ಪ್ರಸ್ತಾವನೆ
ನಮ್ಮ ಕನ್ನಡದಲ್ಲಿ ಎಲ್ಲಬಗೆಯ ಪುಸ್ತಕಗಳ ಕೊರತೆಯಿರುವಾಗ, ಹೆಣು ಮಕ್ಕಳ ವಾಚನಕ್ಕೆ ತಕ್ಕ ಪುಸ್ತಕಗಳ ಕೊರತೆಯಿರುವದೆಂದು ಬರೆಯುವದು ಅಪ್ರಾಸಂಗಿಕವೇ ಸರಿ. ಈ ಕೊರತೆಯನ್ನು ಅಂಶತಃ ದೂರಮಾಡುವಉದ್ದೇಶದಿಂದ ನಾವು ಈ ಪುಸ್ತಕವನ್ನು ಬಹು ಆಸ್ಥೆಯಿಂದ ಬರೆದಿರುವೆವು. ಈ ಪುಸ್ತಕವನ್ನು ಬರೆಯಲಿಕ್ಕೆ ಶ್ರೀಮದ್ಬಹ್ಮನಿಷ್ಠ ಸಾಂಬದೀಕ್ಷಿತ ಕಾಶೀಕರ ಕೃತ “ಶ್ರೀಯಾಜ್ಞವಲ್ಕ್ಯಚರಿತ,” ಮಹಾರಾಷ್ಟ್ರದೊಳಗಿನ “ಮೈತ್ರೇಯಿ” ಎಂಬ ಪುಸ್ತಕ ಇವು ಸಹಾಯಕಾರಿಗಳಾಗಿದ್ದರೂ ಮುಖ್ಯವಾಗಿ ೪ ನೆಯ ಪ್ರಕರಣವು ಶ್ರೀ ಗುರುಪ್ರೇರಣೆಯಿಂದಲೇ ಬರೆಯಲ್ಪಟ್ಟಿದ್ದೆಂದು ನಾವು ಸೂಚಿಸದೆಯಿರಲಾರೆವು. ಶ್ರೀ ಭಗವತೀ-ಕಾತ್ಯಾಯನಿಯನ್ನು ಅನುಕರಿಸುವಂಥ ಮಾತೃ-ಭಗಿನೀವರ್ಗವು ಕನ್ನಡಿಗರಲ್ಲಿ ಹೆಚ್ಚಲೆಂತಲೂ, ನಮ್ಮ ಚಿರಂಜೀವಿಗಳಾದ ಸೌಭಾಗ್ಯಕಾಂಕ್ಷಿಣಿಯರು ಸುಬ್ಬಕ್ಕ, ರೇಣಕ್ಕ ಇವರು ಸದ್ಗುಣಿಗಳಾಗುವಂತೆ ಅನುಗ್ರಹಿಸಬೇಕೆಂತಲೂ ಆ ಭಗವತಿಯನ್ನೇ ಭಕ್ತಿಯಿಂದ ಪ್ರಾರ್ಥಿಸುವೆವು.
ಈ ಪುಸ್ತಕದ ಕಡೆಯ ಫಾರಮನ್ನು ನಜರಚೂಕಿಯಿಂದ ತಪ್ಪುಗಳನ್ನು ತಿದ್ದದೆ ಹಾಗೇ ಹಾಕಿದ್ದರಿಂದ, ಮುಖ್ಯವಾಗಿ ಕಡೆಯ ಪಾನಿನಲ್ಲಿ ಬಹಳ ತಪ್ಪುಗಳು ಉಳಿದವೆ. ಅವುಗಳಲ್ಲಿ ದೊಡ್ಡ ತಪ್ಪುಗಳ ತಿದ್ದುಪಡೆಯನ್ನು ಮಾತ್ರ ಕೆಳಗೆ ಕೊಟ್ಟಿರುತ್ತದೆ. ಅವನ್ನಷ್ಟು, ವಾಚಕರು ದಯಮಾಡಿ ಲಕ್ಷದಲ್ಲಿಟ್ಟು ಓದಬೇಕೆಂದು ಪ್ರಾರ್ಥಿಸುವೆವು.
ಪುಟ. |
ಸಾಲು. |
ಅಶುದ್ಧ. |
ಶುದ್ಧ. |
ಹಾವೇರಿ.
೧೮೪೧ ಚೈತ್ರ ವದ್ಯ ೫.
ಕುಲಕರಣಿ.(ಗಳಗನಾಥ)