ಈ ಪುಟವನ್ನು ಪ್ರಕಟಿಸಲಾಗಿದೆ
೧೧೦
ಭಾರತ ದರ್ಶನ

ವರ್ತಿಯ ಮನಸ್ಸಿನಲ್ಲಿ ಪಶ್ಚಾತ್ತಾಪ ಉದ್ಭವಿಸಿತು. ಮಹಾಸಾಮ್ರಾಟನಿಗೆ ಅದೊಂದು ದೊಡ್ಡ ವ್ಯಸನ ಮತ್ತು ದುಃಖ.”

ಕಳಿಂಗ ಯುದ್ಧದಲ್ಲಿ ಕೊಲೆಯಾದವರ ಅಥವ ಸೆರೆಸಿಕ್ಕಿದವರ ನೂರರಲ್ಲೊಂದು ಪಾಲು, ಸಾವಿರದಲ್ಲಿ ಒಂದು ಪಾಲು ಸಹ ಇನ್ನು ಎಂದೂ ಕೊಲ್ಲಬಾರದು, ಬಂಧಿಸಲಾಗದು ಎಂಬುದು ಸಾಮ್ರಾಟನ ಹಟ, ಕರ್ತವ್ಯ ಧರ್ಮದಿಂದ ಅಥವ ದಯಾಧರ್ಮದಿಂದ ಜನರ ಹೃದಯವನ್ನು ಸೂರೆಗೊಳ್ಳುವುದೇ ನಿಜವಾದ ವಿಜಯ, ಅಂತಹ ವಿಜಯಗಳನ್ನು ಅಶೋಕನು ತನ್ನ ಅಧೀನ ರಾಜ್ಯಗಳಲ್ಲಿ ಮಾತ್ರವಲ್ಲ, ದೂರದೇಶಗಳಲ್ಲಿ ಸಹಗಳಿಸಿದ್ದನೆಂದು ಆ ಶಾಸನ ಹೇಳುತ್ತದೆ. ಇಷ್ಟೇ ಅಲ್ಲದೆ :

“ಯಾರಾದರೂ ಒಂದು ಕೆಡುಕುಮಾಡಿದರೆ ಅದನ್ನು ಸಹ ಎಷ್ಟು ಸಾಧ್ಯವೋ ಅಷ್ಟು ಚಕ್ರವರ್ತಿಯು ಸಹಿಸಿಕೊಳ್ಳಬೇಕು. ಚಕ್ರವರ್ತಿಯು ತನ್ನ ರಾಜ್ಯದ ಕಾಡುಜನರನ್ನು ಸಹ ಕರುಣೆಯಿಂದ ನೋಡುತ್ತಾನೆ. ಅವರ ಜೀವನವನ್ನು ತಿದ್ದಲು ಪ್ರಯತ್ನ ಮಾಡುತ್ತಾನೆ. ಆ ರೀತಿ ಮಾಡದೆ ಹೋದರೆ ಚಕ್ರವರ್ತಿಯು ಪುನಃ ವ್ಯಥೆಪಡುತ್ತಾನೆ. ಎಲ್ಲ ಜೀವಿಗಳೂ ನಿರ್ಭಯರಾಗಿ, ಆತ್ಮ ಸಂಯಮದಿಂದ, ಮನಶ್ಯಾಂತಿಯಿಂದ ಸುಖವಾಗಿ ಬಾಳಲೆಂಬುದೇ ಸಾಮ್ರಾಟನ ಆಸೆ” ಎಂದು ಹೇಳುತ್ತದೆ.

ಭಾರತದಲ್ಲಿ, ಏಷ್ಯದ ಇತರ ಭಾಗಗಳಲ್ಲಿ, ಇನ್ನೂ ಜನರ ಮನಸ್ಸನ್ನು ಸೆಳೆದಿರುವ ಈ ಮಹಾಚಕ್ರವರ್ತಿಯು ಬೌದ್ಧ ಧರ್ಮ, ಸದ್ಗುಣ ಮತ್ತು ವಿಶ್ವ ಪ್ರೇಮಗಳ ಪ್ರಚಾರಕ್ಕೆ ಮತ್ತು ಸಾರ್ವಜನಿಕೋಪಯುಕ್ತ ಕಾರ್ಯಗಳಿಗೆ ಆತ್ಮನಿವೇದನ ಮಾಡಿದ. ಆತನು ತನ್ನ ಆತ್ರೋನ್ನತಿ ಮತ್ತು ಧ್ಯಾನದಲ್ಲಿಯೇ ಮಗ್ನನಾಗಿ ಆದುದಾಗಲೆಂದು ಕ್ರಿಯಾಶೂನ್ಯನಾಗಿ ನೋಡುತ್ತ ಕುಳಿತುಕೊಳ್ಳುವ ವ್ಯಕ್ತಿಯಾಗಿರಲಿಲ್ಲ. ತನ್ನ ಕಾಲವನ್ನೆಲ್ಲ ಸಾರ್ವಜನಿಕ ಕೆಲಸಗಳಿಗೆ ಮಾಸಲಾಗಿಟ್ಟಿದ್ದ ಮತ್ತು ಸೇವೆಗೆ ಸದಾ ಸಿದ್ಧನಿದ್ದ. "ಎಲ್ಲಕಾಲದಲ್ಲಿ ಎಲ್ಲ ಕಡೆಗಳಲ್ಲಿ, ರಾಣಿವಾಸದಲ್ಲಿರಲಿ ಶಯ್ಯಾಗೃಹದಲ್ಲಿರಲಿ, ಭೋಜನದಲ್ಲಿರಲಿ, ಅಂತಗ್ರಹದಲ್ಲಿರಲಿ, ರಥದಲ್ಲಿರಲಿ, ರಾಜೋದ್ಯಾನದಲ್ಲಿರಲಿ ವರದಿಗಾರರು ಪ್ರಜಾಕಾರ್ಯವನ್ನು ನನಗೆ ತಿಳಿಸುತ್ತಲೇ ಇರಬೇಕು. ಯಾವ ಸಮಯವಿರಲಿ, ಯಾವ ಸ್ಥಳವಿರಲಿ, ನಾನು ದುಡಿಯುವುದು ಸರ್ವರ ಸುಖಕ್ಕಾಗಿ”.

