ರದ ಆಧೀನನಾಗಿ ಸ್ವಾತಂತ್ರಸುಖವನ್ನು ಮರೆತು ಬಿಟ್ಟಿದ್ದರಿಂದ, ಪಾರತಂತ್ರ್ಯದ ಬಗೆ ಬಗೆಯ ಕಾಲ್ಪನಿಕ ಸುಖದುಃಖಗಳ ಜಗ್ಗಾಟಕ್ಕೆ ಗುರಿಯಾಗಿ ನೆರಳಬೇಕಾಗಿದೆ. ಜೀವಾತ್ಮನ ಪರಿವಾರದಲ್ಲಿ ಅನ್ಯರ ಸ್ವಾತಂತ್ರವನ್ನು ಅಪಹರಿಸುವ ದುಷ್ಟಚಾಳಿಯ ಸಂಬಂಧದಿಂದ ಮನಸ್ಸು ಮಿಗಿಲಾದದ್ದು, ಅದು ತನ್ನ ಕೈಕೆಳಗಿನ ಇಂದ್ರಿಯಾದಿಗಳ ಸ್ವಾತಂತ್ರವನ್ನಷ್ಟೇ ಅಲ್ಲ, ದೇಹದೊಡೆಯನಾದ ಜೀವಾತ್ಮನ ಸ್ವಾತಂತ್ರವನ್ನೇ ಕಸಿದುಕೊಂಡು, ಕರಮರಿತಿಂದು ಹೆಬ್ಬುಲಿಯಾದಂತೆ, ಎಲ್ಲರನ್ನೂ ಮೀರಿನಿಂತು ಅನಿಯಂತ್ರಿತಾಧಿಕಾರದಿಂದ ಜೀವಾತ್ಮನ ಕುಲಗುರುವಾದ ವಿವೇಕನೆಂಬಾತನ ಆಟವನ್ನು ಸಹ ನಡೆಯಗೊಡದೆ, ಅನರ್ಥ ಪರಂಪರೆಯನ್ನುಂಟುಮಾಡುವುದು; ಆದರೆ ಊರುಸುಟ್ಟರೂ ಹನುಮಪ್ಪನು ಹೊರಗೆ” ಎನ್ನುವಂತೆ, ತಾನು ಯಾವದಕ್ಕೂ ಸಿಲುಕದೆಯಿರುವದು ! ಇಂಥ ವೀಕ್ಷಣವಾದ ಮನಸ್ಸಿನ ಸ್ವರೂಪವೇನು ? ಅದರ ಸಾಮರ್ಥ್ಯವೆಷ್ಟು ? ತನ್ನ ಪರಿವಾರದೊಡನೆ ಅದರಬಳಿಕೆಯು ಹ್ಯಾಗಾಗುವದು ? ಮನೋಜಯಮಾಡುವ ಬಗೆಯೇನು ? ಇತ್ಯಾದಿ ವಿಷಯಗಳನ್ನು ಕುರಿತು ಆಲೋಚಿಸುವುದು ಅವಶ್ಯವಾಗಿರುತ್ತದೆ.
