ಕೊಡುವವರಲ್ಲ; ಉಳಿದವರು ಹಾಳಾದರೂ ತನ್ನ ಆತ್ಮ ತಿಯಾದರೆ ಸಾಕೆಂದು ಕಾಡು ಸೇರುವವರಲ್ಲ. ದಕ್ಷಿಣ ಭಾರತದ ಮಲೆಯಾಳದಲ್ಲಿ ಹುಟ್ಟಿದರೂ ಬಿಡುವಿಲ್ಲದೆ ಭಾರತಾದ್ಯಂತ ಸಂಚಾರ ಮಾಡಿ, ಅಸಂಖ್ಯಾತ ಜನರ ಪರಿಚಯ ಮಾಡಿಕೊಂಡು ವಾದಮಾಡಿ, ಚರ್ಚೆಮಾಡಿ, ಕಾರಣ ತೋರಿಸಿ, ಅವರ ಮನಸ್ಸನ್ನು ಒಲಿಸಿಕೊಂಡು ತಮ್ಮ ಆತ್ಮಶ್ರದ್ಧೆ ಮತ್ತು ಅದ್ಭುತ ಕಾರ್ಯಶಕ್ತಿಯನ್ನು ಬೋಧಿಸಿ ತುಂಬಿದನು. ಆತನ ಜೀವನದ ಉದ್ದೇಶ್ಯವು ಸಂಪೂರ್ಣ ತಿಳಿದಿತ್ತು ; ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಭರತಖಂಡವೇ ಆತನ ಕಾರ್ಯ ಕ್ಷೇತ್ರವಾಯಿತು ; ಹೊರಗೆ ರೂಪ ಭೇದಗಳು ಅನೇಕವಿದ್ದರೂ ಒಂದೇ ಸಂಸ್ಕೃತಿ ಮತ್ತು ಒಂದೇ ಉತ್ಸಾಹವು ಜನರನ್ನು ಒಂದುಗೂಡಿಸಿದೆ ಎಂದು ತಿಳಿದಿದ್ದರು. ತಮ್ಮ ಕಾಲದಲ್ಲಿ ಭಾರತೀಯರ ಮನಸ್ಸನ್ನು ಕದಡಿದ್ದ ಭಿನ್ನ ಭಿನ್ನ ಭಾವನೆ ಗಳನ್ನು ಒಂದುಗೂಡಿಸಲು ಪ್ರಯತ್ನ ಮಾಡಿ ಅನೈಕ್ಯತೆಯಲ್ಲಿ ಐಕ್ಯತೆಯನ್ನು ಸಾಧಿಸಹೊರಟರು. ಕೇವಲ ಮೂವತ್ತೆರಡು ವರುಷಗಳ ಅಲ್ಪ ಜೀವಮಾನದಲ್ಲಿ ಅನೇಕ ದೀರ್ಘ ಜೀವಿಗಳ ಕಾರ್ಯವನ್ನು ಸಾಧಿಸಿದರು. ಆತನ ಅಸಾಧಾರಣ ಬುದ್ಧಿಶಕ್ತಿ ಮತ್ತು ಆತ್ಮಶ್ರೀಯ ಪ್ರಭಾವವು ಇಂದಿಗೂ ಭಾರತದಲ್ಲಿ ಪೂರ್ಣ ಪ್ರತಿಭಾಯುಕ್ತ ವಿರುವುದನ್ನು ನೋಡಬಹುದು. ಆತನೊಬ್ಬ ಮಹಾ ದಾರ್ಶನಿಕ, ವಿದ್ವಾಂಸ, ಅಜ್ಞೆ ಯತಾವಾದಿ, ಭಕ್ತಾಗ್ರಣಿ, ಕವಿಶ್ರೇಷ್ಠ, ಸಂತ ಇದೆಲ್ಲದರ ಜೊತೆಗೆ ಅನುಭವಪೂರ್ಣ ಸಮಾಜಸುಧಾರಕ ಮತ್ತು ಅದ್ಭುತಸಂಘಟನಾಕಾರ್ಯಶಕ್ತ, ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದನು. ದಕ್ಷಿಣದಲ್ಲಿ ಮೈಸೂರಿನ ಶೃಂಗೇರಿಯಲ್ಲಿ, ಪೂರ್ವತೀರದ ಪೂರಿಯಲ್ಲಿ, ಪಶ್ಚಿಮತೀರದ ಆಥವಾಡದ ದ್ವಾರಕೆಯಲ್ಲಿ, ಹಿಮಾಲಯದ ಹೃದಯದಂತಿರುವ ಬದರಿಯಲ್ಲಿ ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿ ಉಷ್ಣ ದೇಶವಾದ ದಕ್ಷಿಣ ಭಾರತದ ಈ ಬ್ರಾಹ್ಮಣ ಹಿಮಾಲಯ ಪರ್ವತದ ಹಿಮ ಆಚ್ಛಾದಿತ ಕೇದಾರದಲ್ಲಿ ಅಂತರ್ಧಾನನಾದನು.