ಆತನ ದೂತರು ಮತ್ತು ರಾಯಭಾರಿಗಳು ಸಿರಿಯ, ಈಜಿಪ್ಟ್, ಮೆಸಿಡೋನಿಯ, ಸೈರೀನ್ ಮತ್ತು ಎಪಿರಸ್ ರಾಜ್ಯಗಳಿಗೆ ಶುಭ ರಾಜ ಸಂದೇಶದೊಂದಿಗೆ ಬುದ್ಧನ ಉಪದೇಶವನ್ನು ತೆಗೆದುಕೊಂಡು ಹೋದರು. ಮಧ್ಯ ಏಷ್ಯ, ಬರ್ಮ ಮತ್ತು ಸಯಾಮ್ ದೇಶಗಳಿಗೂ ಹೋದರು. ತನ್ನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರರನ್ನು ದಕ್ಷಿಣಕ್ಕೆ ಸಿಂಹಳಕ್ಕೆ ಕಳುಹಿಸಿದನು. ಎಲ್ಲೆಡೆಯಲ್ಲೂ ಮನಸ್ಸು ಮತ್ತು ಹೃದಯವನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಯಿತು. ಎಲ್ಲಿಯೂ ಯಾವ ನಿರ್ಬಂಧವೂ ಅಥವ ಒತ್ತಾಯವೂ ಇರಲಿಲ್ಲ. ಅತಿನಿಷ್ಠ ಬೌದ್ಧ ಧರ್ಮಿಯಾದರೂ ಇತರ ಧರ್ಮಗಳಿಗೆ ಗೌರವವನ್ನೂ ಸಹನೆಯನ್ನೂ ತೋರಿದನು. ಒಂದು ಶಾಸನದಲ್ಲಿ :

“ಎಲ್ಲ ಧರ್ಮಗಳೂ ಪರಸ್ಪರ ಗೌರವವನ್ನು ತೋರಿಸಬೇಕು. ಈ ಆಚರಣೆಯಿಂದ ತನ್ನ ಧರ್ಮಕ್ಕೆ ಉನ್ನತ ಗೌರವ ತೋರಿಸಿದಂತಾಗುವುದಲ್ಲದೆ ಇತರರ ಧರಗಳಿಗೆ ಸೇವೆಯನ್ನೂ ಸಲ್ಲಿಸಿದಂತೆ ಆಗುತ್ತದೆ” ಎಂದು ಹೇಳಿದ್ದಾನೆ.

ಬೌದ್ಧ ಮತವು ಸ್ವಲ್ಪ ಕಾಲದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತದಾದ್ಯಂತ ಹರಡಿತು. ನೇಪಾಳ್ ದೇಶದಲ್ಲಿ ಮನೆ ಮಾಡಿ ಕೊನೆಗೆ ತಿಬೆಟ್, ಚೀನ, ಮಂಗೋಲಿಯ ದೇಶಗಳಿಗೆ ಸಹ ಹರಡಿತು. ಇದರ ಫಲವಾಗಿ ಭಾರತದಲ್ಲಿ ಸಸ್ಯಾಹಾರ ಮತ್ತು ಮದ್ಯಪಾನ ನಿರೋಧ ಬೆಳೆಯಿತು. ಅಲ್ಲಿಯವರೆಗೆ ಬ್ರಾಹ್ಮಣರು ಸಹ ಮಾಂಸಾಹಾರ ಮದ್ಯಪಾನ ಮಾಡುತ್ತಿದ್ದರು. ಪಶು ಯಜ್ಞ ನಿಷಿದ್ಧವಾಯಿತು.

ಪರದೇಶಗಳೊಂದಿನ ಪರಸ್ಪರ ಸಂಬಂಧದಿಂದಲೂ, ಧರ್ಮ ಪ್ರಚಾರಗಳಿಂದಲೂ ಭಾರತ ಮತ್ತು