ಕಾತ್ಯಾಯನಿ--ಆದಂತು ಶಕ್ಯವೇ ಇರುವದಿಲ್ಲ. ನನಗಿಂತಲೂ ಮೈತ್ರೇ-
ಯಿಯು ಹೆಚ್ಚಿನಯೋಗ್ಯತೆಯವಳೆಂಬದನ್ನು ನಾನು ಬಲ್ಲೆನು. ಆಕೆಯ ಸಹವಾಸದಿಂದಲೇ ನನಗೆ ಪಾರಮಾರ್ಥಿಕ ಜಾಗ್ರತಿಯು ಉತ್ಪನ್ನವಾಗಿರುತ್ತದೆ. ಇದರಮೇಲೆಯೂ ತಾರುಣ್ಯದಮೂಲಕ ಆಕೆಯು ಅವಿವೇಕಿಯಾಗಿ ನಡೆದುಕೊಂಡರೆ, ಭಗವನ್, ತಮ್ಮ ಸಹವಾಸದ ಮಹಿಮೆಯು ಆಕೆಯಲ್ಲಿ ವಿವೇಕವನ್ನು ಹುಟ್ಟಿಸದೆಯಿರುವದೆ ? ತಮ್ಮ ಸಹವಾಸಕ್ಕೆ ಹಣಿಯದಂಥ ಯೋಗ್ಯತಾಹೀನಳು ಮೈತ್ರೇಯಿಯು ಆಗಿದ್ದರೆ; ಆಕೆಯು ಶೀಯಾಜ್ಞವಲ್ಕ್ಯಪತ್ನಿಯ, ಕಾತ್ಯಾಯನಿಯ ಸಂಸಾರಾಸಕ್ತಮನಸ್ಸನ್ನು ಜಾಗ್ರತಗೊಳಿಸಲು ಸಮರ್ಥಳಾಗಬಹುದೆ ?
ಯಾಜ್ಞವಲ್ಕ್ಯ--ಸರಿಸರಿ, ನಿನ್ನ ಮಾತು ಒಪ್ಪತಕ್ಕದ್ದು! ಆದರೂ ಇನ್ನಷ್ಟು
ವಿಚಾರಮಾಡು. ಮಹತ್ವದ ಕಾರ್ಯದಲ್ಲಿ ದುಡುಕುವದು ಹಿತಕರವಾಗದು . ಇಬ್ಬರು ಹೆಂಡಿರನ್ನು ಮಾಡಿಕೊಳ್ಳುವದು, ನನಗಂತು ಹಿತಕರವಾಗಿ ತೋರುವದಿಲ್ಲ. ಏಕಪತ್ನೀ ವ್ರತದ ಮಹತ್ವವು ಹೆಚ್ಚಿನದಿರುತ್ತದೆ.
ಕಾತ್ಯಾಯನಿ--ಭಗವನ್, ಕಾತ್ಯಾಯನಿಯಾದರೂ ಏಕಪತ್ನೀವ್ರತದ ಮಹಿಮೆ
ಯನ್ನು ಅರಿಯದೆ ಇರಬಹುದೆ ? ಬಹುಪತ್ನೀಕರ ಸಂಸಾರವು ಸ್ವಾರಸ್ಯಹೀನವಾಗುವದೆಂ ಬದು ಪ್ರಸಿದ್ದವು. ಅಂಥ ಅಯೋಗ್ಯ ವ್ಯವಹಾರಕ್ಕೆ ಶ್ರೀ ಯಾಜ್ಞವಲ್ಕ್ಯರ ಪತ್ನಿಯು ಸರ್ವಥಾ ಉತ್ತೇಜನ ಕೊಡಲಾರಳು.
