ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೭೯

ಯೊಬ್ಬನು ಆ ರಾಜಧಾನಿಯ ಸಂಪದೈಭವವನ್ನೂ ಸೌಂದರ್ಯವನ್ನೂ ವರ್ಣಿಸಿದ್ದಾನೆ. ಆದರೆ ಇದ್ದಕ್ಕಿದ್ದಂತೆ ಅದು ಕುಸಿದುಬಿತ್ತು. ಕೆಲವು ಅರ್ಧ ಕಟ್ಟಿದ ಕಟ್ಟಡಗಳೂ ಹಾಗೇ ನಿಂತಿವೆ. ಹೊರ ಗಿನ ಮುತ್ತಿಗೆಯ ಒಳಗಿನ ಪಿತೂರಿಯೂ ಕಾರಣವಾಗಿರಬಹುದು. ಎಲ್ಲಕ್ಕೂ ಮುಖ್ಯ ಕಾರಣ ಮೇಕಾಂಗ್ ನದಿಯ ಪಾತ್ರವು ಮುಚ್ಚಿ ಹೋಗಿ ನಗರದ ಸುತ್ತಮುತ್ತಲ ಪ್ರದೇಶವೆಲ್ಲ ಚೌಗುಹಿಡಿದು ವಸತಿಗೆ ಅನುಪಯುಕ್ತವಾಗಿ ಇಡೀ ನಗರವನ್ನೇ ತ್ಯಜಿಸಬೇಕಾಗಿ ಬಂದಿತು.
೯ ನೆಯ ಶತಮಾನದಲ್ಲಿ ಶೈಲೇಂದ್ರ ಚಕ್ರಾಧಿಪತ್ಯದಿಂದ ಜಾವಾ ಸಹ ಸ್ವತಂತ್ರವಾಯಿತು. ಆದಾಗ್ಯೂ ಹನ್ನೊಂದನೆಯ ಶತಮಾನದವರೆಗೆ ಇಂಡೋನೇಷ್ಯದಲ್ಲಿ ಶೈಲೇಂದ್ರರೇ ಅತಿ ಬಲಿಷ್ಠ ರಾಗಿ ದ್ದರು. ಆಗ ಅವರಿಗೂ ದಕ್ಷಿಣ ಭಾರತದ ಚೋಳರಿಗೂ ಯುದ್ಧ ವಾಯಿತು, ಚೋಳರೇ ಜಯ ಶಾಲಿಗಳಾಗಿ ಸುಮಾರು ಐವತ್ತು ವರ್ಷಗಳ ಕಾಲ ಇಂಡೊನೇಷ್ಯದಲ್ಲಿ ತಮ್ಮ ಅಧಿಕಾರ ನಡೆಸಿದರು. ಚೋಳರು ಹಿಂದಿರುಗಿದ ಮೇಲೆ ಶೈಲೇಂದ್ರರು ಪುನಃ ಸ್ವತಂತ್ರರಾಗಿ ಇನ್ನು ಮುನ್ನೂರು ವರ್ಷಗಳ ರಾಜ್ಯವಾಳಿದರು. ಆದರೆ ಈಗ ಪೌರ್ವಾತ್ಯ ಸಮುದ್ರಗಳ ಮೇಲೆ ಒಂದು ಬಲಿಷ್ಠ ರಾಜ್ಯವಾಗಿ ಉಳಿ ಯಲಿಲ್ಲ. ಹದಿಮೂರನೆಯ ಶತಮಾನದಲ್ಲಿ ಆ ಸಾಮ್ರಾಜ್ಯವು ಕ್ಷೀಣದೆಶೆಗೆ ಬರಲಾರಂಭಿಸಿತು. ಅದರ ನಾಶದಿಂದ ಜಾವಾ ಮತ್ತು ತಾಯ್ ದೇಶ (ಸೈಯಾಂ) ಬಲಗೊಂಡವು. ಹದಿನಾಲ್ಕನೆಯ ಶತ ಮಾನದ ಅಂತ್ಯಕಾಲದಲ್ಲಿ ಶ್ರೀ ವಿಜಯ ಶೈಲೇಂದ್ರ ಚಕ್ರಾಧಿಪತ್ಯವನ್ನು ಜಾವಾ ಸಂಪೂರ್ಣವಾಗಿ ಅಧೀನಮಾಡಿಕೊಂಡಿತು.
ಈಗ ಪ್ರಾಮುಖ್ಯತೆಗೆ ಬಂದ ಜಾವ ರಾಷ್ಟ್ರದ ಇತಿಹಾಸವು ಪೂರ್ವ ಪ್ರಸಿದ್ಧ ವಿದೆ. ಬೌದ್ಧ ಮತವು ಅತ್ಯುನ್ನತ ಸ್ಥಿತಿಯಲ್ಲಿ ದ್ದಾಗ್ಯೂ ಈ ರಾಜ್ಯವು ಬ್ರಾಹ್ಮಣ ಧರ್ಮವನ್ನೇ ಅವಲಂಬಿಸಿಕೊಂಡು ಬಂದಿತ್ತು. ಜಾವಾದ್ವೀಪದ ಅರ್ಧ ಭಾಗಕ್ಕಿಂತ ಹೆಚ್ಚಾಗಿ ಶ್ರೀ ವಿಜಯನ ಶೈಲೇಂದ್ರ ಚಕ್ರಾಧಿಪತ್ಯಕ್ಕೆ ಸೇರಿದ್ದರೂ ಶೈಲೇಂದ್ರ ಚಕ್ರಾಧಿಪತ್ಯದ ರಾಜಕೀಯ ಮತ್ತು ಆರ್ಥಿಕ ನೀತಿಗಳ ಅಧೀನಕ್ಕೆ ಒಳಗಾಗದೆ ಎದುರಿಸಿ ನಿಂತಿತ್ತು. ಅದರ ಪ್ರಜೆಗಳು ಸಮುದ್ರಯಾನ ಮತ್ತು ವ್ಯಾಪಾರದಲ್ಲಿ ಮತ್ತು ಭವ್ಯವಾದ ಶಿಲಾ ಸೌಧಗಳನ್ನು ಕಟ್ಟುವುದರಲ್ಲಿ ತುಂಬ ಆಸಕ್ತರೂ ನಿಪುಣರೂ ಇದ್ದರು. ಅದರ ಮೊದಲ ಹೆಸರು ಸಿಂಹಸಾರಿ ರಾಜ್ಯವೆಂದು ; ಆದರೆ ೧೨೯೨ ರಲ್ಲಿ ಮಜ ಪಹಿತ್ ಎಂಬ ಹೊಸ ನಗರವನ್ನು ಕಟ್ಟಿದ್ದ ರಿಂದ ಮಜ ಪಹಿತ್ ಚಕ್ರಾಧಿಪತ್ಯವೆಂದು ಹೆಸರು ಪಡೆಯಿತು. ಶ್ರೀವಿಜಯನ ತರುವಾಯ ಆಗ್ನೆಯ ಏಷ್ಯದಲ್ಲಿ ಬಲಿಷ್ಠ ರಾಜ್ಯವೆಂದರೆ ಇದೇ. ಕುಬ್ಲಾ ಯತ್ ಖಾನನು ಕಳುಹಿಸಿದ ಕೆಲವು ಚೀನೀರಾಯ ಭಾರಿಗಳಿಗೆ ಮಜಪಹಿತ್ ಅಗೌರವ ತೋರಿಸಿದ್ದರಿಂದ ಚೀನರು ದಂಡೆತ್ತಿ ಬಂದು ಶಿಕ್ಷೆಮಾಡಿದರು. ಪ್ರಾಯಶಃ ಬಂದೂಕಿನ ಮದ್ದು ಸುಡುವುದನ್ನು ಜಾವಾ ಜನರು ಚೀನೀಯರಿಂದ ಕಲಿತಿರಬೇಕು. ಕೊನೆಯಲ್ಲಿ ಅದರ ಸಹಾಯದಿಂದಲೇ ಶೈಲೇಂದ್ರರನ್ನು ಜೈಸಿದರು.
