ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೬ ಭಾರತೀಯಕ ಇ೬ಹಾಸವು. ಯಿಂದ ಸ್ವತೇವ ಭಗವತ್ ಪ್ರಾಪ್ತಿಗೆ ನಾ ಧಕವಾದವುಗಳಾದ್ದರಿಂದ ಭಗ ವ೦ತನ ಹೆಸರನ್ನು ಬಚ್ಚಿಟ್ಟು ಅವನ ಕಡೆಗೆ ಒಯ್ಯುವ ದಾರಿಗಳನ್ನ ಕೈ ಜೈನ ಬೌದ್ಧರು ಹೇಳಿದಂತಾಯಿತು. ದೇವರ ವಿಷಯವಾಗಿ ಚಿತ್ರದಲ್ಲಿ ನಿಜವಾಗಿ ಹಂಬಲವನ್ನು ಹುಟ್ಟಿ ಸುವ ಾ ಧನಗಳನ್ನು ತೆರೆದು, ಕಿ೦ಬ ಹುನಾ ಕಡೆಗಣಿಸಿ, ಬರಿಯ ದೇವರ ಬಗ್ಗೆ ಬಾಯಿ ತೀಟೆಯನ್ನು ತಿರಿ ಸಿಕೊಳ್ಳುವಂತೆ ಮಾತನಾಡಿ, ಅದರೊಳ ಗೇ ಅನಂದವನ್ನು ಅನುಭವಿ ಸುವ ಕರ್ಮರರಾದ ಬ್ರಾಮ್ಮಣರ ವಿರುದ್ಧವಾಗಿ ಕ್ಷತ್ರಿಯರು ಈ ಸಂಪ್ರ. ರಾಯಗಳನ್ನು ಹೂಡಿದರು; ಕೈ ಹಿಡಿದೆಳೆದರೆ, ಮೈ ತಾನಾಗಿಯೇ ಬರುವಂತೆ, ಕ್ಷತ್ರಿಯ ರಾದ ಹೊಸ ಸಾಂಪ್ರದಾಯಿಕರು ಜಾತಿ, ಗೋತ್ರ ಕ್ಕಿಂತ ಸದಾ ಚರಣೆ ಹಾಗೂ ಶುದ್ಯಾಚರಣೆಗೆ ಇಷ್ಟೊಂದು ಬೆಲೆ ಕೊಟ್ಟ ದ್ದರಿಂದ ಈ ಸಂಪ್ರದಾಯಗಳು ಹಿಂದು ನ್ಯಾನದೊಳಗೆ ಬೇಗನೇ ಬೆಳೆದು ಬಲಿದು ಇಡೀ ಭರತಖಂಡದಲ್ಲೆಲ್ಲ ಧರ್ಮದ ಕೋಲಾಹಲವೆಬ್ಬಿಸಿ, ಕೆಲದಿನಗಳ ವರೆಗೆ ವೈದಿಕ ಧರ್ಮವನ್ನು ನಡುಗಿಸಿ, ನಲುಗಿಸಿದವು. ಜೈನ ಬೌದ್ಧ ಸಂಪ್ರದಾಯಗಳ ಆದಿಗರು ಸಾಮಾನ್ಯವಾಗಿ ಕ್ಷತ್ರಿಯರೇ ಅಗಿದ್ದರು; ಅವರು ಬರಿಯ ವೀರಪುರಷರ ಆಗಿರದೆ, ದೊಡ ದೊಡ್ಡ ರಾಜಮನೆತನದಲ್ಲಿ ಹುಟ್ಟಿ ಬೆಳೆದ ಗರ್ಭ ರಾಜಪುತ್ರರು. ವೈದಿಕ ಧರ್ಮದಲ್ಲಿ ಕೇವಲ ಯಜ್ಞ ಹಾಗೂ ಕರ್ಮಕಾಂಡದ ರಗಳೆಯೇ ಬೆಳೆ ದುದರಿಂದ, ವೈದಿಕ ಧರ್ಮದ ವುರಾತನವಾರ ಮರಕ್ಕೆ ಈ ಕವಲುಗಳೊ ಡೆದವು; ಜೈನ ಬೌದ್ಧ ಧರ್ಮಗಳು ವೈದಿಕದ ಧರ್ಮದ ಶಾಖೆಗಳೆಂದು ಹೇಳಿದರೆ ತಪ್ಪಾಗದು; ಏಕೆಂದರೆ, ಅವುಗಳಲ್ಲಿ ತುದಿ ಮೊದಲ್ಗೊಂಡು ವೈದಿಕ ಧರ್ಮದ ಕಲಾ ೦ಶಗಳು ಅಲ್ಲಲ್ಲಿ ಕಂಗೊಳಿಸುತ್ತಿವೆ. ವೈದಿಕ ಧರ್ಮದೊಳಗೆ ಭಕ್ತಿಗೆ ವಿಶೇಷ ಪ್ರಾಶಸ್ತ್ರಕೊಟ್ಟು, ಪೂರ್ಣಾವತಾ ರನೂ, ವಿಭೂತಿವಿ ಶೇಷನೂ ಆದ ಶ್ರೀಕೃಷ್ಣನ ಭಕ್ತಿಯನ್ನು ಹೆಚ್ಚಿಸಿ, ವಿಶ್ರ ತೊ ಮುಖವಾಗಿ ಹರಿಯುವ ವೈದಿಕ ಧರ್ಮಕ್ಕೆ ಭಾಗವತ ಧರ್ಮವು ಒಮ್ಮುಖವಾಗಿ ಹರಿಯ ಲಿಕ್ಕೆ ಹಚ್ಚಿತು. ವೈದಿಕ ಧರ್ಮವೆಂಬ ಪುರಾಣ ವೃಕ್ಷಕ್ಕೆ ಬಿಟ್ಟ ಹಣ್ಣುಗಳಲ್ಲಿ ಭಾಗವತ ಧರ್ಮವೆಂಬು ದೊ೦ದು ಭಕ್ತಿರಸ ದಿಂದ ಸುರಿಯುತ್ತಿರುವ ರಸಗಾಯಿಯಾಗಿದೆ; ಇcಧ ರಸವಿ ಶೇಷವುಳ್ಳ.