ಯಾಜ್ಞವಲ್ಕ್ಯ--ಹಾಗಾದರೆ ಮೈತ್ರೇಯಿಯ ಪಾಣಿಗ್ರಹಣಮಾಡಲಿಕ್ಕೆ ನನ್ನ
ಮನಸ್ಸನ್ನು ತಿರುಗಿಸಲು ಯಾಕೆ ಯತ್ನಿಸುವೆ ?
ಕಾತ್ಯಾಯನಿ--ಅದರಿಂದ ಏಕಪತ್ನೀವ್ರತಕ್ಕೆ ಭಂಗಬರುವದಿಲ್ಲೆಂದು !
ಯಾಜ್ಞವಲ್ಕ್ಯ--ಅದು ಹ್ಯಾಗೆ ?
ಕಾತ್ಯಾಯನಿ--ಭಗವನ್, ಪಾಮರಳಾದ ಪತ್ನಿಯಲ್ಲಿ ತಮ್ಮ ಪ್ರೇಮವಾತ್ಸಲ್ಯ
ಗಳೆಷ್ಟು ! ಸರ್ವಜ್ಞರಾದ ತಾವು ಬಾಲಭಾವದ ನನ್ನ ಉತ್ತರದಿಂದ ಕೌತುಕ ಪಡುವದ ಕ್ಕಾಗಿ ಗೊತ್ತಿಲ್ಲದವರಂತೆ ಪ್ರಶ್ನೆಮಾಡುವಿರಲ್ಲ! ಅಜ್ಞಾನವನ್ನು ದೂರಮಾಡಿಕೊಳ್ಳಲಿಕ್ಕೆ ಇದಕ್ಕೂ ಹೆಚ್ಚಿನ ಸುಪ್ರಸಂಗವು ನನಗೆ ಬೇರೆ ಯಾವದು ಒದಗಬಹುದು ? ತಮ್ಮ ಪ್ರಶ್ನೆಗೆ ಉತ್ತರಕೊಡುವಾಗ ನನ್ನ ಮನೋವೃತ್ತಿಯು ಉಜ್ಜಲಭಾವನಾಯುಕ್ತವಾದದ್ದರಿಂದ ನನಗೆ ಪರಮಾನಂದವಾಗಿರುವದು. ಮುನಿವರ್ಯ, ದೇವ-ದ್ವಿಜಾಗ್ನಿ ಸಾಕ್ಷಿಯಿಂದ ಪಾಣಿಗ್ರಹಣಮಾಡಿ ಪತ್ನಿಯರೆಂಬ ಗೌರವದ ಪದವಿಯನ್ನು ಪಡೆದ ನಾವಿಬ್ಬರು, ಗಂಗಾ ಯಮುನೆಗಳ ಪ್ರವಾಹಗಳು ಸಮುದ್ರಗಮನ ಭರದಲ್ಲಿ ತಮ್ಮ ದ್ವೈತಭಾವದ ಪರಿವೆಯಿ ಲ್ಲದೆ ಏಕರೂಪಹೊಂದಿ ಕಡೆಗೆ ಸಮುದ್ರದಲ್ಲಿ ಲೀನವಾಗಿ ಹೋಗುವಂತೆ, ತಮ್ಮ ಸೇವೆ ಯಿಂದ ಕೃತಾರ್ಥರಾಗುವ ಭರದಲ್ಲಿ ನಾವು ಸ್ವತ್ವವನ್ನು ಮರೆತು ಏಕರೂಪರಾಗಿ ಕಡೆಗೆ ತಮ್ಮಲ್ಲಿ ಲೀನವಾಗಿ ಹೋಗುವೆವು! ಅಂದಬಳಿಕ, ಕಾತ್ಯಾಯನಿಯೂ, ಮೈತ್ರೇಯಿಯೂ ಈಗ ಭಿನ್ನ ವ್ಯಕ್ತಿಗಳಾಗಿ ತೋರಿದರೂ ಮೈತ್ರೇಯಿಯ ವಿವಾಹಾನಂತರ ಅವರು ತತ್ವತಃ