ಮೈತ್ರಯೋ••ನಾನೆಲ್ಲ ನಿನಗೆ ಹೇಳುವನು; ಆದರೆ ಕಥೆಯೆಲ್ಲ ನೆನಪಿನಲ್ಲಿರಲಿ.
ಸಖೀ , ನಾನು ಕೇಳುವ ಒಂದೆರಡು ಪ್ರಶ್ನೆಗಳಿಗೆ ಮೊದಲು ಉತ್ತರಕೊಡು , ಆತ್ಮನು ಬರಿಯ ಪುರುಷರಲ್ಲಿಯೇ ಇರುವನೋ, ಆತನು ಸ್ತ್ರೀಯರಲ್ಲಿಯೂ ಇರುವನೋ ?
ಕಾತ್ಯಾಯನೀ---( ನಕ್ಕು) ಇದೇನು ಕೇಳುವದು ? ಆತ್ಮನು ಪುರುಷರಲ್ಲಿದ್ದಂತೆ
ಸ್ತ್ರೀಯರಲ್ಲಿಯೂ ಇರುವನು; ಶರೀರರಚನೆಯಲ್ಲಿಯ ಅಲ್ಪಸ್ವಲ್ಪ ಭೇದವಲ್ಲದೆ ಉಳಿದ ಯಾವ ಮಾತುಗಳಲ್ಲಿಯೂ ಪುರುಷರಿಗೂ, ಸ್ತ್ರೀಯರಿಗೂ ಭೇದವಿರುವದಿಲ್ಲ. ಪುರುಷ ರಂತೆ ಸ್ತ್ರೀಯರಿಗೂ ಪಂಚಜ್ಞಾನೇಂದ್ರಿಯಗಳೂ, ಪಂಚಕರ್ಮೇಂದ್ರಿಯಗಳೂ, ಮನ ಸೈಂಬ ಅಂತರಿಂದ್ರಿಯವೂ ಇರುತ್ತವೆ; ಅಂದಬಳಿಕ ಇವನ್ನೆಲ್ಲ ಪ್ರೇರಿಸುವ ಆತನು ಇಬ್ಬ ರಲ್ಲಿಯೂ ಇರಲೇಬೇಕು ,
ಮೈತ್ರೇಯಿ~-ಒಳ್ಳೇದು, ಸ್ತ್ರೀ-ಪುರುಷರಿಬ್ಬರಲ್ಲಿ ಆತ್ಮನು ಸರಿಯಾಗಿರುವನೋ,
ಪುರುಷರಲ್ಲಿ ಹೆಚ್ಚು , ಸ್ತ್ರೀಯರಲ್ಲಿ ಕಡಿಮೆಯಾಗಿ ಇರುವನೋ?
ಕಾತ್ಯಾಯನೀ--( ಪುನಃ ನಕ್ಕು) ಇಬ್ಬರಲ್ಲಿಯೂ ಸರಿಯಾಗಿಯೇ ಇರುವನು.
ಹೆಚ್ಚು ಕಡಿಮೆಯಾಗಿರುವದಿಲ್ಲ; ಯಾಕಂದರೆ, ನಿತ್ಯ ವ್ಯವಹಾರದಲ್ಲಿಯ ಸಂಗತಿಗಳಿಂದ ಅದು ಅನುಭವಕ್ಕೆ ಬರುವ ಮಾತಾಗಿದೆ .
ಮೈತ್ರೇಯಿ,--ಸರಿ. ಆತ್ಮಜ್ಞಾನವಾಗದೆ ಮೋಕ್ಷವಾಗಲಾರದೆಂಬ ಮಾತನ್ನು
ಯಾಜ್ಞವಲ ಪತ್ನಿಗೆ ನಾನು ಹೇಳಲವಶ್ಯವಿಲ್ಲ. ಯಾಕಂದರೆ, ಮಹಾತ್ಮರಾದ ಅವರ ಅಗಾಧ ಜ್ಞಾನದ, ಹಾಗು ಅಲೌಕಿಕ ಮಾಹಾತ್ಮದ ಪ್ರಸಿದ್ಧಿಯು ಸಾರ್ವತ್ರಿಕ ವಾಗಿರುವದು .
ಕಾತ್ಯಾಯನೀ--ಹೌದಮಾ ಮೈತ್ರೇಯಿ, ನೀನು ಆ ಮಾತನ್ನು ಹೇಳಲವ
ಶ್ಯವಿಲ್ಲ. ನಾನು ಅದನ್ನು ಪತಿಮುಖದಿಂದ ಹಲವು ಸಾರೆ ಕೇಳಿದ್ದೇನೆ; ಮುಕ್ತಿಯನ್ನು ಸಂಪಾದಿಸುವದು ಪುರುಷರಿಗೆ ಅವಶ್ಯವಾಗಿರುವಂತೆ ಸ್ತ್ರೀಯರಿಗೂ ಅವಶ್ಯವಾಗಿರುತ್ತದೆ. ತಲೂ ಕೇಳಿದ್ದೇನೆ ,
ಮೈತೆಯಿ-ಅಂದಬಳಿಕ ಸಖೀ, ಆತ್ಮಜ್ಞಾನವ ಸಂಪಾದಿಸುವ ಸಂಬಂಧ
ದಿಂದ ಪುರುಷರ ಕರ್ತವ್ಯಗಳು ಭಿನ್ನವಾಗುವದು ಹ್ಯಾಗೆ ನೀನೇ ಹೇಳು, ಸಂಸಾರ ಕ ತ ಗ ಳಲ್ಲಿ ದಕ್ಷರಾಗಿರುವದಷ್ಟೇ ಸ್ತ್ರೀಯರಕರ್ತವ್ಯವಲ್ಲ. ಆ ತ್ಮ ಜ್ಞಾನ ಸಂಪಾಧಿಸುವದೂ ಸ್ತ್ರೀಯರಕರ್ತವ್ಯವಾಗಿರುತ್ತದೆ. ಅದನ್ನು ನಾವು ಸಂಪಾದಿಸ ದಿದ್ದರೆ ಆದಕ್ಕೆ ಪುರುಷರಾದರೂ ಏನುಮಾಡಬೇಕು ?
ಕಾತ್ಯಾಯನೀ-ಸಖೀ, ನಿನ್ನ ಮಾತು ನಿಜವು, ಆತ್ಮಜ್ಞಾನದ ಸಂಬಂಧದಿಂದ
ನಾನು ತೀರ ಉದಾಸೀನಳಾಗಿದ್ದೆನು. ನಿನ್ನ ಬೋಧದಿಂದ ಇಂದು ನನ್ನ ಕಣ್ಣುಗಳು ತೆರೆದವು. ನಾವೇ ಉದಾಸೀನರಾದರೆ ಪುರುಷರಾದರೂ ಏನುಮಾಡಬೇಕು? ನನ್ನನ್ನೇ ನೋಡಬಾರದೆ? ನಾನೇ ಉದಾಸೀನಳಾದದ್ದರಿಂದ ನಮ್ಮ ಯೋಗೀಶ್ವರರೂ ಈ ಸಂಬಂ ಧದಿಂದ ನನ್ನನ್ನು ಉದಾಸೀನಮಾಡಿರುವರು, ನನಗೇ ಸೃಸ್ವರೂಪಜ್ಞಾನವು ಬೇಡಾ