ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೮೭

ಲೋಕಪ್ರಿಯತೆ ಮತ್ತು ಪ್ರಭಾವಕ್ಕೆ ಕುಂದುಬಂದಿಲ್ಲ; ಎಂದಿನಂತೆ ಈಗಲೂ ಅದಕ್ಕೆ ಗೌರವ ಸಲ್ಲುತ್ತ ಇದೆ, ಪ್ರತಿಯೊಬ್ಬ ದಾರ್ಶನಿಕನೂ, ತತ್ವಜ್ಞಾನಿಯೂ ಅದನ್ನೇ ಆಧಾರವಾಗಿಟ್ಟು ಕೊಂಡು, ತನಗೆ ತೋರಿದ ರೀತಿಯಲ್ಲಿ ಅರ್ಥವಿವರಣೆ ಮಾಡಿದ್ದಾನೆ. ವಿಷಮ ಕಾಲದಲ್ಲಿ, ಸಂದಿಗ್ಧ ಪರಿಸ್ಥಿತಿಗಳಲ್ಲಿ, ಮನಸ್ಸಿನಲ್ಲಿ ಸಂಶಯ ಮತ್ತು ಕರ್ತವ್ಯ ಘರ್ಷಣೆಗಳಿಂದ ತುಮುಲವೆದ್ದಾಗ ಬೆಳಕನ್ನು ಕಾಣಲು, ಮಾರ್ಗದರ್ಶನಕ್ಕೆ ಗೀತೆಯ ಕಡೆ ತಿರುಗುವುದೇ ಹೆಚ್ಚು. ಅದಕ್ಕೆ ಕಾರಣ ಆ ಕವನವೇ ಒಂದು ಸಂದಿಗ್ಗ ಕಾಲದ ಗೀತೆ : ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳ ಸಂದಿಗ್ಧ ಕಾಲ ; ಮತ್ತು ಅದಕ್ಕೂ ಹೆಚ್ಚಾಗಿ ಮಾನವ ಧರ್ಮದಲ್ಲಿ ಒಂದು ಸಂದಿಗ್ಧ ಕಾಲ. ಗೀತೆ ಯ ಮೇಲೆ ಹಿಂದಿನಕಾಲದ ಟೀಕೆಗಳು ಅಸಂಖ್ಯಾತ ; ಈಗಲೂ ಎಡೆಬಿಡದೆ ವ್ಯಾಖ್ಯಾನಗಳು ಬರುತ್ತಲೇ ಇವೆ. ಇಂದಿನ ಕಾಲದ ಕರ್ಮ ವೀರರೂ, ಮಹಾಜ್ಞಾನಿಗಳೂ ಆದ ತಿಲಕ್, ಅರವಿಂದ ಘೋಷ್, ಗಾಂಧಿ-ಸಹ ಟೀಕೆ ಬರೆದು ತಮ್ಮದೇ ಆದ ಅರ್ಥ ವಿವರಣೆ ಕೊಟ್ಟಿದ್ದಾರೆ. ಗಾಂಧೀಜಿಯ ಅಹಿಂಸಾತತ್ವಕ್ಕೆ ಗೀತೆಯೇ ಆಧಾರ ; ಉದ್ದೇಶ ಒಳ್ಳೆಯದಾದರೆ ಹಿಂಸೆ ಮತ್ತು ಯುದ್ಧ ಅನಿವಾರ ಎಂಬ ಇತರರ ದೃಷ್ಟಿ ಗೂ ಗೀತೆಯೇ ಆಧಾರ.

