ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೬೭


ಚೀನ ಇಂಡಿಯ ದೇಶಗಳ ಮಧ್ಯೆ ದ್ವಿಮುಖ ವ್ಯವಹಾರವಿತ್ತು. ಇಲ್ಲಿಂದ ವಿದ್ವಾಂಸರು ಚೀನಾಕ್ಕೆ ಹೋದಂತ ಚೀನಾದಿಂದಲೂ ವಿದ್ವಾಂಸರು ಇಲ್ಲಿಗೆ ಬರುತ್ತಿದ್ದರು. ಇಂಡಿಯಾ ದೇಶಕ್ಕೆ ಬಂದು ತಮ್ಮ ಪ್ರವಾಸ ಸಾಹಿತ್ಯವನ್ನು ಬರೆದು ಇಟ್ಟವರಲ್ಲಿ ಪ್ರಮುಖರೆಂದರೆ ಫಾಹಿಯನ್, ಸೂಂಗ್ ಯಸ್, ಹುಯನ್ ತ್ಸಾಂಗ್, ಮತ್ತು ಇಂಗ್, ಫಾಹಿಯನ್ ಐದನೆ ಶತಮಾನದಲ್ಲಿ ಬಂದವನು. ಚೀನಾ ದೇಶದಲ್ಲಿ ಕುಮಾರಜೀವನ ಶಿಷ್ಯನಾಗಿದ್ದ. ಗುರುವಿನ ಅಪ್ಪಣೆಯನ್ನು ಪಡೆಯಲು ಹೋದ ಕಾಲದಲ್ಲಿ ಭಾರತಕ್ಕೆ ಹೊರಡುವ ಮುನ್ನ ಶಿಷ್ಯನಿಗೆ ಕುಮಾರಜೀವನು ಕೊಟ್ಟ ಉಪದೇಶವು ಗಮನಾ ರ್ಹವಾಗಿದೆ. ಕೇವಲ ಧಾರ್ಮಿಕ ಜ್ಞಾನ ಸಂಪಾದನೆಯಲ್ಲಿ ಕಾಲವನ್ನೆಲ್ಲ ಕಳೆಯಬೇಡ, ಇಂಡಿಯಾ ದೇಶದ ಜನರ ಜೀವನ ಮತ್ತು ಪದ್ಧತಿಗಳನ್ನು ವಿಶದವಾಗಿ ತಿಳಿದುಕೊಳ್ಳುವದರಿಂದ ಚೀನ ದೇಶ ಭಾರತೀಯರನ್ನೂ ಭಾರತವನ್ನೂ ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದನಂತ. ಫಾಹಿಯನ್ ಪಾಟಲಿಪುತ್ರ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡಿದನು.
ಇಂಡಿಯಾಕ್ಕೆ ಬಂದ ಚೀನ ಯಾತ್ರಿಕರಲ್ಲಿ ಬಹಳ ಪ್ರಸಿದ್ಧನಾದವನೆಂದರೆ ಹುಯನ್ ತ್ಸಾಂಗ್. ಏಳನೆಯ ಶತಮಾನದಲ್ಲಿ ಚೀನಾ ದೇಶದಲ್ಲಿ ತಾಂಗ್ ವಂಶವು ಉಚ್ಛಾಯಸ್ಥಿತಿಯಲ್ಲಿದ್ದಾಗ ಮತ್ತು ಉತ್ತರ ಹಿಂದೂಸ್ಥಾನದಲ್ಲಿ ಹರ್ಷವರ್ಧನನು ಚಕ್ರವರ್ತಿಯಾಗಿ ರಾಜ್ಯಭಾರ ಮಾಡುತ್ತಿದ್ದಾಗ ಇಂಡಿಯ ದೇಶಕ್ಕೆ ಬಂದನು. ಗೋಬಿಮರುಭೂಮಿಯನ್ನೂ ದಾಟಿ, ತುರ್ಫಾನ, ಕೂಚ, ತಾಷ್ಕಂಡ್, ಸಮರಖಂಡ್, ಬಾಲ್ಸ್, ಖೋತಾನ್, ಯಾರ್ಖಂಡ್ ಮಾರ್ಗವಾಗಿ, ಹಿಮಾಲಯ ಪರ್ವತವನ್ನು ದಾಟಿ ಭೂಮಾರ್ಗದಲ್ಲಿ ಇಂಡಿಯಾ ದೇಶಕ್ಕೆ ಬಂದನು. ಅನೇಕ ಸಾಹಸ ಕತೆಗಳನ್ನು ಗಂಡಾಂತರ ಗಳನ್ನು, ಮಧ್ಯ ಏಷ್ಯದಲ್ಲಿ ರಾಜ್ಯವಾಳುತ್ತಿದ್ದ ಬೌದ್ದ ರಾಜರುಗಳ, ಬೌದ್ಧ ವಿಹಾರಗಳ, ನಿಷ್ಠ ಬೌದ್ದ ರಾದ ತುರ್ಕಿ ಜನರ ವಿಚಾರವನ್ನು ತಿಳಿಸುತ್ತಾನೆ. ಭಾರತದ ದೇಶಾದ್ಯಂತ ಪ್ರವಾಸಮಾಡಿ ದನು. ಎಲ್ಲ ಕಡೆಯಲ್ಲೂ ಆತನಿಗೆ ಗೌರವವೂ ಸನ್ಮಾನವೂ ದೊರೆಯಿತು. ಅವನು ನೋಡಿದ ಜನರ ಮತ್ತು ಸ್ಥಳಗಳ ವಿಷಯವಾಗಿ ತಾನು ಕಂಡು ಕೇಳಿದ ಮನಮೋಹಕ, ಕೌತುಕ ಕಥೆ ಗಳನ್ನು ಬರೆದಿಟ್ಟಿದ್ದಾನೆ. ಅನೇಕ ವರ್ಷಗಳ ಕಾಲ ಪಾಟಲಿಪುತ್ರಕ್ಕೆ ಅನತಿದೂರದಲ್ಲಿದ್ದ ನಳಂದ ವಿಶ್ವವಿದ್ಯಾನಿಲಯದಲ್ಲಿ ಆತನು ಶಿಕ್ಷಣ ಪಡೆದನು. ಬಹುವಿಧ ಜ್ಞಾನಾರ್ಜನೆಗೆ ನಳಂದ ವಿಶ್ವವಿದ್ಯಾ ನಿಲಯವು ಪ್ರಖ್ಯಾತವಾಗಿತ್ತು. ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬಂದು ಸೇರುತ್ತಿ ದ್ದರು. ೧೦೦೦೦ ವಿದ್ಯಾರ್ಥಿಗಳೂ ಬೌದ್ಧ ಸಂನ್ಯಾಸಿಗಳೂ ಅಲ್ಲಿ ವಾಸಮಾಡುತ್ತ ಇದ್ದರಂತ, ಹುಯೆನ್ ತ್ಸಾಂಗ್ ಅಲ್ಲಿ ನ್ಯಾಯಶಾಸ್ತ್ರ ಪಾರಮ್ಯತೆಯನ್ನು ಪಡೆದು ಕೊನೆಗೆ ಅದೇ ವಿಶ್ವವಿದ್ಯಾ ನಿಲಯದಲ್ಲಿ ಉಪಸ್ಥಾನಪತಿಯಾದನು.

ಹುಯೆನ್ ತ್ಸಾಂಗನ ಸಿ-ಯೂ-ಕಿ-ಗ್ರಂಥ ಅಥವ ಪಶ್ಚಿಮದೇಶದ ಇತಿಹಾಸ (ಇಂಡಿಯದ ಇತಿಹಾಸ) ಓದಲು ಬಹಳ ಸುಂದರವಿದೆ, ಆಗ ಚೀನದೇಶದ ನಾಗರಿಕತೆಯು ಅತ್ಯುನ್ನತ ಮಟ್ಟದ ಲ್ಲಿತ್ತು. ಜೀವನವೂ ಅತಿಕೃತಕವಿತ್ತು. ಆತನ ಊರಾದ ಚೀನಾದೇಶದ ರಾಜಧಾನಿ ಸಿಯಾನ್‌ಪು ಒಂದು ದೊಡ್ಡ ಕಲೆಯ ಮತ್ತು ಜ್ಞಾನಕೇಂದ್ರವಾಗಿತ್ತು. ಅಂತಹ ಸ್ಥಳದಿಂದ ಬಂದು ಹುಯನ್ ತ್ಸಾಂಗ್ ನು ಬರೆದ ಭಾರತದ ಅಂದಿನ ಸ್ಥಿತಿಗತಿಗಳ ವರ್ಣನೆ ಮತ್ತು ವಿಮರ್ಶೆಗಳಿಗೆ ಬಹು ಬೆಲೆಯಿದೆ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾರ್ಜನೆ ಆರಂಭವಾಗುತ್ತಿದ್ದಿತೆಂದೂ, (೧) ವ್ಯಾಕರಣ (೨) ಕಲೆ ಮತ್ತು ವೃತ್ತಿ ವಿಜ್ಞಾನ (೩) ವೈದ್ಯ (೪) ತರ್ಕ (೫) ತತ್ವಶಾಸ್ತ್ರ ಈ ರೀತಿ ಐದು ಶಾಖೆಗಳಲ್ಲಿ ಶಿಕ್ಷಣ ಕೊಡುತ್ತಿದ್ದರೆಂದೂ ಹೇಳುತ್ತಾನೆ. ಭಾರತೀಯರ ಜ್ಞಾನ ಪಿಪಾಸೆಯನ್ನು ಕಂಡು ಆಶ್ಚರ್ಯಗೊಂಡಿ ದ್ದಾನೆ. ಎಲ್ಲ ಸಂನ್ಯಾಸಿಗಳೂ, ಪುರೋಹಿತರೂ ಗುರುಗಳಾಗಿರುತ್ತಿದ್ದುದರಿಂದ ಪ್ರಾಥಮಿಕ ಶಿಕ್ಷಣವು ಎಲ್ಲರಿಗೂ ಲಭ್ಯವಿತ್ತು. ಜನರ ವಿಷಯದಲ್ಲಿ “ ಸಾಮಾನ್ಯ ಜನರು ಸ್ವಭಾವತಃ ಹಗುರ ಮನಸ್ಸಿನ ವರಾದರೂ ಪ್ರಾಮಾಣಿಕರು ಮತ್ತು ಗೌರವಸ್ಥರು ; ಹಣಕಾಸಿನ ವ್ಯವಹಾರದಲ್ಲಿ ಮೋಸವಿಲ್ಲ ; ಧರ್ಮ ನಿರ್ವಹಣೆಯು ದಯೆಯಿಂದ ಕೂಡಿದೆ ; ಅವರ ನಡೆನುಡಿಯಲ್ಲಿ ಮೋಸವಿಲ್ಲ, ನಂಬಿಕೆ