ಈ ಪುಟವನ್ನು ಪ್ರಕಟಿಸಲಾಗಿದೆ

ಹಿಂದೂ ಜನರಿಂದ ಅರಬರಿಗಾದ ಲಾಭ.

೩೧೭

ಯಿಂದ ದಂಡಿನೊಳಗೆ ಒಂದೇ ಒಂದು ಗೊಂದಲವೆದ್ದು ದಂಡಾಳುಗಳು ಓಡಲಾರಂಭಿಸಿದರು. ಅರಬರು ಅಸಂಖ್ಯಾಕ ಜನರ ನೆತ್ತರ ಹರಿಸಿ ಕ್ರಿ. ಶ. ೭೧೨ ರಲ್ಲಿ ಸಿಂಧಪ್ರಾಂತವನ್ನು ತಮ್ಮ ವಶಕ್ಕೆ ತೆಗೆದುಕೊ೦ಡರು. ಈ ಯುದ್ಧವು ನಡೆದಿರಲು ದಾಹರನ ಎರಡನೇ ರಾಣಿಯಾದ ಬಾಯಿಯೆಂಬವಳು ತನ್ನ ೧೫ ಸಾವಿರ ಜನರೊಳನೆ ರಾವೂರೆಂಬಲ್ಲಿದ್ದಳು. ಈ ಸುದ್ದಿಯನ್ನರಿತುಕೊ೦ಡು ಕಾಸೀಮನು ರಾವೂರಿಗೂ ಮುತ್ತಿಗೆ ಹಾಕಿದನು. ಗೋಮಾಂಸ ಭಕ್ಷಕರಾದ ಭ್ರಷ್ಟರಾಜರ ಕೈಗೆ ಪವಿತ್ರ ದೇಹವು ಸೇರಿತೆಂದರೆ, ಅಪವಿತ್ರವಾಗಿ ಹೋಗುವದೆಂಬ ಭೀತಿಯಿಂದ ಬಾಯಿಯು ತನ್ನ ಸಂಗಡಿಗರಾದ ರಜವುತ ಸ್ತ್ರೀಯರ ಸಲಹೆ ಕೇಳಿಕೊಂಡು, ಈ ಧರ್ಮಸ೦ಕಟದೊಳಗಿಂದ ಪಾರಾಗಲಿಕ್ಕೆ ಬೇರೆ ದಾರಿಯಿಲ್ಲವೆಂದು ಮನದಟ್ಟು ಮಾಡಿಕೊಂಡು ಅವರೊಡನೆ 'ಜೋಹಾರ' ಮಾಡುವದನ್ನೇ ನಿಶ್ಚಯಿಸಿ, ಅದರ೦ತೆ ತನ್ನ ದೇಹವನ್ನು ಅಗ್ನಿನಾರಾಯಣನಿಗೆ ಅರ್ಪಿಸಿ ಧನ್ಯಳಾದಳು. ಭಾರತೀಯರ ಇತಿಹಾಸದೊಳಗೆ ಸ್ತ್ರೀಯರು ನಡೆಸಿದ್ದು ಇದೇ ಮೊದಲನೇ ಜೋಹರವು.

ಹಿಂದೂಜನರಿಂದ ಅರಬರಿಗಾದ ಲಾಭ:- ಕಾಡುಜಾತಿಯವರಾದ ಅರಬರಿಗೆ ಹಿಂದೂದೇಶದ೦ಧ ವಿದ್ಯೆ, ಕಲೆ, ಹಣ ಮೊದಲಾದವುಗಳದೊ೦ದು ಖನಿಯೇ ದೊರೆತದ್ದರಿ೦ದಾದ ಅನ೦ದಕ್ಕೆಣೆಯಿಲ್ಲದಂತಾಯಿತು, ದೆವ್ವಿನ೦ಧ ಗುಡ್ಡ ಬಂಡೆಗಳನ್ನು ಕೊರೆದು ಮಾರ್ಪಡಿಸಿದ ಭವ್ಯವಾದ ದೇವಾಲಯಗಳೂ, ವಿಹಾರಗಳೂ, ಮುಗಿಲು ಮುಟ್ಟು ವಂಥ ಗುಡ್ಡದ ಶಿಖರದ ಮೇಲೆ ಕಟ್ಟಿದ ಕೋಟೆಕೊತ್ತಲಗಳೂ, ಗಂಗಾ ಯಮುನಾ ನದಿಗಳಿಂದ ನೂರಾರು ಮೈಲುಗಳ ವರೆಗೆ ಬುದ್ದಿ ಕೌಶಲ್ಯಬಲರಿಂದ ಕಟ್ಟಿಸಿದ ದೊಡ್ಡ ದೊಡ್ಡ ಕಾಲುವೆಗಳೂ, ಅವೆಲ್ಲವುಗಳನ್ನು ನೋಡಿದಾಗ ಹಿಂದುಸ್ಥಾನವೆಂದರೆ "ಸೋಜಿಗಗಳ ತವರ್ಮನೆ” ಯೆಂದದವರು ಬೆರಗಾದರು. ಈ ಕಾಲಕ್ಕೆ ಹಿಂದೂ ದೇಶವೆಂದರೆ ಕಲಾಕೌಶಲ್ಯಗಳಲ್ಲಿ ಘನತೆಯ ಶಿಖರಕ್ಕೇರಿದ್ದಿತು. ಅರಬರು ಶಸ್ತ್ರದಿಂದ ಹಿಂದೂದೇಶವನ್ನು ಗೆದ್ದು ಸುಮ್ಮನೆಕುಳ್ಳಿರಲಿಲ್ಲ. ಸ್ವಾಭಾವಿಕವಾಗಿಯೇ ಅರಬರಲ್ಲಿ ತಮ್ಮ ಸಂಸ್ಕೃತಿಯನ್ನು ಉಚ್ಚಸ್ಥಿತಿಗೆ