾಗಿ, ಅವರಿಬ್ಬರ ಮನೆಯೊಳಗಿನ ಹೆಣ್ಣು ಮಕ್ಕಳ ಪರಸ್ಪರ ಸ್ನೇಹವೂ ಹೆಚ್ಚಿತು. ಒಬ್ಬರು ಮತ್ತೊಬ್ಬರ ಮನೆಗೆ ಮೇಲೆ ಮೇಲೆ ಬರಹತ್ತಿದರು, ಹೋಗಹತ್ತಿದರು. ಕಾತ್ಯಾಯನೀ-ಮೈತ್ರೇಯಿಯರ ಪ್ರೇ ಮವು ದಿನದಿನಕ್ಕೆ ಹೆಚ್ಚುತ್ತ ಹೋಯಿತು. ಕಾತ್ಯಾಯನಿಯು ಮೈತ್ರೇಯಿಗಿಂತ ಎರಡೇ ವರ್ಷಕ್ಕೆ ಹಿರಿಯಳಿದ್ದದ್ದರಿಂದ, ಅವರಿಬ್ಬರು ಸಾಧಾರಣ ಓರಿಗೆಯವರಾಗಿದ್ದ ರೆಂದು ಹೇಳಬಹುದು. ಕಾತ್ಯಾಯನಿಯಂತೆ ಮೈತ್ರೇಯಿಯೂ ಲಾವಣ್ಯವತಿಯಾಗಿ ದ್ದಳು. ಇಷ್ಟರಮಟ್ಟಿಗೆ ಅವರಲ್ಲಿ ಸಾಮ್ಯವಿದ್ದು, ಅವರಲ್ಲಿಯ ಗುಣಗಳು ತೀರ ವಿರು ದ್ದವಾಗಿದ್ದವು . ವಿರುದ್ಧ ಗುಣಗಳೆಂದರೆ, ಒಬ್ಬರಲ್ಲಿಯವು ಸದ್ಗುಣಗಳು, ಇನ್ನೊ ಬ್ಬರಲ್ಲಿಯವು ದುರ್ಗುಣಗಳು, ಎಂಬರ್ಥವಲ್ಲ. ಇಬ್ಬರೂ ಸದ್ಗುಣಿಗಳೇ ಆಗಿದ್ದರು. ಕಾತ್ಯಾಯನಿಯಲ್ಲಿಯ ಸದ್ಗುಣಗಳು ಸಾಂಸಾರಿಕವಾಗಿದ್ದವು , ಮೈತ್ರೇಯಿಯಲ್ಲಿಯವು ಆಧ್ಯಾತ್ಮಿಕವಾಗಿದ್ದವು. ಒಬ್ಬರ ಗುಣಗಳು ಮತ್ತೊಬ್ಬರಿಗೆ ಮಹತ್ವದವಾಗಿ ತೋರಿ, ಅವು ತನ್ನಲ್ಲಿರದೆ ಈಕೆಯಲ್ಲಿರುತ್ತವೆಂದು ತಿಳಿದು ಅವರು ಒಬ್ಬರನ್ನೊಬ್ಬರು ಆದರಿಸುತ್ತಿದ್ದರು , ಪ್ರೀತಿಸುತ್ತಿದ್ದರು. ಪರಸ್ಪರ ದರ್ಶನದಿಂದ ಅವರಿಗೆ ಆನಂದ ವಾಗುತ್ತಿತ್ತು, ವಿಯೋಗದಿಂದ ದುಃಖವಾಗುತ್ತಿತ್ತು. ಕಾತಾ ಯನಿಯ ಅಂತಃಕರ ಣವು ಅತ್ಯಂತ ಕೋಮಲವಿದ್ದದ್ದರಿಂದ , ಯಾವದೊಂದು ಸಂಗತಿಯ ಪರಿಣಾಮವು ಆಕೆಯ ಮನಸ್ಸಿನ ಮೇಲೆ ಬಹುಬೇಗ ಆಗುತ್ತಿತ್ತು. ತನಗೆ ಅನುಕೂಲವಾಗಿ ತೋರುವ ವಸ್ತುಗಳ ಮೇಲೆ ಆಕೆಯ ಪ್ರೇಮವು ತಟ್ಟನೆ ಕುಳಿತುಕೊಳ್ಳುತ್ತಿತ್ತು; ಅವುಗಳ ಗುಣದೋಷಗಳ ವಿವೇಚನದ ಕಡೆಗೆ ಆಕೆಯ ಮನಸ್ಸು ಹರಿಯುತ್ತಿದ್ದಿಲ್ಲ. ಆಕೆಯ ಸೇರಿಕೆಯ ವಸ್ತುವು ಆಕೆಯ ಎದುರಿಗೆ ಬಂದರಾಯಿತು, ಕೂಡಲೆ ಲೋಹ ಚುಂಬಕದಂತೆ ಆಕೆಯ ಮನಸ್ಸು ಅತ್ತಕಡೆಗೆ ಹರಿದುಹೊಗುತಿತ್ತು. ಆಕೆಯ ಮನೋವಿಕಾರಗಳು ಅತ್ಯಂತ ತೀವ್ರವಾಗಿದ್ದವು . ತನಗೆ ಅನುಕೂಲ ಸಂಗತಿಗಳ ಯೋಗವಾದ ಕೂಡಲೆ ಆಕೆಯಮುಖವು ಪ್ರಫುಲ್ಲಿತವಾಗಿ , ಅದರಲ್ಲಿ ಮುಗುಳುನಗೆಯು ಮಿನುಗುತ್ತಿತ್ತು. ಇದಕ್ಕೆ ವಿರುದ್ಧವಾಗಿ, ಆಕೆಗೆ ಸೇರದಸಂಗತಿಯ ಯೋಗವಾದ ಕೂಡಲೆ ಆಕೆಯ ಚಿತ್ತವು ಕ್ಷೋಭಿಸುತಿತ್ತು. ದುಃಖದ ಪ್ರಸಂಗವನ್ನು ಕಣು! ಮುಟ್ಟಿ ನೋಡುವದಂತು ಇರಲಿ , ಕಿವಿಯಿಂದ ಕೇಳಿದರೆ ಸಾಕು , ಆಕೆಯ ಕಣ್ಣುಗ ಳಲ್ಲಿ ನೀರು ಬರುತ್ತಿದ್ದವು. ಆಕೆಯ ಮನಸ್ಸು ಗಂಭೀರವಾದದ್ದಲ್ಲ. ಆಕೆಯು ವಿಲಾ ಸದಲ್ಲಿಯೂ, ಕಥೆ ಕೇಳುವಲ್ಲಿಯೂ ತಾಸಿಗೆ ತಾಸು ಕಳೆಯುತ್ತಿದ್ಧಳು. ಆಕೆಯ ಪತಿಯು ಅಂಥ ವಿದ್ವಾಂಸನಿದ್ದರೂ , ಆತನಸಂಗಡ ಪಾರಮಾರ್ಥಿಕ ವಿಷಯದ ಭಾಷಣ ಮಾಡಲಿಕ್ಕೆ ಆಕೆಯ ಮನಸ್ಸು ಇಚ್ಚಸುತಿ ದಿಲ್ಲ ; ಹೀಗಿದ್ದರೂ ತನ್ನ ಸಂಸಾರಕ್ರುತ್ಯ ಗಳಲ್ಲಿ ಆಕೆಯು ಅತ್ಯಂತ ಜಾಗರೂಕಳಾಗಿದ್ದಳು . ಆಕೆಯ ಪತಿಭಕ್ತಿಯು ಶ್ಲಾಘ ನೀಯವಾಗಿತು . ತನ್ನ ಮಕ್ಕಳ ಮೇಲಿನ ಆಕೆಯ ಅಕ್ಕರೆಯು ವಿಲಕ್ಷಣವಾಗಿತ್ತು. ತನ್ನ ಮಕ್ಕಳು ತನಗೆ ಅಲಂಕಾರವೆಂದು ಆಕೆಯು ತಿಳಿಯುತ್ತಿದ್ದಳು. ಮಕ್ಕಳ ಸಂಗೋಪನದಲ್ಲಿ ಸರ್ವಥಾ ದುರ್ಲಕ್ಷ ಮಾಡುತ್ತಿದ್ದಿಲ್ಲ. ಪತಿಗೆ ಸುಖವನ್ನುಂಟು
ಪುಟ:ಭವತೀ ಕಾತ್ಯಾಯನೀ.djvu/೨೩
ಈ ಪುಟವನ್ನು ಪ್ರಕಟಿಸಲಾಗಿದೆ
16