ದೇವಾಲಯ, ಸ್ಕೂಪ ಮತ್ತು ಬಸದಿಗಳೇ: ಆಯಾ ಮತದ ದೊರೆಗಳಿಗಾಗಲಿ, ದುಡ್ಡಿದ್ದವರಿಗಾಗಲಿ, ಗುಡಿ ಕಟ್ಟಿಸುವದು, ಅದರೊಳಗೆ ಭವ್ಯ ಮೂರ್ತಿ ಸ್ಥಾಪಿಸುವುದು, ಅದಕ್ಕಾಗಿ ಹೇರಳವಾಗಿ ದುಡ್ಡು ವೆಚ್ಚ ಮಾಡುವದು, ಈ ವಿಷಯಗಳೇ ಜೀವಕ್ಕೆ ಮುಖ್ಯ ಸೊಗಸಿನ ಕೃತಿಗಳಾದ್ದರಿಂದ, ತತ್ಕಾಲೀನ ಹಣವೆಲ್ಲವೂ ದೇವಸ್ಥಾನಗಳಿಗೆ ಸೇರಿತು. ಮುಲ್ತಾನದೊಳಗೆ ಈ ಕಾಲಕ್ಕಿದ್ದ ಒಂದು ಸೂರ್ಯನ ಭವ್ಯಮಂದಿರವನ್ನು ಕುರಿತು ಬಣ್ಣಿಸುವಾಗ ಹ್ಯುಯೆನತ್ಸಂಗನು ಅನ್ನುವದು. "ಇಲ್ಲಿಯ ಮೂರ್ತಿಯು ಚಿನ್ನದ್ದು. ಮೈಮೇಲೆಲ್ಲ ರತ್ನ, ಹವಳ ಕೆಚ್ಚಿದ ಒಡವೆಗಳು. ಬೆಳಗು ಸಂಜೆಗೆ ದಿನಾಲು ದೇವರ ಮುಂದೆ ನೃತ್ಯ ಗಾಯನಾದಿಗಳು ನಡೆಯುತ್ತವೆ. ದೊಡ್ಡ ದೊಡ್ಡ ರಾಜರುಗಳು ಈ ದೇವಸ್ಥಾನಕ್ಕೆ ವರ್ಷಾಶನಗಳನ್ನೂ, ದಿವ್ಯವಾದ ಬೆಲೆಯುಳ್ಳ ಒಡವೆಗಳನ್ನೂ ಕಾಣಿಕೆಯಾಗಿ ಕೊಟ್ಟು, ಬಡಬಗ್ಗರಿಗಾಗಿ ಅನ್ನಸತ್ರಾದಿಗಳನ್ನು ಏರ್ಪಡಿಸಿದ್ದರಿಂದ ದಿನಾಲು ಸಾವಿರಾರು ಮಂದಿ ಯಾತ್ರಿಕರು ಇಲ್ಲಿ ಬಂದು ಮುತ್ತುತ್ತಾರೆ. ದೇವಾಲಯದ ಸುತ್ತು ನೀರಿನ ಹೊಂಡಗಳೂ, ಬಗೆ ಬಗೆಯ ಹೂವಿನ ಗಿಡಗಳೂ ಮೆರೆಯುತ್ತಿದ್ದುದರಿಂದ೦ತೂ ಈ ದೇವಸ್ಥಾನವು ಬಹು ರಮಣೀಯವಾಗಿತ್ತು.” ಕಾಶಿಯ ಶ್ರೀ ವಿಶ್ವೇಶ್ವರ ದೇವಸ್ಥಾನವನ್ನು ಕುರಿತು ಬರೆಯುವಾಗ ಈ ನ೦ದುದು - "ಇಲ್ಲಿಯ ಈಶ್ವರನ ಪುರುಷಾಕಾರದ ಮೂರ್ತಿಯು ೭೦ ಅಡಿ ಎತ್ತರವೂ, ಅಂದವಾಗಿಯೂ ಇರುವದರಿಂದ ಜೀವಂತ ಮನುಷ್ಯನನ್ನು ನಾಚಿಸುತ್ತದೆ. ದೇವರ ದರ್ಶನಕ್ಕಾಗಿ ದಿನಾಲು ೧೦ ಸಾವಿರ ಜನರ ದಟ್ಟಣೆಯಾಗುತ್ತದೆ.” ಧರ್ಮ ಹಾಗೂ ಈಶ್ವರ ವಿಷಯಕವಾದ ಹುಚ್ಚು ಕಲ್ಪನೆಗಳು ಈ ಕಾಲದ ಜನರ ತಲೆಗಳಲ್ಲಿ ತುಂಬಿ ತುಳುಕುತ್ತಿದ್ದವು. ಒ೦ದಾನೊ೦ದು ಕಾಲಕ್ಕೆ ತನ್ನ ವೈಚಾರಿಕ ಬೆಳಕಿನಿಂದ ಇಡೀ ಹಿಂದೂಧರ್ಮವನ್ನೇ ನಡುಗಿಸಿ ತನ್ನದೊಂದು ಸ್ವತಂತ್ರ ದಾರಿಯನ್ನೇ ಮಾಡಿಕೊಂಡಿರುವ ಬೌದ್ಧಮತದ೦ಧ ತತ್ವ ವಿಚಾರ ಪ್ರಧಾನವಾದ ಮತಕ್ಕೂ ಈ ಕಾಲಕ್ಕೆ ವಿಚಾರವಡಗಿ, ತಲೆತಿರುಗಿ, ಬುದ್ಧನ ಕೂದಲೆಳೆ, ಎಲುಬಿನ ಚೂರು, ಉಗುರುಗಳನ್ನೂ ಕೂಡ ಅವನ ಭಕ್ತರು ತಮ್ಮ ಮನಸಿಗೆ
ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೮
ಈ ಪುಟವನ್ನು ಪ್ರಕಟಿಸಲಾಗಿದೆ
ಧಮ೯ಮತ ವಿಚಾರಗಳು.
೨೯೧