ಈ ಪುಟವನ್ನು ಪರಿಶೀಲಿಸಲಾಗಿದೆ

ಯುಗಾಂತರಗಳು

೧೨೧

ಪ್ರಾಚೀನ ಮತ್ತು ಮಧ್ಯಯುಗದ ಭಾರತದಲ್ಲಿ ಸಮಾಜರಚನೆಗೆ ಪ್ರಗತಿಯ ಪ್ರತಿಭಟನೆ ಯಾವುದೂ ಇರಲಿಲ್ಲ. ಆದರೂ ಮಾರ್ಪಾಟು ಮತ್ತು ಹೊಂದಾಣಿಕೆಯ ಅವಶ್ಯಕತೆಯು ಅಗತ್ಯವೆಂದು ಜನತೆಯು ಸದಾ ತಿಳಿದಿತ್ತು; ಆದ್ದರಿಂದ ಸಂಘಟನೆಯ ಉತ್ಸಾಹವೂ ಬೆಳೆದಿತ್ತು, ಈ ಸಂಘಟನೆ ಭಾರತದ ಹೊರಗಿನಿಂದ ಬಂದ ವಿವಿಧ ಜನರ ಸಂಘಟನೆ ಮಾತ್ರವಲ್ಲ; ವ್ಯಕ್ತಿಯ ಬಾಹ್ಯ ಜೀವನದ ಮತ್ತು ಆಂತರಿಕ ಜೀವನದ ಸಮಿಾಕರಣ, ಪ್ರಕೃತಿ ಮತ್ತು ಮನುಷ್ಯನ ಏಕೀಭಾವವಾಗತ್ತು. ಈಗ ಇರುವಂತ ಆಗ ಸಮಾಜದಲ್ಲಿ ಆಳವಾದ ಅ೦ತರವೂ ಇರಲಿಲ್ಲ, ಭೇದವೂ ಇರಲಿಲ್ಲ. ಈ ಒಂದು ಸಾಮಾನ್ಯ ಸಂಸ್ಕೃ ತಿಯ ಹಿನ್ನೆಲೆಯು ಭಾರತಕ್ಕೊಂದು ರೂಪುಕೊಟ್ಟಿತು ಮತ್ತು ಎಷ್ಟೇ ಅನೈಕ್ಯತೆಗಳಿದ್ದರೂ ಒಂದು ಐಕ್ಯತೆ ಯನ್ನು ಕೊಟ್ಟಿತು. ರಾಜ್ಯ ರಚನೆಯ ತಳಹದಿಯಾಗಿ ಸ್ಥಳೀಯ ಸ್ವರಾಜ್ಯವುಳ್ಳ ಗ್ರಾಮ ಪಂಚಾಯಿತಿ ಗಳಿದ್ದವು. ರಾಜರುಗಳು ಎಷ್ಟೋ ಜನ ಆಗಿಹೋದರೂ ಮೂಲ ಗ್ರಾಮಜೀವನವು ನಾಶವಾಗಲಿಲ್ಲ. ರಾಜ್ಯಶಕ್ತಿಯು ನೋಡಲು ಎಷ್ಟೇ ಕ್ರೂರವೆಂದು ತೋರಿದರೂ, ಅದನ್ನು ಹದ್ದಿನಲ್ಲಿಡಲು ಅನೇಕ ಸಾಂಪ್ರದಾಯಿಕ ಮತ್ತು ವಿಧಿಬದ್ಧ ಮಾರ್ಗಗಳಿದ್ದವು. ಯಾವ ರಾಜನೇ ಆಗಲಿ ಗ್ರಾಮಸ್ಥರ ಹಕ್ಕು ಬಾಧ್ಯತೆಗಳಲ್ಲಿ ಪ್ರವೇಶಿಸಲು ಅವಕಾಶವಿರಲಿಲ್ಲ. ಈ ಸಾಂಪ್ರದಾಯಿಕ ಹಕ್ಕು ಬಾಧ್ಯತೆಗಳಿಂದ ಜನತೆಗೂ ವ್ಯಕ್ತಿಗೂ ಸ್ವಲ್ಪ ಸ್ವಾತಂತ್ರವಿತ್ತು.

ಇಂದಿನ ಭಾರತೀಯರಲ್ಲಿ ನಿಜವಾದ ಭಾರತೀಯರೆಂದು, ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಹೆಮ್ಮೆ ಪಡುವವರಲ್ಲಿ ರಜಪೂತರು ಅಗ್ರಗಣ್ಯರು. ಗತಕಾಲದ ಅವರ ಶೌರ್ಯ ಸಾಹಸ ಕಾರ್ಯಗಳು ಆ ಪರಂಪರೆಯ ಒಂದು ಜೀವಂತ ಅಂಗವಾಗಿದೆ. ಆದರೂ ರಜಪೂತರಲ್ಲಿ ಅನೇಕರು ಇಂಡೊ ಸಿಥಿಯನರ ವಂಶಜರು, ಇನ್ನು ಕೆಲವರು ಹೂಣ ವಂಶಜರು. ಇವರೆಲ್ಲ ಭಾರತಕ್ಕೆ ಹೊರಗಿ ನಿಂದ ಬಂದವರು. ಜಾಠರಿಗಿಂತ ಭೂಮಿತಾಯಿಯ ನಚ್ಚಿನ ಮಕ್ಕಳಿಲ್ಲ; ಆದರೆ ಒಂದು ಅಂಗುಲ ಭೂಮಿಗಾಗಿ ತಮ್ಮ ಪ್ರಾಣವನ್ನೆ ಕೊಡಲು ಸಿದ್ಧರಿರುವ ಈ ಜಾಠರು ಭಾರತೀಯ ರೈತರಲ್ಲ; ಆಜಾನುಬಾಹು ಗಳು ಮತ್ತು ದೃಢಕಾಯರೂ ಆದ ಅವರೂ ಸಿಥಿಯನರಿಂದ ಬಂದವರು. ಕಾಥೇವಾಡದ ಎತ್ತರದ ನಿಲು ವಿನ ಅಂದವಾದ ಮೈ ಕಟ್ಟಿನ 'ಕಥಿ'ಗಳೂ ಹಾಗೆಯೇ ನಮ್ಮ ಜನರ ವಂಶಮೂಲವನ್ನು ಕೆಲವು ಕಡೆ ಸ್ವಲ್ಪ ನಿಕರವಾಗಿ ಹೇಳಬಹುದು; ಇನ್ನು ಕೆಲವು ಸಂದರ್ಭಗಳಲ್ಲಿ ಸಾಧ್ಯವೇ ಇಲ್ಲ. ಆದರೆ ಅವರ ವಂಶ ಮೂಲ ಏನೇ ಇರಲಿ ಅವರೆಲ್ಲ ಭಾರತೀಯರಾಗಿದ್ದಾರೆ. ಭಾರತೀಯರ ಪುರಾತನ ಸಂಪ್ರದಾಯಗಳು ತಮ್ಮವೆಂದೇ ಭಾವಿಸಿ, ಭಾರತೀಯ ಸಂಸ್ಕೃತಿಯಲ್ಲಿ ತಾವೂ ಇತರರೊಡನೆ ಭಾಗಿಗಳಾಗಿ ನಡೆದು ಬಂದಿದ್ದಾರೆ.

ಹೊರಗಿನಿಂದ ಬಂದು ಭಾರತದ ಜನಕೋಟಿಯಲ್ಲಿ ಐಕ್ಯರಾದ ಜನರೆಲ್ಲ ಭಾರತ ಸಂಸ್ಕೃತಿ ಯಿಂದ ವಿಶೇಷ ಪ್ರಯೋಜನ ಪಡೆದಿದ್ದರೂ, ಭಾರತ ಸಂಸ್ಕೃತಿಗೆ ತಮ್ಮದೂ ಕಾಣಿಕೆ ಸಲ್ಲಿಸಿದ್ದಾರೆ ; ಆ ಸಂಸ್ಕೃತಿಯ ಶಕ್ತಿಯಿಂದ ಭಾರತದ ಸಂಸ್ಕೃತಿ ಪುಷ್ಟಿ ಗೂಡಿಕೊಂಡಿದೆ. ಆದರೆ ಪ್ರತ್ಯೇಕವಾಗಿಯೇ ಇದ್ದು, ಭಾರತದ ಜೀವನದಲ್ಲಿ ಮತ್ತು ಅದರ ವಿವಿಧ ಸಂಪದಭಿವೃದ್ಧಿ ಸಂಸ್ಕೃತಿಯಲ್ಲಿ ಭಾಗಿಯಾಗದೆ ಉಳಿದ ಜನಾಂಗವು ಭಾರತ ಜನತೆಯ ಮೇಲೆ ಯಾವ ಶಾಶ್ವತ ಪರಿಣಾಮವನ್ನೂ ಮಾಡಲಿಲ್ಲ. ತಾನೂ ನಾಶವಾಯಿತು; ಜೊತೆಗೆ ಭಾರತದ ಪ್ರಗತಿಗೂ ಹಾನಿಮಾಡಿತು.

೬. ಭಾರತ ಮತ್ತು ಇರಾಣ

ಭಾರತದ ಜನ ಜೀವನ ಮತ್ತು ಸಂಸ್ಕೃತಿಯೊಂದಿಗೆ ಬಾಂಧವ್ಯ ಬೆಳೆಸಿ ಅವುಗಳ ಮೇಲೆ ಪ್ರಭಾವ ಬೀರಿದ ಅನೇಕ ಜನರು ಮತ್ತು ಜನಾಂಗಗಳಲ್ಲಿ ಅತಿ ಪ್ರಾಚೀನವೂ ಮತ್ತು ಪ್ರಬಲವೂ ಆದ ಜನಾಂಗವೆಂದರೆ ಇರಾಣಿಗಳು, ಈ ಸಂಬಂಧವು ಸಿಂಧೂ ಆರ್ಯರ ನಾಗರಿಕತೆಗಿಂತ ಹಿಂದಿನದು. ಏಕೆಂದರೆ ಸಿಂಧೂ ಆರ್ಯರೂ ಮತ್ತು ಪುರಾತನ ಇರಾಣಿಗಳೂ ಒಂದೇ ಬುಡಕಟ್ಟಿನವರು ; ಬೇರೆ ಬೇರೆ ದೇಶಗಳಿಗೆ ಹೋಗಿ ಬೇರೆ ಬೇರೆ ದಾರಿಹಿಡಿದರು. ಜನಾಂಗ ಸಂಬಂಧವಲ್ಲದೆ ಅವರ ಧರ್ಮ ಮತ್ತು ಭಾಷೆಗಳಿಗೂ ಒಂದೇ ಹಿನ್ನೆಲೆ ಇತ್ತು. ವೇದ ಧರ್ಮಕ್ಕೂ, ಜೂರಾಷ್ಟ್ರ ಧರ್ಮಕ್ಕೂ