ಬುದ್ದನಿಗೂ ಮುಂಚೆ, ಕ್ರೈಸ್ತನಿಗಿಂತ ಏಳುನೂರು ವರ್ಷಗಳ ಹಿಂದೆ ಒಬ್ಬ ಭಾರತೀಯ ಮಹಾ ಜ್ಞಾನಿ ಮತ್ತು ಧರ್ಮಶಾಸ್ತ್ರಜ್ಞ ಯಾಜ್ಞವಲ್ಕ್ಯ “ ಸದ್ಗುಣಕ್ಕೆ ಕಾರಣ ನಮ್ಮ ಜಾತಿಯಲ್ಲ, ನಮ್ಮ ಮೈಬಣ್ಣವೂ ಅಲ್ಲ ; ಅದು ಸಾಧನೆಯಿಂದ ಮಾತ್ರ ಸಾಧ್ಯ. ಆದ್ದರಿಂದ ತನಗೆ ತಾನು ಬಯಸ ತತೆ ಯಾರೂ ಯಾರಿಗೂ ಬಯಸದಿರಲಿ ” ಎಂದು ಹೇಳಿದ್ದಾನಂತೆ.
೧೭. ಚಂದ್ರಗುಪ್ತ ಮತ್ತು ಚಾಣಕ್ಯ, ಮೌಲ್ಯ ಸಾಮ್ರಾಜ್ಯ ಸ್ಥಾಪನೆ
ಬೌದ್ಧಮತವು ಕ್ರಮೇಣ ಭಾರತದಲ್ಲೆಲ್ಲ ಹರಡಿತು. ಆರಂಭದಲ್ಲಿ ರಾಜಮನೆತನಗಳಿಗೂ ಬ್ರಾಹ್ಮಣರಿಗೂ ಮಧ್ಯೆ ಹುಟ್ಟಿದ ಒಂದು ಕ್ಷತ್ರಿಯ ಚಳವಳಿಯಾದರೂ ಅದರ ನೈತಿಕ ಮತ್ತು ಪ್ರಜಾ ಸತ್ತಾತ್ಮಕ ದೃಷ್ಟಿ ಅದರಲ್ಲೂ ಮುಖ್ಯವಾಗಿ ಪೌರೋಹಿತ್ಯ ಮತ್ತು ಕರ್ಮಕಾಂಡದ ಮೇಲಿನ ವಿರೋಧ ಭಾವನೆ ಜನರ ಮನಸ್ಸನ್ನು ಆಕರ್ಷಿಸಿತು. ಜನಸಾಮಾನ್ಯದಲ್ಲಿ ಒಂದು ಸುಧಾರಣಾ ಮನೋ ಭಾವನೆಯನ್ನು ಹುಟ್ಟಿಸಿ ಕೆಲವು ಬ್ರಾಹ್ಮಣ ದಾರ್ಶನಿಕರನ್ನು ಸಹ ಆಕರ್ಷಣೆಮಾಡಿತು. ಆದರೆ ಬ್ರಾಹ್ಮಣರು ಸಾಮಾನ್ಯವಾಗಿ ಬೌದ್ಧ ಮತವನ್ನು ಖಂಡಿಸಿದರು. ಬೌದ್ಧರನ್ನು ಪಾಷಂಡಿಗಳು, ಸನಾತನ ಧರ್ಮ ವಿರೋಧಿಗಳು ಎಂದು ದೂರಿದರು. ಬಾಹ್ಯ ಬೆಳೆವಣಿಗೆಗಿಂತ ಮುಖ್ಯವಾಗಿ ಬೌದ್ಧ ಮತ ಮತ್ತು ಸನಾತನಧರ್ಮಗಳಿಗೆ ಒಂದರಮೇಲೊಂದರ ಪರಸ್ಪರ ಪ್ರಭಾವ ಅಧಿಕವಾಗಿತ್ತು ಮತ್ತು ಕ್ರಮೇಣ ಬ್ರಾಹ್ಮಣರ ಪ್ರಾಬಲ್ಯ ಕಡಮೆಯಾಯಿತು. ಎರಡೂವರೆ ಶತಮಾನಗಳ ನಂತರ ಅಶೋಕ ಚಕ್ರವರ್ತಿಯು ಬೌದ್ಧ ಮತವನ್ನು ಅವಲಂಬಿಸಿದನು. ಭಾರತದಲ್ಲಿ ಮತ್ತು ಭಾರತದ ಹೊರದೇಶ ಗಳಲ್ಲಿ ಶಾಂತಿಯುತ ಬೌದ್ಧ ಧರ್ಮ ಪ್ರಸಾರಣೆಗೆ ತನ್ನ ಸರ್ವಶಕ್ತಿಯನ್ನೂ ವಿನಿಯೋಗಿಸಿದ.