ಮಹಾಭಾರತ ಯುದ್ಧವು ಆರಂಭವಾಗಬೇಕೆನ್ನು ವಾಗ ಯುದ್ಧರಂಗದಲ್ಲೇ ಕೃಷ್ಣಾರ್ಜುನರ ಸಂವಾದದಿಂದ ಕಾವ್ಯ ಆರಂಭವಾಗುತ್ತದೆ. ಯುದ್ದದ ಚಿಂತನೆ, ಅದರ ಪರಿಣಾಮವಾಗಿ ಜನರ ಸಾವು, ಬಂಧುಬಾಂಧವರ ಕೊಲೆ, ಇವೆಲ್ಲ ಯಾವ ಉದ್ದೇಶಕ್ಕಾಗಿ ಎಂದು ಅರ್ಜುನನಿಗೆ ಅಸಹ್ಯ ತೋರಿ ಮನಸ್ಸು ಕದಡಿದೆ. ಇಷ್ಟು ನಷ್ಟವನ್ನುಂಟುಮಾಡಿ, ಮಹಾ ಪಾಪಕೃತ್ಯವನ್ನೆಸಗಿ ಬರುವ ಲಾಭವಾ ದರೂ ಏನು ? ಮೊದಲಿನ ಆದರ್ಶಗಳೆಲ್ಲ ಅದೃಶ್ಯವಾಗುತ್ತವೆ ; ಮೌಲ್ಯಗಳೆಲ್ಲ ಮಣ್ಣು ಪಾಲಾಗುತ್ತವೆ. ಯುಗಯುಗಕ್ಕೂ ಕರ್ತವ್ಯ ಕರ್ಮಗಳಿಂದ ನೀತಿಯ ಕಟ್ಟು ಗಳಿಂದ ಹಿಂಸೆಗೊಳಗಾಗಿ ನುಚ್ಚು ನೂರಾದ ಮಾನವ ಧರ್ಮದ ಸಂಕೇತವಾಗುತ್ತಾನೆ ಅರ್ಜುನ. ಈ ವ್ಯಕ್ತಿ ಸಂವಾದವು ನಮ್ಮನ್ನು ಹೆಜ್ಜೆಯಿಂದ ಹೆಜ್ಜೆಗೆ ವೈಯಕ್ತಿಕ ಕರ್ತವ್ಯ ಮತ್ತು ಸಾಮಾಜಿಕ ನಡತೆಯ ಉನ್ನತಮಟ್ಟಕ್ಕೆ ಹೆಚ್ಚಿನ ನಿಸ್ವಾರ್ಥ ವಾತಾವರಣಕ್ಕೆ ಮಾರ್ಗಜೀವನವನ್ನೇ ನೀತಿಯ ನೆಲಗಟ್ಟಿನ ಮೇಲೆ ಕಟ್ಟು ವದಕ್ಕೆ, ಸರ್ವವ್ಯಾಪಕ ವಾದ ಒಂದು ಧಾರ್ಮಿಕ ದೃಷ್ಟಿಗೆ ಕರೆದೊಯ್ಯುತ್ತವೆ. ಅದರಲ್ಲಿ ತಾತ್ವಿಕ ವಿಚಾರಗಳು ಎಷ್ಟೋ ಅಡಗಿವೆ; ಮಾನವ ಪ್ರಗತಿಗೆ ಇರುವ ಮೂರು ಮಾರ್ಗಗಳನ್ನೂ ಸಮಾಧಾನಮಾಡಿ, ಸಮನ್ವಯ ಗೊಳಿಸುವ ಪ್ರಯತ್ನ ನಡೆದಿದೆ : ಜ್ಞಾನಮಾರ್ಗ, ಕರ್ಮಮಾರ್ಗ ಮತ್ತು ಭಕ್ತಿ ಮಾರ್ಗ. ಪ್ರಾಯಶಃ ಎಲ್ಲಕ್ಕಿಂತ ಭಕ್ತಿ ಮಾರ್ಗಕ್ಕೆ ಹೆಚ್ಚು ಪ್ರಾಮುಖ್ಯತೆ. ವಿಶ್ವರೂಪಿಯ ಅವತಾರವಾದರೂ ಒಬ್ಬ ಅವತಾರ ಪುರುಷನನ್ನು ದೇವರು ಎಂದು ಕರೆಯಲಾಗಿದೆ. ಮಾನವನ ಅಸ್ತಿತ್ವಕ್ಕೊಂದು ಧಾರ್ಮಿಕ ಹಿನ್ನೆಲೆ ಯನ್ನು ಕೊಡುವುದೇ ಗೀತೆಯ ಮುಖ್ಯ ಸಂದೇಶ, ನಿತ್ಯಜೀವನದ ವಾಸ್ತವಿಕ ಸಮಸ್ಯೆಗಳೆಲ್ಲ ಉದ್ಭವಿ ಸುವುದೂ ಇದೇ ದೃಷ್ಟಿಯಿಂದ, ಜೀವನದ ಹೊರೆ ಮತ್ತು ಕರ್ತವ್ಯ ನಿರ್ವಹಣೆಗೆ ಕರ್ಮಮಾಡು, ಆದರೆ ಧಾರ್ಮಿಕ ಹಿನ್ನೆಲೆ ಮತ್ತು ವಿಶ್ವದ ಉನ್ನತ ಉದ್ದೇಶ ಸದಾ ನಿನ್ನ ದೃಷ್ಟಿಯಲ್ಲಿರಲಿ ಎಂದು ಗೀತಾ ವಾಕ್ಯ, ಕ್ರಿಯಾಶೂನ್ಯತೆಗೆ ಧಿಕ್ಕಾರವಿದೆ ಮತ್ತು ಕ್ರಿಯೆ ಮತ್ತು ಜೀವನ ಉನ್ನತ ಯುಗಧರ್ಮ ಕನುಗುಣವಾಗಿರಬೇಕು ಎಂದು ಹೇಳಿದೆ. ಏಕೆಂದರೆ ಯುಗಧರ್ಮ ಯುಗಯುಗಕ್ಕೂ ಬದಲಾವಣೆ ಯಾಗುತ್ತದೆ. ಯುಗಧರ್ಮವನ್ನು ಮಾತ್ರ ಎಂದೂ ಮರೆಯಬಾರದು.

ಆಧುನಿಕ ಭಾರತದಲ್ಲಿ ಎಲ್ಲಿ ನೋಡಿದರೂ ನಿರಾಶೆ, ಎಲ್ಲಿ ನೋಡಿದರೂ ಕ್ರಿಯಾಶೂನ್ಯತ. ಆದ್ದರಿಂದ ಕ್ರಿಯೆಯ ಉತ್ಸಾಹದ ಈ ಪಾಂಚಜನ್ಯ ವಿಶೇಷ ಪ್ರಭಾವವನ್ನು ಬೀರಿದೆ. ಈ ಕ್ರಿಯೆ ಯನ್ನೂ ಇಂದಿನ ಯುಗಕ್ಕನುಸಾರವಾಗಿ ಸಾಮಾಜಿಕ ಉನ್ನತಿ, ಸಮಾಜಸೇವೆ-ವ್ಯವಹಾರ ಯೋಗ್ಯವೂ, ಪರಹಿತನಿಷ್ಠ ವೂ, ದೇಶಾಭಿಮಾನ ಯುಕ್ತವೂ, ಮಾನವೀಯತೆಯಿಂದ ಕೂಡಿದುದೂ ಆದ ಸಮಾಜ ಸೇವೆ ಎಂದು ವ್ಯಾಖ್ಯಾನಮಾಡಲು ಅವಕಾಶವಿದೆ. ಗೀತೆಯ ಮಾತಿನಲ್ಲಿ ಅಂತಹ ಕ್ರಿಯೆ ಅತ್ಯವಶ್ಯಕ. ಆದರೆ ಧಾಮಿಕ ಆದರ್ಶ ಅದರ ಹಿಂದೆ ಇರಬೇಕು. ಅಂತಹ ಕ್ರಿಯೆ ಅಥವ ಕರ್ಮ ನಿಷ್ಕಾಮ