ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೮ ಭಾರತೀಯರ ಇತಿಹಾಸವ. ಕಾಣಬೇಕೆಂದು ಉತ್ತರವಿತ್ತುದಕ್ಕೆ ಅವನು ಬಹು ಸಂತುಷ್ಟನಾಗಿ ಮೆಚ್ಚಿ ಅವನನ್ನು ಮಿತ್ರನನ್ನಾಗಿ ಮಾಡಿಕೊಂಡನು. ಅಲೆಕ್ಸಾಂಡರನು ಗುಣವುಳ್ಳವನೂ, ಗುಣವನ್ನರಿತವನ, ಗುಣಪಕ್ಷಪಾತಿಯೂ ಆಗಿದ್ದ ರಿಂದ, ಪೋರಸನಂಥವನನ್ನು ಮಿತ್ರನನ್ನಾಗಿ ಮಾಡಿ ಕೊಳ್ಳುವದೇ ತನ್ನ ಸಾಮ್ರಾಜ್ಯಕ್ಕೆ ಹಿತವೆಂದರಿತು, ತಿರಿಗಿ ಪೋರಸನಿಗೆ ರಾಜ್ಯವನ್ನೊಪ್ಪಿಸಿ ತನ್ನ ಮಾಂಡಲಿಕನನ್ನಾಗಿ ಮಾಡಿಕೊಂಡನು. ಈ ಬಗೆಯಾಗಿ ಫೋರಸ ನೊಡನೆ ಸ್ಥಿರವಾದ ಸ್ನೇಹವನ್ನು ಬೆಳಿಸಿ, ತನ್ನ ಸಾಮ್ರಾಜ್ಯದ ಚಕ್ರಾಧಿ ಪತ್ಯದ ಹಗ್ಗು ರು ತನ್ನಿಟ್ಟನು. ಈ ಜಯದ ಸ್ಮರಣೆಗಾಗಿ ಅಲೆಕ್ಸಾಂಡ ರನು ಈಗಿರುವ ಝಲಂ ಪಟ್ಟಣವನ್ನು ಕಟ್ಟಿಸಿದನು. ಇದೇ ಸಮ ಯಕ್ಕೆ ಅಲೆಕ್ಸಾಂಡರನು ತನ್ನ ನಾ ಹ್ಯಾದಮೇಲೆ ಒಂದು ಬದಿಗೆ ಮ್ಯಾಸಿ ಡನ್ನ ಪ್ರಾಂತದ ಕುದುರೆ ಸವಾರನ ಚಿತ್ರವನ್ನೂ, ಮತ್ತೊಂದು ಬದಿಗೆ ಇರಾಣಿಯರ ಕಿರೀಟವನ್ನು ಹಾಕಿಕೊಂಡು, ಕೈಯಲ್ಲಿ ವಜ್ರವನ್ನು ಹಿಡಿದಿರುವ ತನ್ನ ದೇ ಒಂದು ನಿಂತಿರುವ ಚಿತ್ರವನ ಮುದ್ರೆ ಹಾಕಿಸಿ ರುವನು. ನ್ಯಾ ಸನದಿಯ ವರೆಗೆ ಪಯಣ:-ವಾಡಿಕೆಯಂತೆ ಅಲೆಕ್ಸಾಂಡ ರನು ಕಾಳಗದೊಳಗೆ ಮ ಡಿದಂತಹ ತನ್ನ ವೀರಾಳು ಗಳ ಸ್ಮರಣಾರ್ಥ ವಾಗಿ ಅ೦ತ್ಯ ವಿಧಿಯನ್ನು ಬಲಿಯನ್ನೂ ಕೊಟ್ಟು ಆಟ ನೋಟಗಳನ್ನು ನಡೆಯಿಸಿ, ಹಿ೦ದೆ ಗೆದ್ದ ಪ್ರಾಂತಗಳ ಮೇಲೆ ಕಣ್ಣಿಡಲಿಕ್ಕೆಂದು ಕೈ ಟೇ ರಾಸನನ್ನು ಕೆಲವು ದಂಡಿನೊಡನೆ ಇಟ್ಟು, ತಾನೂ ಸ್ವತಃ ಮು೦ದೆ ಪಯಣ ಬೆಳಸಿದನು. ಮಾರ್ಗದೊಳಗೆ ದಾಳಿ ನಡಿಸುತ್ತ ಸಾಗಿದಂತೆ ಚಿಕ್ಕ ದೊಡ್ಡ ರಾಜರುಗಳು ಅಲೆಕ್ಸಾಂಡರನಿಗೆ ಎದುರಾಳಿಯಾಗದೆ ಮೆತ್ತಗೆ ಶರಣು ಬರಹತ್ತಿದ್ದರಿಂದ ಅವನಿಗೆ ದಾರಿಯಲ್ಲಿ ಯುದ್ಧ ವಾ ಡುವ ಪ್ರಸಂಗವು ಒದಗಲಿಲ್ಲ. ಚಿನಾ ಬನದಿಯನ್ನು ಇಳಿದು ಮುಂದೆ ರವಿ ನದಿಯನ್ನು ದಾಟಿ ಮುಂದೆ ನಡೆಯಲು ( ಸ೦ಗಲ ' ಎ೦ಬೂರಿನ ಮೇಲೆ ದೌಡುಯಿಡಲು, ಅಲ್ಲಿಯ ಜನರು ಅಲೆಕ್ಸಾಂಡರನಿಗೆ ತಮ್ಮ ಶೌರ್ಯವನ್ನು ಚನ್ನಾಗಿ ತೋರಿಸಿದರು. ಈ ದಾಳಿಯಲ್ಲಿ ಅಲೆಕ್ಸಾಂಡ ರನು ಸೋಲುವ ಸ್ಥಿತಿಯಲ್ಲಿರಲು ಪೋರಸನಿಂದ ನೆರವಿಗಾಗಿ ದಂಡು ೨