ಮಜವಹಿತ್ ರಾಜ್ಯದಲ್ಲಿ ಶಕ್ತಿಯುತವಾದ ಕೇಂದ್ರ ಸರಕಾರವಿತ್ತು ಮತ್ತು ಚಕ್ರಾಧಿಪತ್ಯವು ವಿಶಾಲವಾಗಿ ಹೆಚ್ಚಿತು. ಅದರ ಕಂದಾಯ ಪದ್ಧತಿಯು ಬಹಳ ಸುವ್ಯವಸ್ಥಿತವಿತ್ತಂತೆ. ವ್ಯಾಪಾರಕ್ಕೂ ವಲಸೆ ರಾಜ್ಯಗಳಿಗೂ ಹೆಚ್ಚು ಗಮನಕೊಡುತ್ತಲಿತ್ತು. ಸರಕಾರದ ಆಡಳಿತದಲ್ಲಿ ವ್ಯಾಪಾರ ಶಾಖೆ, ವಲಸೆರಾಜ್ಯಗಳ ಶಾಖೆ, ಸಾರ್ವಜನಿಕ ಆರೋಗ್ಯ ಶಾಖೆ, ಯುದ್ಧ ಶಾಖೆ, ಜನ ಆಡಳಿತದ ಶಾಖೆ ಮುಂತಾದ ವಿಭಾಗಗಳು ಇದ್ದು ವು. ಒಂದು ಶ್ರೇಷ್ಠ ನ್ಯಾಯಾಸ್ಥಾನವಿತ್ತು ; ಅದರಲ್ಲಿ ಅನೇಕ ನ್ಯಾಯಾಧೀಶರಿರುತ್ತಿದ್ದರು. ಈ ಸಾಮ್ರಾಜ್ಯಾಂತರ್ಗತ ರಾಷ್ಟ್ರದಲ್ಲಿ ಇಷ್ಟು ಸುವ್ಯವಸ್ಥಿತ ಆಡಳಿತ ಪದ್ದತಿ ಇದ್ದುದು ಒಂದು ಕೌತುಕ, ಅದರ ಮುಖ್ಯ ಉದ್ಯಮವು ಚೀನಾ ಮತ್ತು ಇಂಡಿಯಾ ದೇಶಗಳೊ ಡನೆ ವ್ಯಾಪಾರ, ಅದರ ಶ್ರೇಷ್ಠ ಆಡಳಿತ ನಡೆಸಿದವರಲ್ಲಿ ಮಹಾರಾಣಿ ಸಹಿತ ಒಬ್ಬಳು
ವಿಜಯನಿಗೂ ಮಜಸಹಿತರಿಗೂ ನಡೆದ ಯುದ್ದವು ಅತಿ ಭಯಂಕರವಾಗಿತ್ತು. ಮಜವಹಿತರೇ ಗೆದ್ದರೂ ಆ ವಿಜಯೋತ್ಸವದಲ್ಲೇ ಹೊಸ ಯುದ್ಧಗಳ ಬೀಜ ಅಡಗಿತ್ತು. ಶೈಲೇಂದ್ರ ಮನೆತನದ ನಾಶ ದಿಂದ ಸುಮಾತ್ರ ಮತ್ತು ಮಲಕ್ಕಗಳಲ್ಲಿ ಇತರ ರಾಜ್ಯಗಳು ಮುಖ್ಯವಾಗಿ ಅರಬ್ಬಿ ಮತ್ತು ಮುಸ್ಲಿಂ