ಪ್ರಯಾಣವು ಬಹು ಕಷ್ಟವಿದ್ದಾಗ, ಪ್ರಯಾಣ ಸೌಕಠ್ಯವು ಬಹು ನಿದಾನವೂ ಕಷ್ಟ ತನವೂ ಆಗಿದ್ದ ಕಾಲದಲ್ಲಿ ಶಂಕರರು ವಿಶಾಲ ಭಾರತದ ಅತ್ಯಂತ ದೀರ್ಘ ದೇಶಾಟನ ಕೈಗೊಂಡಿದ್ದರಲ್ಲಿ ಒಂದು ವೈಶಿಷ್ಟ್ಯವಿದೆ. ಈ ದೇಶಾಟನಗಳ ಕಲ್ಪನೆಯೊಂದೇ ಸಾಕು ; ಮತ್ತು ಹೋದಕಡೆಯಲ್ಲೆಲ್ಲ ಉನ್ನತ ಭಾವನೆಯ ಜನರನ್ನು ಭೇಟಿಮಾಡಿ, ಭಾರಾತಾದ್ಯಂತ ವಿದ್ವಾಂಸರ ಏಕಮಾತ್ರ ಭಾಷೆಯಾಗಿದ್ದ ಸಂಸ್ಕೃತದಲ್ಲಿ ಮಾತನಾಡಿ ಚರ್ಚಿಸಿರುವುದನ್ನು ನೋಡಿದರೆ ಆದೂರದ ಪ್ರಾಚೀನಕಾಲದಲ್ಲಿ ಸಹ ಭಾರತವು ಅಖಂಡವಾಗಿತ್ತೆಂಬುದಕ್ಕೆ ಬೇರೆ ನಿದರ್ಶನ ಬೇಕಿಲ್ಲ. ಆಗಲೂ ಅದಕ್ಕೆ ಮುಂಚೆಯ ಅಂತಹ ಪ್ರಯಾಣಗಳು ವಿರಳವಿರಲಿಲ್ಲ. ರಾಜಕೀಯ ಪ್ರಭೇದಗಳೇನಿದ್ದರೂ ಜನರು ಭಾರತದ ನಾನಾ ಭಾಗಗಳಿಗೆ ಹೋಗಿ ಬರುತ್ತಿದ್ದರು. ಹೊಸಗ್ರಂಥಗಳ ಪರಿಚಯವಾಗುತ್ತಿತ್ತು ; ಪ್ರತಿಯೊಂದು ಹೊಸಭಾವನೆಯೂ, ನೂತನ ಸಿದ್ದಾಂತವೂ ದೇಶಾದ್ಯಂತವೂ ಹರಡುತ್ತಿತ್ತು ; ಜನರು ಕುತೂಹಲಿಗಳಾಗಿ ವಿಚಾರಮಾಡುತ್ತಿದ್ದರು ; ಕೆಲವು ವೇಳೆ ವಾಗ್ಯುದ್ದಗಳೂ ನಡೆಯುತ್ತಿದ್ದವು. ವಿದ್ಯಾವಂತರಲ್ಲಿ ಒ೦ದೇಬಗೆಯ ಬುದ್ದಿ ಚಾತುರ್ಯವೂ ಮತ್ತು ಸುಸಂಸ್ಕೃತ, ಜೀವನವೂ ನೆಲೆಸಿತ್ತು. ಸಾಮಾನ ಜನರು ಅಸಂಖ್ಯಾತರಾಗಿ ಮಹಾಪುರಾಣ ಕಾಲದಿಂದಲೂ ದೇಶಾದ್ಯಂತ ಅಲ್ಲಲ್ಲಿ ಏರ್ಪಟ್ಟಿರುವ ಪ್ರಸಿದ್ಧ ಯಾತ್ರಾಸ್ಥಳಗಳಿಗೆ ಅವಿಚ್ಛಿನ್ನವಾಗಿ ಯಾತ್ರೆ ಹೋಗುತ್ತಿದ್ದರು. ಈ ಬಗೆಯ ಪ್ರವಾಸಗಳಿಂದ ವಿವಿಧಭಾಗಗಳ ಜನರೊಂದಿನ ವಿಚಾರ ವಿನಿಮಯದಿಂದ ಜನರಲ್ಲಿ ತಮ್ಮ ದೇಶ ಒಂದು, ಸಂಸ್ಕೃತಿ ಒಂದು ಎಂಬ ರಾಷ್ಟ್ರೀಯ ಭಾವನೆ ಬೆಳೆಯಿತು. ಮೇರಗತಿಯ ಜನರು ಮಾತ್ರವೇ ಈ ಪ್ರವಾಸ ಹೋಗುತ್ತಿರಲಿಲ್ಲ. ಎಲ್ಲ ಜಾತಿ ಮತಗಳ ಸ್ತ್ರೀಪುರುಷರೂ ಯಾತ್ರೆ ಮಾಡುತ್ತಿದ್ದರು. ಈ ಯಾತ್ರೆಗಳಿಂದ ಜನರ ಮನಸ್ಸಿನ ಮೇಲೆ ಧಾರ್ಮಿಕಭಾವನೆಯೇನೆ ಆಗಿರಲಿ ಈಗಿನಂತ ಆಗಲೂ ಸಹ ವಿಶ್ರಾಂತಿ ಪಡೆದು ವಿನೋದದಿಂದ ದೇಶಗಳನ್ನು ನೋಡಿ ಪ್ರಪಂಚ ಪರಿಚಯ ಪಡೆಯುತ್ತಿದ್ದರು. ಪ್ರತಿಯೊಂದು ಯಾತ್ರಾ ಸ್ಥಳವೂ ಅಖಂಡ ಭಾರತದ ಅಡ್ಡ ಕೊಯ್ಯದ ಒಂದು ತುಂಡಿನಂತೆ ಇರುತ್ತಿತ್ತು. ವಿವಿಧ ಪದ್ಧತಿಗಳ, ಉಡುಪಿನ ಭಾಷೆಗಳ ಜನರಿದ್ದರೂ ತಮ್ಮೆಲ್ಲರನ್ನೂ ಒಂದುಗೂಡಿಸಿ ಒಂದೇ ಗುರಿಗೆ
ಪುಟ:ಭಾರತ ದರ್ಶನ.djvu/೧೬೯
ಈ ಪುಟವನ್ನು ಪ್ರಕಟಿಸಲಾಗಿದೆ
೧೬೪
ಭಾರತ ದರ್ಶನ