ಹಾಸದೊಳಗೆ ಇ೦ದಿಗೂ ಕೋಹಿನೂರ ವಜ್ರದಂತೆ ಮಿಂಚುತ್ತಿದೆ. ಇದೇ ವಂಶದೊಳಗೆ ಆಳಿದ ಸಗರ, ಭಗೀರಥ, ದಿಲೀಪ, ರಘು ಮೊದಲಾದವರು ಯಾರೂ ಮಾಡದಂಥ ಒಂದೊಂದು ಅಘಟಿತವಾದ ಕಾರ್ಯಗಳನ್ನು ಮಾಡಿ, ಕೀರ್ತಿ ಶೇಷರಾಗಿದ್ದಾರೆ. ಸೂರ್ಯವಂಶ ವೃಕ್ಷವನ್ನು ತುದಿಯಿಂದ ಕೊನೆಯ ವರೆಗೆ ನಿರೀಕ್ಷಿಸಿದರೆ, ಅದೊಂದು ಝಗಝಗಸುವ ನಕ್ಷತ್ರ ಮಾಲೆಯಾಗಿದೆ. ಈ ವಂಶದೊಳಗೆಷ್ಟು ಮಹಾಮಹಿಮರು ತಲೆಯೆತ್ತಿದರೋ, ಅಷ್ಟು ಮಂದಿ ಬೇರೆ ಯಾವ ವಂಶದಲ್ಲಿಯೂ ಹುಟ್ಟಲಿಲ್ಲ. ದಶರಥಮಹಾರಾಜನ ಹೊಟ್ಟೆಯಿಂದ ಸಾಕ್ಷಾತ್ ಭಗವಂತನು ರಾಮಚಂದ್ರನ ರೂಪತೊಟ್ಟು, ಹುಟ್ಟಿ ಬಂದಾಗಂತೂ ಈ ವಂಶವು ಉನ್ನತಿಯ ಅತ್ಯುತವಾದ ಪದವನ್ನೈದಿತು. ಯಾವ ವಂಶದಲ್ಲಿ ಜಗನ್ನಿಯಾ ಮಕನಾದ ನಾರಾಯಣನೇ ಅವತಾರಗೊಂಡು ಬಂದನೋ ಅಂಧ ವಂಶದ ಪುಣ್ಯವು ಎಷ್ಟು ಹಣ್ಣಿಗೆ ಬಂದಿರಬಹುದೆಂಬದು ಯಾರಿಗೆ ಹೇಳ ಲಿಕ್ಕೆ ಸಾಧ್ಯವು?
ಅವತಾರ ಕಲ್ಪನೆ:- ಆರ್ಯಸಂಸ್ಕೃತಿಯ ಚರಿತ್ರೆಯಲ್ಲಿ ಅವತಾರ ಕಲ್ಪನೆಯೊಂದು ವಿಶೇಷ ಬೆಲೆಯುಳ್ಳದ್ದಾಗಿದೆ. ಆರ್ಯರಿಗೂ ಅವತಾರ ಕಲ್ಪನೆಗೂ ಸಮೀಪ ಸಂಬಂಧವಿರುವಷ್ಟು ಬೇರೆ ಯಾವ ಸಂಸ್ಕೃತಿಯವರಿಗೂ ಇರಲಾರದು. ಅಷ್ಟೇಕೆ? ಅವತಾರ ಕಲ್ಪನೆಯಲ್ಲಿಯೇ ಆರ್ಯಸಂಸ್ಕೃತಿಯ ತಿರುಳೂ, ಹುರುಳ ಒಳಗೂಂಡಿವೆ. ಆರ್ಯಸಂಸ್ಕೃತಿಯ ಸೆಲೆಯು ಅವತಾರವೇ. ಆದುದರಿಂದ ಅವತಾರ ಕಲ್ಪನೆಯ ವಿವೇಚನೆಯನ್ನು ಬಿಟ್ಟರೆ, ಆರ್ಯಸಂಸ್ಕೃತಿಯ ಇತಿಹಾಸ ವೆಂದರೆ ಕಣ್ಣಿಲ್ಲದ ಮುಖದಂತಾಗುವುದು. ಆರ್ಯರ ಅವತಾರ ಕಲ್ಪನೆಯನ್ನು ಮನುಷ್ಯರು ಹುಟ್ಟಿಸಿದ್ದಲ್ಲ; ಕವಿ ಕಲ್ಪನೆಯಲ್ಲ; ಪುರಾಣದ ಒಣರಗಳೆಯಲ್ಲ; ಅದರಂತೆಯೇ ಈ ಜಗತ್ಯಾದರೂ ಏನೋ ಒಂದು ಮಾಯಾಜಾಲವು; ಹುಟ್ಟಿಸಿದವರು ಯಾರೆ ಏನೋ! ಇದರ ಮು೦ದಣ ಗತಿಯು ಹೇಗೊ ಏನೋ! ಎಂಬ ಸಂಶಯವಾದಗಳು ಆರ್ಯರ ಬಾಯಿಗರಿಯದ ಮಾತುಗಳು. ಪ್ರಪಂಚವನ್ನು ಪರಮಾತ್ಮನೇ ತನ್ನ ಲೀಲೆಗಾಗಿ ನಿರ್ಮಿಸಿದನು. ಅದರ ಭಾರವೆಲ್ಲವೂ
ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೯
ಈ ಪುಟವನ್ನು ಪ್ರಕಟಿಸಲಾಗಿದೆ
೭೮
ಭಾರತೀಯರ ಇತಿಹಾಸವು.