ಈ ಪ್ರಕರಣದಲ್ಲಿ ಮನಸ್ಸಿನಸ್ವರೂಪವನ್ನು ಮುಖ್ಯವಾಗಿ ವರ್ಣಿಸಬೇಕಾಗಿದೆ;
ಆದ್ದರಿಂದ ಮನಸ್ಸೆಂದರೇನು ? ಅದರ ಸ್ವಭಾವವೆಂತಹದು ? ಅದರ ಕರ್ತೃತ್ವಶಕ್ತಿ ಎಷ್ಟು ? ಎಂಬುದನ್ನು ಕುರಿತು ಕ್ರಮವಾಗಿ ಆಲೋಚಿಸುವೆವು, "ಮನು-(ಅವಳೊ ಧನೇ)” ಎಂಬ ಧಾತುವಿನಿಂದ ಸಿದ್ಧವಾದ "ಮನಸ್ಸೆಂ"ಬ ಶಬ್ದವು , ತಿಳುಕೊಳ್ಳುವಶಕ್ತಿಯುಳ್ಳದ್ದೊಂದು ವಸ್ತುವೆಂಬ ಅರ್ಥವನ್ನು ಬೋಧಿಸುತ್ತದೆ ; ಆದರೆ ಈ ಮನಸ್ಸೆಂಬ ವಸ್ತುವಿನ ರೂಪವನ್ನು ಮಾತ್ರ ವರ್ಣಿಸುವುದು ಶಕ್ಯವಲ್ಲ ; ಯಾಕಂದರೆ ಮನಸ್ಸಿಗೆ ಸ್ವತಂತ್ರ ಆಕಾರವೇಇಲ್ಲ. ವ್ಯವಹಾರದಲ್ಲಿ ಪ್ರವಾಹಿರೂಪ-ವಾಯುರೂಪ ಪದಾರ್ಥಗಳಿಗೆ ಸ್ವತಂತ್ರವಾದ ಆಕಾರವಿಲ್ಲೆ೦ದು ಹೇಳುದುದುಂಟು ; ಯಾಕಂದರೆ ಅವನ್ನು ಒಳಕೊಳ್ಳುವಪದಾರ್ಥಗಳ ಅವಕಾಶಗಳ ಆಕಾರದಂತೆ ಅವುಗಳ ಆಕಾರವಾಗುತ್ತದೆ; ಆದರೆ ತೇಜೋಮಯವಾದ ಮನಸ್ಸಿನಸ್ವರೂಪವು ಇದಕ್ಕೂ ವಿಲಕ್ಷಣವಾಗಿರುವುದು; ಯಾಕಂದರೆ ಮನಸ್ಸಿನಆಕಾರವು, ಅದಕ್ಕೆ ಗ್ರಾಹ್ಯವಾದ ಪದಾರ್ಥದಂತೆ ಆಗಿಹೋಗುತ್ತದೆ; ಅಂದರೆ ಮನಸ್ಸು ಆಯಾಪದಾರ್ಥರೂಪವಾಗಿ ಹೋಗುತ್ತದೆ. ಈ ಸಂಬಂಧದಿಂದ “ವೇದಾಂತಪರಿಭಾಷೆ”ಎಂಬಗ್ರಂಥದಲ್ಲಿ -" ಯಥಾ ತಡಾಗೋದಕಂ ಛಿದ್ರಾನ್ನಿರ್ಗತ್ಯ, ಕುಲ್ಯಾತ್ಮನಾ ಕೇದಾರಾನೆ: ಪ್ರವಿಶ್ಯ, ತದ್ವದೇವ ಚತುಷ್ಕೋಣಾದ್ಯಾಕಾರ೦ ಭವತಿ | ತದ್ವತ್ತೀಜಮಪ್ಯ೦ತಃಕರಣ೦ ಚಕ್ಷುರಾದಿದ್ವಾರಾ ನಿರ್ಗತ್ಯ ಘಟಾದಿ ವಿಷಯದೇಶಂ ಗತ್ವಾ ತದಾಕಾರತಯಾ ಪರಿಣಮತೇ ಸ ಏವ ಪರಿಣಾಮೋ ವೃತ್ತಿರಿತ್ಯುಚ್ಯತೆ” ಅಂದರೆ, ಒಂದು ಕೆರೆಯನೀರು ತುಂಬಿನಿಂದ ಹೊರಟು ಕಾಲುವೆಯೊಳಗಿಂದ ಹೊಲಕ್ಕೆಹೋಗಿ ,ಅಲ್ಲಿ ನಾಲ್ಕೂ ಮೋಲೆ ಸಮನಾಗಿ ನಿಂತುಕೊಂಡು ಹೊಲದ ಆಕಾರವನ್ನೇ ಹೊಂದುವುದು . ಇದೇ ಮೇರೆಗೆ ತೇಜೋಮಯವಾದ ಮನಸ್ಸಾದರೂ ಕಣ್ಣು ಮುಂತಾದ ದ್ವಾರಗಳಿಂದ ಹೊರ ಬಿದ್ದು ಗ್ರಾಹ್ಯಪದಾರ್ಥಗಳಿಗೆ ಸಂಬಂಧಿಸಿ ತದಾಕಾರವನ್ನೇ ಹೊಂದುತ್ತದೆ. ಇದಕ್ಕೆ