ಈ ಎರಡು ಶತಮಾನಗಳಲ್ಲಿ ಭಾರತದಲ್ಲಿ ಮಹಾ ಪರಿವರ್ತನೆಗಳಾದವು. ವಿವಿಧ ಜನಾಂಗಗಳ ಸಂಪರ್ಕವನ್ನು ಹೆಚ್ಚಿಸುವುದರಲ್ಲಿ ಸಣ್ಣ ಪಾಳೆಯಗಳು, ರಾಜ್ಯಗಳು ಮತ್ತು ಸ್ವತಂತ್ರ ಪ್ರಜಾಪ್ರಭುತ್ವ ಗಳನ್ನು ಒಂದುಗೂಡಿಸುವುದರಲ್ಲಿ ಮಹತ್ಪಯತ್ನಗಳಾಗುತ್ತಿದ್ದವು. ಒಂದು ಕೇಂದ್ರೀಕೃತ ಏಕಾಧಿ ಪತ್ಯವನ್ನು ಸ್ಥಾಪಿಸುವ ಆಶೆ ಬೆಳೆಯುತ್ತಲೇ ಇತ್ತು. ಈ ಎಲ್ಲ ಪ್ರಯತ್ನಗಳ ಫಲವಾಗಿ ಒಂದು ಶಕ್ತಿ ಸಮರ್ಥವೂ ಮತ್ತು ಸರ್ವಾ೦ಗಸುಂದರವೂ ಆದ ಸಾಮ್ರಾಜ್ಯವು ಜನ್ಮತಾಳಿತು. ವಾಯವ್ಯ ಮೂಲೆ ಯಲ್ಲಿನ ಅಲೆಕ್ಸಾಂಡರಿನ ದಂಡಯಾತ್ರೆಯು ಈ ಭಾವನೆಗೆ ಪುಷ್ಟಿ ಯನ್ನು ಕೊಟ್ಟಿತು. ಅಂದಿನ ಪರಿವರ್ತನೆಯ ಪರಿಸ್ಥಿತಿಯನ್ನು ಸದುಪಯೋಗ ಮಾಡಿಕೊಂಡು ತಮ್ಮ ಇಷ್ಟಕ್ಕನುಗುಣವಾಗಿ ಯೋಚಿಸಬಲ್ಲ ಇಬ್ಬರು ಮಹಾಪುರುಷರು ಆಗ ಜನ್ಮತಾಳಿದರು. ಅವರೇ ಚಂದ್ರಗುಪ್ತ ಮೌಲ್ಯ ಮತ್ತು ಅವನ ಅಮಾತ್ಯನೂ ಮತ್ತು ಮಂತ್ರಾಲೋಚಕನೂ ಆದ ಬ್ರಾಹ್ಮಣ ಚಾಣಕ್ಯ. ಈ ಇಬ್ಬರ ಮೈತ್ರಿಯು ಅದ್ಭುತವಾದ ಫಲಕೊಟ್ಟಿತು. ಇಬ್ಬರೂ ಮಗಧದೇಶದ ನಂದರ ರಾಜ್ಯದ ರಾಜಧಾನಿ ಯಾದ ಪಾಟಲಿಪುತ್ರ (ಈಗಿನ ಪಾಟ್ನ)ದಿಂದ ಗಡಿಪಾರಾದವರು. ಇಬ್ಬರೂ ವಾಯವ್ಯದಲ್ಲಿ ತಕ್ಷಶಿಲೆಗೆ ಹೋಗಿ ಅಲ್ಲಿ ಅಲೆಕ್ಸಾಂಡರನು ಬಿಟ್ಟು ಹೋಗಿದ್ದ ಗ್ರೀಕರೊಡನೆ ಸಂಪರ್ಕ ಬೆಳೆಸಿದರು. ಚಂದ್ರ ಗುಪ್ತನು ಅಲೆಕ್ಸಾಂಡರನ ಭೇಟಿಮಾಡಿದ. ಅವನ ವಿಜಯೋತ್ಸವಗಳು, ಮತ್ತು ಪ್ರತಾಪಗಳನ್ನು ಕೇಳಿದ. ಅವನಂತೆ ತಾನೂ ಪ್ರಸಿದ್ಧನಾಗಬೇಕೆಂಬ ಆಕಾಂಕ್ಷೆ ತಾಳಿದ. ಇಬ್ಬರೂ ಸಮಯ ಕಾದು ಸಿದ್ಧತೆ ಮಾಡಿಕೊಂಡರು. ಮಹಾ ಆಶಾಪೂರಿತ ಯೋಚನೆಗಳನ್ನು ಹೂಡಿದರು. ಮತ್ತು ಅವುಗಳನ್ನು ಕಾರ್ಯಗತ ಮಾಡಲು ಸಮಯ ಕಾಯುತ್ತಿದ್ದರು.
ಹಿಂದೆಯೇ ಕ್ರಿಸ್ತಪೂರ್ವ ೩೨೩ ರಲ್ಲಿ ಬ್ಯಾಬಿಲಾನ್ ನಗರದಲ್ಲಿ ಅಲೆಕ್ಸಾಂಡರ್ ಮರಣ ಹೊಂದಿದನೆಂಬ ವಾರ್ತೆ ಬಂದಿತು. ತಕ್ಷಣವೇ ಚಂದ್ರಗುಪ್ತ ಮತ್ತು ಚಾಣಕ್ಯ ಇಬ್ಬರೂ ಪುರಾತನವೂ ಚಿರನೂತನವೂ ಆದ ರಾಷ್ಟ್ರೀಯತ್ವದ ಕೂಗನ್ನೆ ಬಿಸಿ ಜನರನ್ನು ಪರದೇಶದ ಧಾಳಿಕಾರರ ಮೇಲೆ ದಂಗೆ ಎಬ್ಬಿಸಿದರು. ಗ್ರೀಕ್ ಸೈನ್ಯವನ್ನು ಓಡಿಸಿ ತಕ್ಷಶಿಲೆಯನ್ನು ಹಿಡಿದರು. ರಾಷ್ಟ್ರೀಯತಯ ಕರೆಯನ್ನು ಕೇಳಿ ಅನೇಕರು ಚಂದ್ರಗುಪ್ತನ ಸಹಾಯಕ್ಕೆ ಬಂದರು. ಅವರೊಂದಿಗೆ ಉತ್ತರ ಹಿಂದೂಸ್ಥಾನದ