ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ ೦೬ ಭಾರತೀಯ ಇತಿಹಾಸವು. ಭಾರತಕಾಲದವರ ಬಾಳು- ಬದುಕು, gaaL ಭಾರತಕಾಲದ ಜನರ ಮೈಕಟ್ಟು:- ಭಾರತ ಕಾಲದ ಅರ್ಯರು ಎತ್ತರಾದ ಬೀನಾಳುಗಳ, ಗಟ್ಟಿ ಗರೂ, ಉದ್ದನ್ನ ಮಗಿನವರೂ, ಬೊಗಸೆಗಣ್ಣಿನವರೂ, ಕೆಂಬಣ್ಣದವರೂ, ತೇಜಸ್ವಿಗಳೂ ಇದ್ದರೆಂದು ಮಹಾಭಾರತದ ಅನೇಕ ದೃಷ್ಟಾಂತಗಳ ಮೇಲಿಂದ ಕಾಣು ತ್ತದೆ. ಇದಕ್ಕೆ ಸುಮಾರು ಮೂರು ಕಾರಣಗಳಿದ್ದವೆನ್ನ ಬಹುದು. ಒಂದನೇದು, ಕಾಲಕಾಲಕ್ಕೆ ಮಳೆ ಬೆಳೆ ಆಗುತ್ತಿದ್ದು, ಪರದೇಶಕ್ಕೆ ನಮ್ಮ ದೇಶದಿಂದ ಕಾಳುಕಡಿಗಳು ಹೋಗುತ್ತಿರಲಿಲ್ಲ.ಧಾನ್ಯದಿಂದ ತುಂಬಿರುವ ಹೊಲಗದ್ದೆ ಗಳೂ, ಫಲಗಳಿ೦ದ ಭಾರವಾದ ವೃಕ್ಷಗಳೂ ಹಾಲು ಹೈನು ಕರೆಯುವ ಆಕಳುಗಳೂ ವಿಪುಲವಾಗಿದ್ದದರಿಂದ ಜನರಿಗೆ ತಿನ್ನು ಲಿಕ್ಕೆ ಎಂದ ಕೊರತೆಯಾಗುತ್ತಿರಲಿಲ್ಲ. ಎರಡನೆದು, ಮದುವೆಯ ಕಾಲಕ್ಕೆ ಮದು ಮಗ ಮದುಮಗಳು ಪ್ರೌಢವಯಸ್ಸಿನವರಿದ್ದು, ಮದುವೆಯಾಗುವ ಮೊದಲು ಅವರಿರ್ವರು ಬ್ರಹ್ಮಚರ್ಯ ವ್ರತವನ್ನು ಅತ್ಯಂತ ಎಚ್ಚರಿಕೆಯಿಂದ ಪಾಲಿ ಸುತ್ತಿದ್ದರು. ಹೀಗಾದ್ದರಿಂದ ಅವರಿಂದ ಹುಟ್ಟಿದ ಪೀಳಿಗೆಯು ಒಳ್ಳೇ ಗಟ್ಟಿ ಮುಟ್ಟಿ, ಹಾಗೂ ತೇಜಃಪುಂಜವಾಗಿರುತ್ತಿತ್ತು. ಮೂರನೇದು,. ಬ್ರಾಹ್ಮಣರಿಗೆ ಬ್ರಾಮ್ಮ ತೇಜವನ್ನೂ, ಕ್ಷತ್ರಿಯರಿಗೆ ಕ್ಷಾತ್ರತೇಜವನ್ನೂ ಪಡೆಯ ಬೇಕೆ೦ಬ ಹವ್ಯಾಸವು ಆಗಿನವರಲ್ಲಿ ಮಿಗಿಲಾಗಿತ್ತು; ಕ್ಷತ್ರಿಯ, ರಿಗೆ ಆಗಾಗ್ಗೆ ಯುದ್ಧ ಪ್ರಸಂಗ ಬರುತ್ತಿದ್ದುದರಿಂದ ಅವರು ವಾಡಿಕೆ ಯಾಗಿ ಗರಡಿ ಸಾಧನೆಗೆ ಹೆಚ್ಚು ಮನಗೊಡುತ್ತಿದ್ದರು. ಗಜಯುದ್ಧ, ಗದಾಯುದ್ಧ, ಮಲ್ಲಯುದ್ಧಗಳ೦ಥ ಶಾರೀರಿಕ ಸಾಮರ್ಥ್ಯದ ಹೆಚ್ಚು ಗಾರಿಕೆಯನ್ನು ತೋರಿಸುವಂಥ ಆಟಗಳು ಮೇಲಿಂದ ಮೇಲೆ ನಡೆಯು ತಿದ್ದದರಿಂದ ಶಾರೀರಕ ಬಲವನ್ನು ಗಳಿಸದ ಮನುಷ್ಯನು ಮನುಷ್ಯನಲ್ಲ ವೆಂದ, ಜನರ ತಿಳುವಳಿಕೆಯಿತ್ತು; ಮದ್ದಾನೆಯೊಡನೆ ಕುಸ್ತಿ ಹಿಡಿ ಯುವಂಥ ಶ್ರೀಕೃಷ್ಣ, ಭೀಮ ಸೇನ, ದುರ್ಯೋಧನರ೦ಥ ಜಗಜಟ್ಟಿಗಳು ಯಾವ ಕಾಲಕ್ಕಿದ್ದರೋ ಆ ಕಾಲದ ಭಾಗ್ಯವನ್ನು ಎಸ್ಟಿ೦ತು ಹೊಗ ಳಬೇಕು ?